ಸುಳ್ಳು ವಿಡಿಯೋ ಚಿತ್ರಿಸಿ ಬ್ಲಾಕ್ ಮೇಲ್ ಗೆ ಯತ್ನದ ಆರೋಪ: ಕ್ರಮಕ್ಕೆ ಆಗ್ರಹ

0
15

ಕಲಬುರಗಿ: ಕುಟುಂಬದ ಜಗಳವನ್ನು ನಕಲಿ ವಿಡಿಯೋ ಚಿತ್ರಿಕರಿಸಿ ದೊಡ್ಡಮಟ್ಟದ ಹಣದ ಆಮೀಷವೊಡ್ಡಿ ಮಹಿಳೆಗೆ ನಿರಂತರ ಕಿರುಕುಳ ನೀಡುತ್ತಿರುವ ಖಾಸಗಿ ಸಾಮಾಜಿಕ ಮಾಧ್ಯಮದ ಚಾಲನ್‌ವೊಂದರ ಸಂಚಾಲಕರಾದ ಸೇರಿ ಇತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನುಜಹತ್ ಸುಲ್ತಾನ್ ಅವರು ಆಗ್ರಹಿಸಿದ್ದಾರೆ

ನಗರದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಫೇಸ್‌ಬುಕ್ ಹಾಗೂ ಯೂಟ್ಯೂಬ್ ಚಾನೆಲ್‌ಗಳು ಸುಳ್ಳು ವಿಡಿಯೋ ಸೃಷ್ಟಿಸಿ ಹಣ ಲಪಟಾಯಿಸುವಂತಹ ಕೃತ್ಯಗಳು ಮಾಡುತ್ತಿದ್ದಾರೆ. ಈ ಕುರಿತು ಮಹಿಳಾ ಪೊಲೀಸ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ನೀಡಿದ್ದೇನೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಮಾನ್ಯತೆ ಪಡೆಯದ ಅವರುಗಳ ಚಾನೆಲ್ ಹಾಗೂ ಪೇಜ್‌ಗಳನ್ನು ರದ್ದುಪಡಿಸಬೇಕೆಂದು ಪಟ್ಟು ಹಿಡಿದು ಒತ್ತಾಯಿಸಿದರು.

Contact Your\'s Advertisement; 9902492681

ಈ ಕುರಿತು ನನ್ನ ಮೇಲೆ ವೈಯಕ್ತಿಕ ಹರಣ ಮಾಡಿದ್ದರಿಂದ ಅವರ ವಿರುದ್ಧ ಜನೆವರಿ ೮ ರಂದು ನಗರ ಮಹಿಳಾ ಪೊಲೀಸ ಠಾಣೆಯಲ್ಲಿ ಪ್ರಮುಖ ಆರೋಪಿಗಳಾದ ವಸೀಂ ಸಲೀಂ ಗೌಂಡಿ( ಗುಲಬರ್ಗಾ ಹೆಡ್‌ಲೈನ್ಸ್), ಮೋಸಿನ್ ಅಹ್ಮದ್ (ಗುಲಬರ್ಗಾ ೨೪), ಮೋಸೀನ್ ಶಾಬಾದ (ಗುಲಬರ್ಗಾ ಟೈಮ್ಸ್) ಹಾಗೂ ರಾಪಿಯಾ ಶೀರಿನ್ ಖಾನ ( ಗುಲಬರ್ಗಾ ನ್ಯೂಸ್) ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸಿ ಅವರ ಮೇಲೆ ಕ್ರಮ ಕೈಗೊಂಡಿಲ್ಲ, ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕು, ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ಸಾಮಾಜಿಕ ಮಾಧ್ಯಮ ಚಾನೆಲ್ ಹೊಂದಿದ ನಾಲ್ವರೂ ಸಹ ನಿತ್ಯ ಕಲಬುರಗಿ ನಗರದಲ್ಲಿ ಜನಸಾಮಾನ್ಯರ ವಿಡಿಯೋಗಳನ್ನು ಸೃಷ್ಟಿಸಿ ನ್ಯಾಯ ಕೊಡಿಸುವ ಆಮೀಷವೊಡ್ಡಿ ಅವರಿಂದ ಸಾವಿರಾರು ರೂಪಾಯಿಗಳು ದೋಚುತ್ತಿದ್ದಾರೆ. ಈ ಪ್ರಕರಣ ಕುರಿತು ಗಂಭೀರ ಪರಿಗಣಿಸಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ನುಜಹತ್ ಸುಲ್ತಾನ್ ಅವರು ಆಗ್ರಹಿಸಿದರು.

ಈ ಕುರಿತು ನಗರ ಮಹಿಳಾ ಪೊಲೀಸ್ ಠಾಣೆಗೆ ಸಂಪರ್ಕಿಸಿದಾಗ ಪ್ರಕರಣ ದಾಖಲಿಸಿ, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here