ಕಲಬುರಗಿ: ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಸೂರ್ಯ ಚಂದ್ರ ಇರುವವರೆಗೂ ಭಾರತದ ಸಂವಿಧಾನದ ಮೂಲಕ ನಮ್ಮ ಮಧ್ಯೆದಲ್ಲಿ ಜೀವಂತವಾಗಿರುತ್ತರೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ಹೇಳಿದರು.
ನಗರದ ಡಾ. ಎಸ್. ಎಂ. ಪಂಡಿತ ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ವಿಠ್ಠಲ್ ವಗ್ಗನ್ ರಚಿಸಿರುವ ’ಮರೆಯದ ಮಾಣಿಕ್ಯ ಡಾ. ಬಿ.ಆರ್. ಅಂಬೇಡ್ಕರ್’ ಗ್ರಂಥ ಲೋಕಾರ್ಪಣೆ ಹಾಗೂ ಅನ್ವರ್ಥ ಸಾಧಕ ರತ್ನ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಕೆಆರ್‌ಡಿಬಿ ವತಿಯಿಂದ ಕಲಬುರಗಿಯ ಜಗತ್ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿ ನವೀಕರಣಕ್ಕಾಗಿ ೮೫ ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಸಾಂಗ್ಲಿಯ ಮಿಲಿಂದ ಆರ್. ಸರಕಾರ್ ಗ್ರಂಥ ಬಿಡುಗಡೆ ಮಾಡಿದರು. ವರಜ್ಯೋತಿ ಭಂತೆ ಸಾನ್ನಿಧ್ಯ ವಹಿಸಿದ್ದರು.
ಸಣ್ಣ ನೀರವಾರಿ ಇಲಾಖೆಯ ಅಭಿಯಂತರ ಸುರೇಶ ಎಲ್. ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಗ್ರಂಥ ಕುರಿತು ಐ.ಎಸ್. ವಿದ್ಯಾಸಾಗರ ಮಾತನಾಡಿದರು. ಬೆಂಗಳೂರು ನಗರ ಜಿಲ್ಲೆಯ ಅಬಕಾರಿ ಉಪ ಆಯಕ್ತ ಫಕಿರಪ್ಪ ಛಲವಾದಿ, ಸಾರ್ವಜನಿಕ ಗ್ರಂಥಾಲಯದ ಉಪನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಅತಿಥಿಗಳಾಗಿದ್ದರು.
ಇದೇವೇಳೆಯಲ್ಲಿ ಅಶೋಕ ಅಂಬಲಗಿ, ಸದಾಶಿವ ಡಿ. ಬನ್ನೂರ, ರಮೇಶ ಪಟ್ಟೇದಾರ, ವಿಶಾಲ ದರ್ಗಿ ಅವರಿಗೆ ಅನ್ವರ್ಥ ಸಾಧಕ ರತ್ನ ಪುರಸ್ಕಾರ ಕೊಡಮಾಡಲಾಯಿತು. ಸುರೇಶ ಬಡಿಗೇರ ನಿರೂಪಿಸಿದರು. ಲೇಖಕ ವಿಠ್ಠಲ್ ವಗ್ಗನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.