ಅಲ್ಲಮ ಪ್ರಭು ಆಧ್ಯಾತ್ಮ ಜಗತ್ತಿನ ವಿಸ್ಮಯ: ಪೀರಪಾಶಾ

0
89

ಶಹಾಬಾದ:ಅಲ್ಲಮ ಪ್ರಭು ಆಧ್ಯಾತ್ಮ ಜಗತ್ತಿನ ವಿಸ್ಮಯ.ಸಾಧನೆಯ ದೃಷ್ಟಿಯಿಂದ ದೇಶ, ಕಾಲಗಳನ್ನು ಮೀರಿ ವಿಶ್ವದ ಮಹಾನ್ ವಿಭೂತಿಗಳ ಸಾಲಿನಲ್ಲಿ ನಿಲ್ಲಬಲ್ಲ ಮಹಾನುಭವಿ ಎಂದು ಕೂಡಲ ಸಂಗಮ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಪೀರಪಾಶಾ ಹೇಳಿದರು.

ಅವರು ರವಿವಾರ ಭಂಕೂರ ಗ್ರಾಮದ ಶಾಂತನಗರದ ಬಸವ ಸಮಿತಿಯಲ್ಲಿ ಆಯೋಜಿಸಲಾದ ಅಲ್ಲಮಪ್ರಭು ಜಯಂತಿ ಹಾಗೂ ಯುಗಾದಿ ಹಬ್ಬದ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.

Contact Your\'s Advertisement; 9902492681

ಬಸವಣ್ಣನವರದು ಭಕ್ತಿಮಾರ್ಗ.ಅಲ್ಲಮನದು ಅರಿವಿನ ಮಾರ್ಗ.ಅನುಭಾವದರಿವಿನಲ್ಲಿ ಲೋಕಕಲ್ಯಾಣವನ್ನು ಕಂಡವರು ಅಲ್ಲಮ ಪ್ರಭುದೇವರು.ತಮ್ಮ ಆತ್ಮ ಉದ್ಧಾರದ ಜತೆಗೆ ವ್ಯಕ್ತಿ ಶುದ್ಧಿಯ ಮೂಲಕ ಸಮಾಜದ ಶುದ್ಧಿಗೆ ತೊಡಗಿದ ಅವರು ತನು,ಮನ ಶಿದ್ಧಿಗೆ ಆದ್ಯತೆ ನೀಡಿದವರು.ಸರ್ವಸಮಾನತೆಯ, ಸ್ವಾವಲಂಬನೆಯ ಬದುಕಿಗೆ ಸತ್ಯ ಶುದ್ಧ ಕಾಯಕ ಮತ್ತು ದಾಸೋಹ ಜಾರಿಗೊಳಿಸಿದರು. ಬಸವ ಧರ್ಮ ಅಪ್ಪಿಕೊಳ್ಳುವ ಹಾಗೂ ಒಪ್ಪಿಕೊಳ್ಳುವ ಧರ್ಮವಾಗಿದ್ದು, ಅದರ ಸಾರವನ್ನು ನಾವೆಲ್ಲರೂ ಅನುಭವಿಸಿದ್ದೆ ಆದರೆ ಎಲ್ಲರೂ ಬದುಕಿನಲ್ಲಿ ಸಂತೋಷವನ್ನು ಕಾಣಬಹುದು ಎಂದರು.

ಶಿಕ್ಷಕ ಮಲ್ಲಿನಾಥ ಪಾಟೀಲ ಮಾತನಾಡಿ, ಅಲ್ಲಮ ಪ್ರಭುವಿನ ವಚನಗಳು ಅನುಭಾವದ ರತ್ನ ಗಣಿಗಳು.ಮೊಗೆದಷ್ಟು ಆಳ, ಆಳಕ್ಕೆ ಆಳ. ವಿಸ್ತಾರಕ್ಕೆ ವಿಸ್ತಾರ. ಎತ್ತರಕ್ಕೆ ಎತ್ತರ.ಮಾತಿಗೆ ಮೀರಿದ ಅನುಭೂತಿ ಅವರ ವಚನಗಳಲ್ಲಿ ಕಾಣಬಹುದು.ಅಲ್ಲಮಪ್ರಭುವಿನ ಜ್ಞಾನ ಬಹುದೊಡ್ಡದು.ಆತನ ಅನುಭಾವದ ಎತ್ತರಕ್ಕೆ ಏರಿದವರು ಬಹಳ ವಿರಳ. ಶರಣ ದರ್ಶನದ ಪ್ರಕಾರ ಮನುಷ್ಯ ಸಾಧಿಸಬಹುದಾದ ಆಧ್ಯಾತ್ಮಿಕ ಜಗತ್ತಿನ ಅತ್ಯಂತ ಉನ್ನತಿ ಸಾಧಿಸಿದ ಮಹಾಂತ.ಅಲ್ಲಮ ಪ್ರಭುದೇವರ ಆಧ್ಯಾತ್ಮಿಕ ಜ್ಞಾನ,ಅನುಭಾವ, ವೈರಾಗ್ಯ ಜೀವನ ಮನುಕುಲಕ್ಕೆ ಆದರ್ಶವಾಗಿವೆ ಎಂದು ಹೇಳಿದರು.

ಬಸವ ಸಮಿತಿ ಅಧ್ಯಕ್ಷ ಅಮೃತ ಮಾನಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುಗಾದಿಯೆಂದರೆ ಹೊಸವ?ದ ಆರಂಭದ.ಇಂದಿನಿಂದ ವಸಂತ ಮಾಸ ಪ್ರಾರಂಭವಾಗುತ್ತದೆ. ಬೇವು-ಬೆಲ್ಲ ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಗಿಡ ಮರಗಳು ಹೊಸ ಚಿಗುರು ಪಡೆಯಲು ಪ್ರಾರಂಭವಾಗುತ್ತದೆ. ಈ ಹೊಸ ವ?ವನ್ನು ಬೇವು-ಬೆಲ್ಲ ತಿನ್ನುವುದರ ಮೂಲಕ ಜೀವನದಲ್ಲಿ ಸಿಹಿ-ಕಹಿ ಎರಡೂ ಸಮಾನವಾಗಿರುವುದರ ಸಂಕೇತವಾಗಿ ಸ್ವೀಕರಿಸಬೇಕೆಂಬ ಸಂದೇಶವೇ ಈ ಯುಗಾದಿ ಎಂದರು. ಉಪನ್ಯಾಸಕ ಡಾ.ಈರಣ್ಣ ಇಟಗಿ ವೇದಿಕೆಯ ಮೇಲಿದ್ದರು.

ರೇವಣಸಿದ್ದಪ್ಪ ಮುಸ್ತಾರಿ ನಿರೂಪಿಸಿ, ವಂದಿಸಿದರು. ಗುರಲಿಂಗಪ್ಪ ಪಾಟೀಲ ಸ್ವಾಗತಿಸಿದರು. ಬಸವ ಸಮಿತಿ ಪದಾಧಿಕಾರಿಗಳಾದ ಶಿವಶರಣಪ್ಪ ಜಟ್ಟೂರ್, ಚಂದ್ರಕಾಂತ ಅಲಮಾ, ಶಾಂತಪ್ಪ ಬಸಪಟ್ಟಣ, ಹಣಮಂತರಾಯ ದೇಸಾಯಿ, ಲಕ್ಷ್ಮಣ ಬಾಲಗೊಂಡ, ಹೆಚ್.ವಾಯ್.ರಡ್ಡೇರ್,ಶಿವರಾಜ ಹಡಪದ, ಮಲ್ಲಿಕಾರ್ಜುನ ಘಾಲಿ, ಅಮರಪ್ಪ ಹೀರಾಳ, ಈರಣ್ಣ ಸುತಾರ,ದತ್ತಪ್ಪ ಕೋಟನೂರ್, ಮಲ್ಲಿಕಾರ್ಜುನ ಹಿರೆನೂರ್ ಇತರರು ಇದ್ದರು.\

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here