ಪ್ರಚಲಿತ ವಿದ್ಯಮಾನಗಳ ಜ್ಞಾನ ಇದ್ದರೆ ಉತ್ತಮ ಕವಿತೆಯ ರಚನೆಗೆ ಸಹಕಾರಿ

0
59

ಶಹಾಬಾದ: ಯುವಕವಿಗಳಿಗೆ ಪರಂಪರೆಯ ಅರಿವು ಮತ್ತು ಪ್ರಚಲಿತ ವಿದ್ಯಮಾನಗಳ ಜ್ಞಾನ ಇದ್ದರೆ ಉತ್ತಮ ಕವಿತೆಯ ರಚನೆಗೆ ಸಹಕಾರಿ ಆಗಲಿದೆ ಎಂದು ಮಕ್ಕಳ ಸಾಹಿತಿ ಹೆಚ್.ಬಿ.ತೀರ್ಥೆ ಹೇಳಿದರು.

ಅವರು ಬುಧವಾರ ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾದ ಯುಗಾದಿ ಕವಿಗೋಷ್ಠಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಕವಿಗಳಿಗೆ ಸೂಕ್ಷ್ಮ ಸಂವೇದಿ ಮನಸ್ಸಿರಬೇಕು.ಭಾಷೆಯ ಬಳಕೆ ಸಾಹಿತ್ಯದಲ್ಲಿ ಸಂಕೇತದಿಂದ ಸರಳತೆಗೆ ಸಾಗಬೇಕು ಅಂದಾಗ ಮಾತ್ರ ಜನಮನ ತಲುಪುವ ಕಾವ್ಯ ಹೊರಬರಲು ಸಾಧ್ಯ. ಯುವಕವಿಗಳ ಕಾವ್ಯದಲ್ಲಿ ಆಶಯ ಚೆನ್ನಾಗಿದೆ ಜತೆಗೆ ಅಭಿವ್ಯಕ್ತಿಯ ರೀತಿಯನ್ನು ಉತ್ತಮಪಡಿಸಿಕೊಳ್ಳಬೇಕು.ಕವಿ ತಮ್ಮ ಕವಿತೆಯಲ್ಲಿ ಜೀವ ತುಂಬಬೇಕಾದರೆ ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.ಅಧ್ಯಯನದಿಂದ ಹೆಚ್ಚಿನ ಕಾವ್ಯ ಕೃಷಿ ಸಾಧ್ಯ. ಕಾವ್ಯದ ಚೌಕಟ್ಟಿನಲ್ಲಿ ಬರೆಯುವುದನ್ನು ರೂಢಿಸಿಕೊಳ್ಳಬೇಕು.ಮುಂದಿನ ದಿನಗಳಲ್ಲಿ ಉತ್ತಮ ಕಾವ್ಯ ರಚನೆಯತ್ತ ಗಮನಹರಿಸಬೇಕೆಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕರಾದ ಡಾ.ಶಂಕರ ಸೋಮ್ಯಾಜಿ ಮಾತನಾಡಿ, ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಕಾವ್ಯ ವೈವಿಧ್ಯಮಯವಾಗಿ ಮೂಡಿಬರುತ್ತಿದೆ. ಪ್ರಕೃತಿ ವರ್ಣನೆ, ಸಾಮಾಜಿಕ ಪ್ರಜ್ಞೆ, ಸಮಕಾಲಿನ ವಿದ್ಯಮಾನಗಳನ್ನು ನಮ್ಮ ಯುವಕವಿಗಳು ಸಮರ್ಪಕವಾಗಿ ವಾಚನ ಮಾಡಿದ್ದಾರೆ. ಹೊಸತನ ನಿರಂತರ ಪ್ರಯೋಗಶೀಲತೆ ಕವಿಗಳ ಕಾವ್ಯದಲ್ಲಿ ನಡೆಯುತ್ತಾ ಬರಬೇಕು. ಕವಿಗಳು ಜ್ವಲಂತ ಘಟನಾವಳಿಗಳನ್ನೇ ಆಧರಿಸಿ ಬರೆಯುವ ಗದ್ಯ ಪದ್ಯಗಳು ಸಮಾಜದ ಓರೆಕೋರೆಗಳನ್ನು ತಿದ್ದುವ ಕಾರ್ಯ ಮಾಡುತ್ತವೆ.ಯುವಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗಿರುವುದರಿಂದ ಮೊಬೈಲ್ ನಂತಹ ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಮಿತವಾಗಿ ಬಳಸಿಕೊಳ್ಳಬೇಕು. ವಸಂತ ಋತು ಋತುಗಳ ರಾಜ.ಎಲ್ಲೆಲ್ಲೂ ನವ ಚೈತನ್ಯ ತುಂಬಿ ಸಸ್ಯರಾಶಿ ಕವಿಗಳಿಗೆ ಆನಂದ ನೀಡುವ ಕಾಲವಿದು.ವಸಂತ ಪ್ರೀಯವಾದ ಋತು.ಆ ನಿಟ್ಟಿನಲ್ಲಿ ಈ ಕವಿಗೋಷ್ಠಿ ಹೆಚ್ಚು ಪ್ರಸ್ತುತವೆನಿಸುತ್ತದೆ ಎಂದರು.

ಕಸಾಪ ನಿಕಟ ಪೂರ್ವ ಅಧ್ಯಕ್ಷ ಮೃತ್ಯುಂಜಯ್ ಹಿರೇಮಠ ಮಾತನಾಡಿ, ಕವಿಗಳು ಮೊದಲು ಸಹೃದಯರಾಗಬೇಕು ಮತ್ತು ಪುಸ್ತಕ ಪ್ರೀತಿಯನ್ನು ರೂಢಿಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ತಾಲೂಕಿನ ಎಲ್ಲರ ಮನಸ್ಸಿಗೆ ತಲುಪಬೇಕಾಗಿದೆ.ನಾಡು-ನುಡಿಗೆ ಸೇವೆ ಸಲ್ಲಿಸುವ ಮನಸ್ಸುಗಳಿಗೆ ಒಂದುಗೂಡಿಸುವ ಕೆಲಸ ಮಾಡಬೇಕಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗ ಬಾಳಿ ಮಾತನಾಡಿದರು. ಕಸಾಪ ಹಿರಿಯ ಸದಸ್ಯ ಶರಣಗೌಡ ಪಾಟೀಲ ಗೋಳಾ(ಕೆ), ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ ವೇದಿಕೆಯ ಮೇಲಿದ್ದರು. ಕಾರ್ಯಕ್ರಮದಲ್ಲಿ ಹತ್ತಾರು ಯುವಕವಿಗಳು ಕವನ ವಾಚನ ಮಾಡಿದರು.

ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವಶರಣಪ್ಪ ವಸ್ತ್ರದ್ ಮತ್ತು ಬಸವರಾಜ ಮದ್ರಿಕಿ, ವಿಶ್ವರಾಧ್ಯ ಬಿರಾಳ, ಈರಣ್ಣ ಕಾರ್ಗಿಲ್,ಪ್ರಕಾಶ ಪಾಟೀಲ, ವಿಶ್ವನಾಥ ಹಡಪದ, ದಶರಥ ಕೋಟನೂರ, ಮರಲಿಂಗ ಯಾದಗಿರಿ, ನಾಗಣ್ಣ ರಾಂಪೂರೆ,ಮಲ್ಲಿಕಾರ್ಜುನ ಇಟಗಿ, ಮಲ್ಲಿಕಾರ್ಜುನ ದೊಡ್ಡಿ, ರಾಜಶೇಖರ ದೇವರಮನಿ,ರಾಜು ಕೋಬಾಳ, ಗುರುಪ್ರಸಾದ,ಸುನೀಲ ಗುಡೂರ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here