ಸಕಾಲಕ್ಕೆ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ಗುಣಮುಖ: ಡಾ. ಹಾಳಮಳಿ

0
11

ಆಳಂದ: ಹಿಂದಿನಂತೆ ಕ್ಯಾನ್ಸರ್ ರೋಗದ ಬಗ್ಗೆ ಯಾವುದೇ ರೀತಿ ಭಯ ಮತ್ತು ಆತಂಕ ಪಡೆದೆ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಂಡರೆ ಗುಣಮುಖವಾಗಲು ಸಾಧ್ಯವಿದೆ, ಆರಂಭದಲ್ಲೇ ಪತ್ತೆ ಚಿವುಟಿ ಹಾಕಲು ವೈದ್ಯರನ್ನು ಸಂಪರ್ಕಿಸಬೇಕು ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ| ಮಹಾಂತಪ್ಪ ಹಾಳಮಳಿ ಅವರು ಹೇಳಿದರು.

ಪಟ್ಟಣದ ಹನುಮಾನ ದೇವಸ್ಥಾನದ ರಂಗಮಂಟದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ಸಪ್ತಾಹ ಆಚರಣೆ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಕ್ಯಾನ್ಸರ್ ಮಾರಕ ರೋಗದ ಬಗ್ಗೆ ಭಯ ಪಡುವಂತ್ತಿಲ್ಲ. ಆರಂಭದಲ್ಲೇ ಈ ರೋಗವನ್ನು ಪತ್ತೆ ಹಚ್ಚಬೇಕು. ಕ್ಯಾನ್ಸರ್ ದೇಹದ ಯಾವ ಭಾಗದಲ್ಲೂ ಗಡ್ಡೆ ಆಗಬಹುದು. ಇದನ್ನು ಹೆದರದೆ ತಜ್ಞ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಹಾಗೂ ಅಗತ್ಯ ಬಿದ್ದಲ್ಲಿ ಚಿಕಿತ್ಸೆ ಪಡೆಯಬೇಕು. ಕ್ಯಾನ್ಸರ್ ಮೂಲ ತಂಬಾಕು ಸೇನೆಯಂತ ಮಾದಕ ವಸ್ತುಗಳಿಂದ ಮತ್ತು ಮಧ್ಯಪಾನ ಸೇರಿ ದುಶ್ಚಟಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ತಮ್ಮ ಆರೋಗ್ಯದ ರಕ್ಷಣೆಗಾಗಿ ಮುಂಜಾಗೃತೆ ಮತ್ತು ಸಕಾಲಕ್ಕೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ಮುಂದಾಗಿ ನೆರೆ ಹೊರೆಯವರಿಗೆ ಆರೋಗ್ಯ ಆಸ್ಪತ್ರೆಯ ವೈದ್ಯರನ್ನು ಕಾಣುವಂತೆ ಹೇಳಬೇಕು ಎಂದು ಅವರು ಸಲಹೆ ನೀಡಿದರು.

ಎನ್‌ಸಿಡಿ ಆಪ್ತಸಮಾಲೋಚಕ ಕಲ್ಯಾಣಿ ಖಜೂರಿ ಅವರು ಮಾತನಾಡಿ, ಪ್ರತಿವರ್ಷದಂತೆ ವಿಶ್ವ ಕ್ಯಾನ್ಸರ್ ದಿನಾಚರಣೆ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಕ್ಯಾನ್ಸರ್ ಲಕ್ಷಣಗಳು ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯವಿದೆ. ೪೦ ವರ್ಷದ ಬಳಿಕ ಮಹಿಳೆ, ಅಥವಾ ಪುರುಷರು ವರ್ಷಕ್ಕೊಮ್ಮೆ ತಪಾಸಣೆ ಮಾಡಿಕೊಳ್ಳಬೇಕು. ಇದರಿಂದ ಆರೋ ಪತ್ತೆಯಾಗುತ್ತದೆ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ವಿಜಯಲಕ್ಷ್ಮೀ ನಂದಿಕೋಲಮಠ ಅವರು ಮಾತನಾಡಿ, ಆರೈಕ್ಯ ಅಂತರವನ್ನು ಮುಚ್ಚಿ ಎಂಬ ಈ ವರ್ಷದ ಘೋಷ್ಯವಾಕ್ಯವನ್ನು ೨೦೨೪ರ ವರೆಗೆ ಕ್ಯಾನ್ಸರ್ ನಿರ್ಮೂಲನೆಗೆ ಜಾಗೃತಿ ಆಂದೋಲನ ಹಮ್ಮಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ.

ಈ ನಿಟ್ಟಿನಲ್ಲಿ ನಡೆಯುವ ಕಾರ‍್ಯಕ್ರಮದ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಕ್ಯಾನ್ಸರ ಹೆಚ್ಚಾಗಿ ಮಹಿಳೆಯರಲ್ಲಿ ಗರ್ಭಾಶಯ ಕ್ಯಾನ್ಸರ್, ರಕ್ತ ಮತ್ತು ಗರ್ಭದ ಕಂಠಕ್ಕೆ ಬರುವ ಸಂಭವ ಹೆಚ್ಚಿರುತ್ತದೆ. ಅನಿಯಮಿತ ರಕ್ತ ಸಾವ್ರವಾಗುತ್ತಿದ್ದರೆ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಈ ರೋಗಕ್ಕೆ ವಯಸ್ಸಿನ ಮಿತಿಯಿರುವುದಿಲ್ಲ ಇದನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆಯನ್ನು ಪಡೆಯಬೇಕು ಸೂಕ್ತ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮಹಾದೇವಿ ವಚ್ಛೆ ಅವರು ಮಾತನಾಡಿ, ಮಹಿಳೆರು ಮತ್ತು ಮಕ್ಕಳ ಆರೋಗ್ಯ ರಕ್ಷಣೆ ಸೇರಿ ಇಲಾಖೆಯಿಂಸ ಸೌಲಭ್ಯಕುರಿತು ಮಾಹಿತಿ ನೀಡಿದರು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಂಗೀತಾ, ಐಸಿಟಿಸಿ ಆಪ್ತಸಮಾಲೋಚಕ ಸಿದ್ಧಣ್ಣಾ, ಆರೋಗ್ಯ ನಿರೀಕ್ಷಣಾಧಿಕಾರಿ ಕರಬಸಪ್ಪ ಮತ್ತು ಕೈಲಾಸ್, ಆರೋಗ್ಯ ಸುರಕ್ಷಣಾಧಿಕಾರಿ ಇಂದಿರಾ, ಮಂಜುಳಾ, ಭಾಗ್ಯವಂತಿ, ಹೇಮಾ, ವಂದನಾ ಅಂಗನವಾಡಿ ಕಾರ‍್ಯಕರ್ತೆ ಚಂದಕಲಾ ಬಿಂದಗೆ, ಗಂಗಾಂಬಿಕ ಪಾಟೀಲ, ಸುವರ್ಣ ಕುಂಬಾರ ಮತ್ತು ಶ್ರೀದೇವಿ ಚಟ್ಟಿ ಸೇರಿ ಬಡಾವಣೆಯ ನಾಗರಿಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here