ಬೆಂಗಳೂರು: ಭಾರತದ ದೇಶೀಯ ಇಂಟರ್ನೆಟ್ ಪರಿಸರ ವ್ಯವಸ್ಥೆಯಾಗಿರುವ ಫ್ಲಿಪ್ ಕಾರ್ಟ್ ಗ್ರೂಪ್ ಇಂದು ಭಾರತದಲ್ಲಿ ಅಂತರ್ಗತವಾದ, ಸಮಾನ, ಸಶಕ್ತ ಮತ್ತು ಸುಸ್ಥಿರ ಸಮಾಜವನ್ನು ಸುವ್ಯವಸ್ಥಿತಗೊಳಿಸುವ ಉದ್ದೇಶದೊಂದಿಗೆ ಫ್ಲಿಪ್ ಕಾರ್ಟ್ ಫೌಂಡೇಶನ್ ಅನ್ನು ಸ್ಥಾಪಿಸಿರುವುದಾಗಿ ಘೋಷಣೆ ಮಾಡಿದೆ.
ತಂತ್ರಜ್ಞಾನ ಆಧಾರಿತವಾದ ವಾಣಿಜ್ಯ ಮಾದರಿಯ ಮೂಲಕ ಪರಿಸರ ವ್ಯವಸ್ಥೆಯನ್ನು ತನ್ನ ಪಾಲುದಾರರ ಅನುಕೂಲಕ್ಕೆ ಪೂರಕವಾದ ಅವಕಾಶಗಳನ್ನು ತರುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಗ್ರೂಪ್ ನ ಪ್ರಯತ್ನಗಳನ್ನು ಫೌಂಡೇಶನ್ ಮುಂದಕ್ಕೆ ಕೊಂಡೊಯ್ಯಲಿದೆ. ಸುಸ್ಥಿರವಾದ ಜೀವನೋಪಾಯಕ್ಕಾಗಿ ಹಾಗೂ ದುರ್ಬಲ ವರ್ಗದವರಿಗೆ ಅಂದರೆ ಹಿಂದುಳಿದ ವರ್ಗಗಳಿಒಗೆ ಬೆಳವಣಿಗೆಯ ಅವಕಾಶಗಳನ್ನು ಕಲ್ಪಿಸಲು ತಳಮಟ್ಟದಲ್ಲಿ ಸಾಂಸ್ಥಿಕ ಪ್ರಭಾವವನ್ನು ಚಾಲನೆ ಮಾಡುವ ಉದ್ದೇಶದಿಂದ ಅಂತರ್ಗತವಾದ ಬೆಳವಣಿಗೆಯನ್ನು ಆರಂಭಿಸಲು ಇದು ನೆರವಾಗುತ್ತದೆ.
ಈ ಫೌಂಡೇಶನ್ ಅನ್ನು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ.ವೀರೇಂದ್ರ ಕುಮಾರ್ ಅವರು ಫೌಂಡೇಶನ್ ಅನ್ನು ಅಧಿಕೃತವಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಸಚಿವ ಭಾನು ಪ್ರತಾಪ್ ಸಿಂಗ್ ವರ್ಮ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಸಾಧ್ವಿ ನಿರಂಜನ ಜ್ಯೋತಿ, ಫ್ಲಿಪ್ ಕಾರ್ಟ್ ಗ್ರೂಪ್ ನ ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ರಜನೀಶ್ ಕುಮಾರ್, ಫ್ಲಿಪ್ ಕಾರ್ಟ್ ನ ಚೀಫ್ ಪೀಪಲ್ ಆಫೀಸರ್ ಕೃಷ್ಣ ರಾಘವನ್ ಸೇರಿದಂತೆ ಸರ್ಕಾರದ ಮತ್ತು ಫ್ಲಿಪ್ ಕಾರ್ಟ್ ನ ಇನ್ನಿತರ ಅಧಿಕಾರಿಗಳು ಇದ್ದರು.
ಫ್ಲಿಪ್ ಕಾರ್ಟ್ ಫೌಂಡೇಶನ್ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಸರ್ಕಾರಿ ಸಂಸ್ಥೆಗಳು, ಎನ್ ಜಿಒಗಳು ಹಾಗೂ ಸಮುದಾಯದ ಪ್ರಮುಖರೊಂದಿಗೆ ವೈವಿಧ್ಯಮಯ ಪಾಲುದಾರಿಕೆಗಳೊಂದಿಗೆ ಸಹಕರಿಸುವ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವ ಕೆಲಸವನ್ನು ಮಾಡುವ ಗುರಿಯನ್ನು ಹೊಂದಿದೆ. ಅವುಗಳೆಂದರೆ:
• ಉದ್ಯಮಶೀಲತೆ ಮತ್ತು ಜೀವನೋಪಾಯದ ಅವಕಾಶಗಳಿಗೆ ನಿರಂತರವಾದ ಬೆಳವಣಿಗೆಯ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಮಾಜದ ಹಿಂದುಳಿದ ಮತ್ತು ಕಡಿಮೆ ಪ್ರಾತಿನಿಧ್ಯದ ವರ್ಗಗಳಿಗೆ ಮಾರುಕಟ್ಟೆ ಪ್ರವೇಶವನ್ನು ಒದಗಿಸುವುದು.
• ಕೌಶಲ್ಯಾಭಿವೃದ್ಧಿ
• ಸಮುದಾಯ ಅಭಿವೃದ್ಧಿ ಮತ್ತು
• ಪರಿಸರ ಜವಾಬ್ದಾರಿ
ಗ್ರಾಮೀಣ ಪ್ರದೇಶಗಳ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದು ಮತ್ತು ಮಹಿಳೆಯರು ಹಾಗೂ ಇತರ ದುರ್ಬಲ ಸಮುದಾಯಗಳಿಗೆ ಬೆಳವಣಿಗೆಯ ಅವಕಾಶಗಳಿಗೆ ಸಮಾನವಾದ ಪ್ರವೇಶವನ್ನು ಒದಗಿಸುವ ಮೂಲಕ ಫ್ಲಿಪ್ ಕಾರ್ಟ್ ಫೌಂಡೇಶನ್ ಮುಂದಿನ ಒಂದು ದಶಕದಲ್ಲಿ 20 ಮಿಲಿಯನ್ ಜನರ ಜೀವನವನ್ನು ಧನಾತ್ಮಕವಾಗಿ ಪರಿಣಾಮ ಬೀರುವ ಗುರಿಯನ್ನು ಹೊಂದಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.ವೀರೇಂದ್ರ ಕುಮಾರ್ ಅವರು, “ಭಾರತದಲ್ಲಿ ಯಥೇಚ್ಛವಾದ ಅವಕಾಶಗಳು ಇರುವ ಈ ಸಂದರ್ಭದಲ್ಲಿ ಸಮಾನವಾದ ಬೆಳವಣಿಗೆಗೆ ಪೂರಕವಾದ ಅಭಿಯಾನದ ಅಗತ್ಯವಿದೆ.
ಈ ಅಭಿಯಾನಕ್ಕೆ ನೆರವಾಗಲು ಸಮಾಜದ ಹಿಂದುಳಿದ ವರ್ಗಗಳನ್ನು ದೇಶದ ಬೆಳವಣಿಗೆಯ ಕಥೆಯ ಭಾಗವಾಗಿಸಲು ಅವರಿಗೆ ಬೆಂಬಲವನ್ನು ನೀಡುವುದು ವ್ಯವಹಾರಗಳಿಗೆ ಮುಖ್ಯವಾಗಿರುತ್ತದೆ. ನಮ್ಮ ಪ್ರಧಾನಮಂತ್ರಿಯವರ ಸಬ್ ಕಾ ಸಾಥ್ ನ ದೃಷ್ಟಿ, ಸಬ್ಕಾ ವಿಶ್ವಾಸ್ ಸರ್ಕಾರ ಮತ್ತು ಉದ್ಯಮವನ್ನು ಸಾಮಾನ್ಯ ವೇದಿಕೆಯಲ್ಲಿ ತರುವ ಗುರಿಯನ್ನು ಹೊಂದಿದೆ.
ಈ ಮೂಲಕ ಎಲ್ಲರಿಗೂ ಸಮೃದ್ಧಿಯನ್ನು ಸಾಧಿಸಲು ಸಾಧಿಸಲು ಸಾಮರಸ್ಯದಿಂದ ಕೆಲಸ ಮಾಡುತ್ತದೆ. ಫ್ಲಿಪ್ ಕಾರ್ಟ್ ಗ್ರೂಪ್ ನಂತಹ ಸಂಸ್ಥೆಗಳು ಈ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಹಾಗೂ ವ್ಯಾಪಕವಾದ ಸಾಮಾಜಿಕ ಪ್ರಭಾವವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಫೌಂಡೇಶನ್ ನ ಆರಂಭವು ಈ ದಿಕ್ಕಿನಲ್ಲಿ ಒಂದು ನಿರ್ಣಾಯಕ ಹೆಜ್ಜೆ ಆಗಿದೆ’’ ಎಂದರು.
ಫ್ಲಿಪ್ ಕಾರ್ಟ್ ನ ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ರಜನೀಶ್ ಕುಮಾರ್ ಅವರು ಮಾತನಾಡಿ, “ನವ ಭಾರತವನ್ನು ಒಟ್ಟಾಗಿ ನಿರ್ಮಾಣ ಮಾಡುವ ದೃಷ್ಟಿಯೊಂದಿಗೆ, ಫ್ಲಿಪ್ ಕಾರ್ಟ್ ಫೌಂಡೇಶನ್ ಸಮಾಜ ಮತ್ತು ಆರ್ಥಿಕ ಪರಿವರ್ತನೆಯ ಅಭಿವೃದ್ಧಿ ಕಾರ್ಯಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ವಿವಿಧ ಪಾಲುದಾರರೊಂದಿಗೆ ಕೈಜೋಡಿಸಲು ಬದ್ಧವಾಗಿದೆ.
ಈ ಫೌಂಡೇಶನ್ ಕಲೆ ಮತ್ತು ಕರಕುಶಲವನ್ನು ಪುನರುಜ್ಜೀವನಗೊಳಿಸುವ ಮೂಲಕ ಹಿಂದುಳಿದವರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಅಲ್ಲದೇ, ವಿಪತ್ತು ಪರಿಹಾರಗಳನ್ನು ಒದಗಿಸುವ ಮೂಲಕ ನಿರ್ಣಾಯಕವಾದ ಸಾಮಾಜಿಕ ಕಳಕಳಿಗಳನ್ನು ಪೂರೈಸಲಿದೆ.
ಇವೆಲ್ಲವೂ ಅಂತರ್ಗತ ಅಭಿವೃದ್ಧಿಯನ್ನು ಚಾಲನೆ ಮಾಡುವುದು ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ. ಈ ಕ್ರಮಗಳ ಮೂಲಕ ನಾವು ಮುಂಬರುವ ವರ್ಷಗಳಲ್ಲಿ 20 ಮಿಲಿಯನ್ ಜನರ ಜೀವನದ ಮೇಲೆ ಪ್ರಭಾವ ಬೀರುವ ಗುರಿಯನ್ನು ಹೊಂದಿದ್ದೇವೆ’’ ಎಂದು ತಿಳಿಸಿದರು.
ಫ್ಲಿಪ್ ಕಾರ್ಟ್ ಫೌಂಡೇಶನ್ ನ ಕಾರ್ಯಾಚರಣೆಗಳು ಆರ್ಥಿಕ ನೆರವಿನ ಆಧಾರಿತವಾಗಿದ್ದು, ಫ್ಲಿಪ್ ಕಾರ್ಟ್ ಗ್ರೂಪ್ ನ ಕೊಡುಗೆಗಳೊಂದಿಗೆ ಹಾಗೂ ಫ್ಲಿಪ್ ಕಾರ್ಟ್ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿರುವ `ಚಾರಿಟಿ ಚೆಕೌಟ್’ ವೈಶಿಷ್ಟ್ಯದ ಮೂಲಕ ಇದು ಜನೋಪಕಾರಿ ಕೊಡುಗೆಗಾಗಿ ಸುಲಭ ಮತ್ತು ತಡೆರಹಿತವಾದ ಮಾರ್ಗವನ್ನು ಒದಗಿಸುತ್ತದೆ.
ಈ ಫೌಂಡೇಶನ್ ಸ್ಥಾಪನೆಯು ಫ್ಲಿಪ್ ಕಾರ್ಟ್ ಗ್ರೂಪ್ ನ ರಾಷ್ಟ್ರ ನಿರ್ಮಾಣದ ನಿರಂತರ ಪ್ರಯತ್ನಗಳಿಗೆ ಪೂರಕವಾಗಿ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿ ಹಾಗೂ ಅದರ ತಂತ್ರಜ್ಞಾನ, ಆವಿಷ್ಕಾರ ಚಾಲಿತ ಮಾರುಕಟ್ಟೆಯಿಂದ ಲಕ್ಷಾಂತರ ಎಂಎಸ್ಎಂಇಗಳು, ಮಾರಾಟಗಾರರು ಮತ್ತು ಕುಶಲಕರ್ಮಿಗಳ ಜೀವನೋಪಾಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ನೆರವಾಗುತ್ತದೆ.