ಶರಣಬಸವೇಶ್ವರ ವೆಂಚುರ್ ಉದ್ಘಾಟಿಸಿದ ರೇವೂರ: ಪರಿಸರ ರಕ್ಷಣೆಗೆ ಇ-ಬೈಕ್ ಬಳಸಿ

0
176

ಕಲಬುರಗಿ: ಪರಿಸರ ಮಾಲಿನ್ಯ ತಪ್ಪಿಸಿ ಉತ್ತಮ ವಾತಾವರಣ ಹೊಂದಲು ಮತ್ತು ಇಂಧನ ಹೊರೆಯನ್ನು ಕಡಿಮೆ ಮಾಡಲು  ಎಲೆಕ್ಟಿçಕಲ್ ದ್ವಿಚಕ್ರ ವಾಹನ (ಇ-ಬೈಕ್) ಬಳಕೆ ಮಾಡಬೇಕು ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕ್ರೆಡಲ್) ಅಧ್ಯಕ್ಷ ಚಂದು ಪಾಟೀಲ್ ಹೇಳಿದರು.

ನಗರದ ಜೇವರ್ಗಿ ರಸ್ತೆಯಲ್ಲಿ ಹೊಸದಾಗಿ ಯುಗಾದಿ ಹಬ್ಬ ಶನಿವಾರದಂದು ಆರಂಭಗೊAಡಿರುವ ಆಡಮ್ಸ್ ಇ ಬೈಕ್‌ಗಳ  ಶೋ ರೂಮ್  ಶರಣಬಸವೇಶ್ವರ ವೆಂಚುರ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರವು ನವೀಕರಿಸಬಹುದಾದ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಹಲವು ಪ್ರೋತ್ಸಾಹದಾಯಕ ಯೋಜನೆಗಳನ್ನು ಹಾಕಿಕೊಂಡಿದೆ ಎಂದರು.

Contact Your\'s Advertisement; 9902492681

ಪೆಟ್ರೋಲ್ ಬೈಕ್‌ಗಳ ಬಳಕೆಯಿಂದ ಆರ್ಥಿಕ ಹೊರೆ ಹೆಚ್ಚಾಗಲಿದೆ. ಪ್ರತಿ ಕಿಲೋಮೀಟರ್‌ಗೆ ಕೇವಲ ೨೦ ಪೈಸೆ ವೆಚ್ಚದಲ್ಲಿ ಇ-ಬೈಕ್ ಓಡಿಸಬಹುದಾಗಿದೆ. ಒಂದು ಸಲ ಚಾರ್ಜ್ ಮಾಡಿದರೆ, ೧೦೦ಕ್ಕೂ ಹೆಚ್ಚು ಕಿಮೀ ಓಡುತ್ತದೆ. ಪರಿಸರ ರಕ್ಷಣೆಗೂ ಪೂರಕವಾಗಿದೆ. ಅಲ್ಲದೆ ಲೈಸನ್ಸ್ ಬೇಕಾಗಿಲ್ಲ. ನೋಂದಣಿ ಬೇಕಾಗಿಲ್ಲ  ಎಂದು ಚಂದು ಪಾಟೀಲ್ ತಿಳಿಸಿದರು.

ಶೋ ರೂಂವನ್ನು ಕೆಕೆಆರ್‌ಡಿಬಿ ಅಧ್ಯಕ್ಷರು ಆಗಿರುವ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಉದ್ಘಾಟಿಸಿ,ಕರ್ನಾಟಕ ಮೂಲದ ಸ್ಟಾರ್ಟ್ಅಪ್ ಕಂಪನಿಯ ಉತ್ಪಾದನೆ ಮಾಡಿರುವ ಇ-ಬೈಕ್‌ಗಳು ಉತ್ತಮವಾಗಿವೆ. ನಮ್ಮವನ್ನು ನಾವು ಪ್ರೋತ್ಸಾಹಿಸಬೇಕು.  ಯುವಜನರು ಸಹ ವೆಚ್ಚ ಕಡಿಮೆ ಮಾಡಿಕೊಳ್ಳಲು ಇಂತಹ ಬೈಕ್ ಬಳಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಶಹಾಪುರ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಮೊದಲ ಗ್ರಾಹಕರಿಗೆ ಎಲೆಕ್ಟಿçಕ್ ಬೈಕ್ ಕೀಯನ್ನು  ಹಸ್ತಾಂತರಿಸಿದರು. ಬ್ಯಾಂಕ್ ಆಫ್  ಇಂಡಿಯಾ ಮುಖ್ಯ ವ್ಯವಸ್ಥಾಪಕರಾದ ಬಾಬುರಾವ ಸುಂಟನೂರಕರ್,  ಶರಣಬಸವೇಶ್ವರ ವೆಂಚುರ್ ನಿರ್ದೇಶಕರಾದ ಅಶೋಕ ಪಾಟೀಲ್ ಮತ್ತು ಶರಣು ಅರಕೇರಾ, ಪ್ರಮುಖರಾದ ಸೋಮಶೇಖರ ಗೋನಾಯಕ. ಪ್ರೊ.ಅಣ್ಣಾರಾವ ಪಾಟೀಲ್, ಡಾ.ಡಾ.ವಿಶಾಲಾಕ್ಷಿ ಕರಡ್ಡಿ, ಪತ್ರಕರ್ತರಾದ ಗಣೇಶ ಚಂದನಶಿವ, ಬಾಬುರಾವ ಯಡ್ರಾಮಿ, ಸೂರ್ಯಕಾಂತ ಜಮಾದಾರ, ರಮೇಶ ಬಳ್ಳಾ ಮೊದಲಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here