ಶಹಾಬಾದ: ತಾಲೂಕಾಡಳಿತ ಮತ್ತು ನಗರಸಭೆಯಿಂದ ಎಪ್ರಿಲ್ ೧೪ ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೧ನೇ ಜಯಂತಿ ಹಾಗೂ ಎಪ್ರಿಲ್ ೫ ರಂದು ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ ಅವರ ೧೧೫ನೇ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.
ತಹಸೀಲ್ದಾರ ಸುರೇಶ ವರ್ಮಾ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ , ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ವಿವಿಧ ಸಂಘಟನೆಗಳ ಮುಖಂಡರು, ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ದಸಂಸ ಮುಖಂಡ ಕೃಷ್ಣಪ್ಪ ಕರಣಿಕ್ ಮಾತನಾಡಿ,ಎರಡು ವರ್ಷದಿಂದ ಕೋವಿಡ್ ಇರುವ ಕಾರಣ ಜಯಂತಿ ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ.ಆದ್ದರಿಂದ ಈ ಬಾರಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದರು. ತಾಲೂಕಾಡಳಿತ ಮತ್ತು ನಗರಸಭೆಯಿಂದ ಆಚರಿಸಬೇಕೋ ಅಥವಾ ಸಮಾಜದಿಂದ ಜಯಂತಿಯನ್ನು ಆಚರಿಸಬೇಕೋ ಎಂದು ತಹಸೀಲ್ದಾರರು ಕೇಳಿದಕ್ಕೆ ಮುಖಂಡರು ಸಮಾಜದ ವತಿಯಿಂದಲೇ ಆಚರಿಸುತ್ತೆವೆ ಎಂದರು.
ನಂತರ ತಹಸೀಲ್ದಾರರು ಮಾತನಾಡಿ, ಎಪ್ರಿಲ್ ೧೪ ರಂದು ಅಂಬೇಡ್ಕರ್ ಅವರ ಮತ್ತು ಎಪ್ರಿಲ್ ೫ ರಂದು ಬಾಬು ಜಗಜೀವನರಾಮ ಅವರ ಜಯಂತಿಯನ್ನು ಎಂದಿನಂತೆ ಸರಕಾರಿ ಕಚೇರಿಗಳಲ್ಲಿ ಸರಳವಾಗಿ ಆಚರಿಸಲಾಗುತ್ತದೆ. ಮುಂದಿನ ದಿನಾಂಕ ನಿಗದಿಪಡಿಸಿ ಸಮಾಜದಿಂದ ಜಯಂತಿಗಳನ್ನು ಅದ್ದೂರಿಯಾಗಿ ಆಚರಿಸಲು ತಿಳಿಸಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, ಯಾವುದೇ ಜಯಂತಿಗಳಾಗಲಿ ಎಲ್ಲಾ ಸಮಾಜದವರನ್ನು ಕರೆದು ಸಭೆ ನಡೆಸಬೇಕು.ಅಲ್ಲದೇ ಎಲ್ಲಾ ಜಯಂತಿಗಳಲ್ಲಿ ಎಲ್ಲಾ ಸಮಾಜದವರು ಭಾಗವಹಿಸುವಂತಾದರೆ ಜಯಂತಿಗೆ ಅರ್ಥ ಬರುತ್ತದೆ ಎಂದು ಹೇಳಿದರು.ಇದಕ್ಕೆ ಎಲ್ಲರೂ ಸಮ್ಮತಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗಿರೀಶ ಕಂಬಾನೂರ, ರಾಜೇಶ ಯನಗುಂಟಿಕರ, ನಾಗರಾಜ ಕರಣಿಕ್,ಪ್ರವೀಣ ರಾಜನ್,ಡಿ.ಡಿ.ಓಣಿ, ನಾಗಪ್ಪ ಬೆಳಮಗಿ, ಸ್ನೇಹಲ್ ಜಾಯಿ, ಬಸವರಾಜ ಮಯೂರ,ನರಸಿಂಹಲೂ ರಾಯಚೂರಕರ್,ಮಹಾದೇವ ತರನಳ್ಳಿ, ಪೂಜಪ್ಪ ಮೇತ್ರೆ, ಅಶೋಕ ತುತಾರೆ,ಸುಭಾಷ ಸಾಕ್ರೆ,ಸಂತೋಷ ಹುಲಿ, ಮಲ್ಲಣ್ಣ ಮಸ್ಕಿ, ಪಿಎಸ್‌ಐ ಸುವರ್ಣಾ ಮಲಶೆಟ್ಟಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.