ವ್ಯಾಸರಾಜರ ವೃಂದಾವನ ಧ್ವಂಸ ಕೃತ್ಯ- 5 ಆರೋಪಿಗಳ ಬಂಧನ

0
74

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯಿರುವ ವ್ಯಾಸರಾಯರ ವೃಂದಾವನಕ್ಕೆ ಧ್ವಂಸ ಕೃತ್ಯಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಪೊಲ್ಲಾರಿ, ಡಿ ಮನೋಹರ, ಕೆ.ಕುಮ್ಮಟಕೇಶವ, ಬಿ ವಿಜಯಕುಮಾರ್ ಹಾಗೂ ಟಿ ಬಾಲರನಸಯ್ಯ ಬಂಧಿತ ಆರೋಪಿಗಳು. ಇ ಎಲ್ಲಾ ಆರೋಪಿಗಳು ಆಂಧ್ರಪ್ರದೇಶದ ಅನಂತಪುರ್ ಜಿಲ್ಲೆಯ ತಾಡಪತ್ರಿ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಮೊಬೈಲ್ ಸಿಗ್ನಲ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿತರಿಂದ ವ್ಯಾಸರಾಜರ ವೃಂದಾವನ ಧ್ವಂಸ ಕೃತ್ಯಕ್ಕೆ ಬಳಸಿದ ಹಾರೆ, ಗುದ್ದಲಿ, ಇನ್ನೋವಾ ಕಾರು ವಶಕ್ಕೆ ಪಡೆಯಲಾಗಿದೆ.

Contact Your\'s Advertisement; 9902492681

ನಿಧಿಗಾಗಿ ಕಳೆದ 17 ನೇ ದಿನಾಂಕದಂದು ರಾತ್ರಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನದಲ್ಲಿ ಧ್ವಂಸ ಮಾಡಲಾಗಿತ್ತು. ವ್ಯಾಸರಾಜದ ವೃಂದಾವನ ಕಿತ್ತು ಹಾಕಿದ್ದಕ್ಕೆ ರಾಜ್ಯಾದ್ಯಾಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ವಿವಿಧ ಮಠಾಧೀಶರು ಆರೋಪಿಗಳನ್ನ ಬಂಧಿಸುವಂತೆ ಅಗ್ರಹಿಸಿದ್ದರು. ಹಾಗೆಯೇ ಆರೋಪಿಗಳ ಬಂಧನಕ್ಕೆ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ವಿಶೇಷ ತಂಡ ರಚನೆ ಮಾಡಿದ್ದು, ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here