ವಚನಗಳ ಸಂರಕ್ಷಕ ಮಡಿವಾಳ ಮಾಚಿದೇವರು: ಗುರಲಿಂಗಪ್ಪ

0
16

ಶಹಾಬಾದ: ಶರಣರ ಮುಖ್ಯವಾದ ಆಭರಣಗಳಾದ ವಚನಗಳನ್ನು ಸಂರಕ್ಷಿಸಿದ ಶರಣರೆಂದರೆ ಮಡಿವಾಳ ಮಾಚಿದೇವರು ಎಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.

ಅವರು ಮಂಗಳವಾರ ನಗರಸಭೆಯಲ್ಲಿ ಏರ್ಪಡಿಸಲಾಗಿದ್ದ ’ಶರಣ ಮಡಿವಾಳ ಮಾಚಿದೇವರ ಜಯಂತಿ’ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ವಚನಗಳು ಶರಣರ ಅನುಭಾವದ ನುಡಿಗಳ ಸಾಹಿತ್ಯ.ಅದನ್ನು ತಮ್ಮ ಜೀವನದ ಹಂಗನ್ನು ತೊರೆದು ಸಂರಕ್ಷಿಸಿದ ಕೀರ್ತಿ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆ. ಅವರು ಸಂರಕ್ಷಿಸಿದ ವಚನಗಳನ್ನು ನಾವು ನಿವೆಲ್ಲರೂ ಅಧ್ಯಯನ ಮಾಡುವಂತಾಗಿದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಜರುಗಿದ ಹೋರಾಟ ಇಡೀ ವಿಶ್ವದಲ್ಲಿಯೇ ಅದ್ಭುತವಾದದ್ದು. ಅದರಲ್ಲಿ ಮಡಿವಾಳ ಮಾಚಿದೇವ ಶರಣರು, ಬಟ್ಟೆ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದರು. ತಮ್ಮ ಅನುಭಾವ, ಸಮಾಜಮುಖಿ ಚಿಂತನೆಯುಳ್ಳ ಅನೇಕ ವಚನಗಳನ್ನು ರಚಿಸಿ, ವಚನ ರಕ್ಷಿಸುವಲ್ಲಿ ತಮ್ಮದೇ ಆದ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಮಾತನಾಡಿ, ಮಾಚಿದೇವರು ಸಮಾಜದಲ್ಲಿನ ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ, ಅಧರ್ಮ,ಅನೀತಿ,ಶೋ?ಣೆಯಂತಹ ಮುಂತಾದ ಸಾಮಾಜಿಕ ಅನಿ?ಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುವ ಮೂಲಕ ಸಮಾಜವನ್ನು ಸುಚಿಗೊಳಿಸಿದ್ದಾರೆ. ಕಾಯಕ ನಿ?ಗೆ ಮಾದರಿಯಾಗಿ, ಮಾರ್ಗದರ್ಶಕರಾಗಿ, ಸಾಮಾಜಿಕ ಹೊಣೆಗಾರಿಕೆ ಅರಿತು ದುಡಿದ ಮಹಾನ ಚೇತನವಾಗಿದ್ದಾರೆ. ಅವರ ವಚನಗಳಲ್ಲಿ ತಾವು ಕಟ್ಟಿಕೊಟ್ಟ ಶುದ್ಧ, ಸಿದ್ಧ ಬದುಕಿನಿಂದ ಆದ ಅನುಭವದ ನುಡಿಗಳಿವೆ ಎಂದರು.
ಎಇಇ ಶರಣು ಪೂಜಾರಿ ಮಾತನಾಡಿ, ಮಡಿವಾಳ ಮಾಚಿದೇವರ ಬದುಕೇ ಒಂದು ಸಂದೇಶವಾಗಿದೆ. ಅವರು ನೀಡಿರುವ ವಚನಗಳನ್ನು ನಾವು ಅಳವಡಿಸಿಕೊಂಡರೆ ಬದಕು ಹಸನಾಗುತ್ತದೆ ಎಂದು ನುಡಿದರು.

ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ,ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ,ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ಆರೋಗ್ಯ ನಿರೀಕ್ಷಕರಾದ ಶಿವರಾಜಕುಮಾರ, ಶರಣು, ರಾಜೇಶ, ರಘುನಾಥ ನರಸಾಳೆ ಸೇರಿದಂತೆ ಮಡಿವಾಳ ಸಮಾಜದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here