ಶಹಾಬಾದ: ಕೇಂದ್ರ ಸರ್ಕಾರದ ೨೦೨೨ನೇ ಸಾಲಿನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಯಾವುದೇ ನಿರೀಕ್ಷೆ ಇಲ್ಲದ ನಿರಾಶಾದಾಯಕ ಬಜೆಟ್ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಹೇಳಿದರು.
ಅವರು ಬಜೆಟ್ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರ್ಕಾರ ದಿವಾಳಿ ಬಜೆಟ್ ಮಂಡಿಸಿದೆ. ದೇಶದ ಇತಿಹಾಸದಲ್ಲಿ ಇಂತಹ ನಿರುತ್ಸಾಹದ ಬಜೆಟ್ ನೋಡಿಲ್ಲ. ಅಚ್ಛೇದಿನ್ ಎಂಬ ಮರೀಚಿಕೆಯನ್ನು ಇನ್ನೂ ೨೫ ವ? ಮುಂದಕ್ಕೆ ದೂಡಿದೆ. ನಿರುದ್ಯೋಗ ಮತ್ತು ಹಣದುಬ್ಬರದಿಂದ ತತ್ತರಿಸುತ್ತಿರುವ ಸಾಮಾನ್ಯ ಜನರಿಗೆ ಬಜೆಟ್‌ನಲ್ಲಿ ನೀಡಿರುವ ಕೊಡುಗೆ ಶೂನ್ಯ. ದೊಡ್ಡ ಮಾತುಗಳನ್ನಾಡುವ ಸರ್ಕಾರ ಮುಖ್ಯವಾಗಿ ಏನನ್ನೂ ಮಾಡದೆ ಸೋತಿದೆ. ೨ ಕೋಟಿ ಎಂದು ಉದ್ಯೋಗ ನೀಡುತ್ತೆನೆ ಎಂದು ಸುಳ್ಳು ಹೇಳಿದವರು ಇಂದು ಉದ್ಯೋಗ ಸೃಷ್ಠಿಸುವಲ್ಲಿ ಸೋತಿದ್ದಾರೆ.ರಸಗೊಬ್ಬರ ಸಬ್ಸಿಡಿಯನ್ನು ಕಡಿತಗೊಳಿಸುವ ಮೂಲ ರೈತರ ವಿರೋಧಿಯಾಗಿ ಕೆಲಸ ಮಾಡಿದೆ.
ಮಧ್ಯಮ ವರ್ಗಕ್ಕೆ ಯಾವುದೇ ತೆರಿಗೆ ವಿನಾಯಿತಿ ನೀಡಿಲ್ಲ. ಬಜೆಟ್‌ನಲ್ಲಿ ಜನ ಸಾಮಾನ್ಯರಿಗೆ ಏನನ್ನೂ ನೀಡದೆ ಇದು ತೀವ್ರ ನಿರಾಶಾದಾಯಕ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ೨೦೨೨-೨೩ ನೇ ಸಾಲಿನ ಬಜೆಟ್ ವೇತನ ಪಡೆಯುವ ನೌಕರರು, ಮಧ್ಯಮ ವರ್ಗದವರಿಗೆ ನಿರಾಶಾದಾಯಕ ಬಜೆಟ್ ಎಂದು ಹೇಳಿದರು.