ಕಸಾಪದಲ್ಲಿ ‘ದೇವರ ದಾಸಿಮಯ್ಯ ನವರ ಜಯಂತಿ’ ಆಚರಣೆ

0
85

ಕಲಬುರಗಿ: ಜೀವನ ಅನುಭವಗಳನ್ನು ವಚನಗಳ ರೂಪದಲ್ಲಿ ಸಾದರಪಡಿಸಿ ಸಮಾಜಕ್ಕೆ ಸನ್ಮಾರ್ಗ ತೋರಿದ ಆದ್ಯ ವಚನಕಾರ ದೇವರ ದಾಸಿಮಯ್ಯ ಶ್ರೇಷ್ಠ ಶರಣ ಎಂದು ಜಿಪಂ ನ ಮಾಜಿ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ‘ದೇವರ ದಾಸಿಮಯ್ಯ ನವರ ಜಯಂತಿ’ಪ್ರಯುಕ್ತ ಆಯೋಜಿಸಿದ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇವರ ದಾಸಿಮಯ್ಯನವರು ಕೇವಲ ನೇಕಾರ ಜನಾಂಗಕ್ಕೆ ಮಾತ್ರ ಮೀಸಲಾಗಿರದೆ ಇಡೀ ಮಾನವ ಜನಾಂಗಕ್ಕೆ ಆದರ್ಶಪ್ರಾಯವಾಗಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಸಮಾಜದಲ್ಲಿನ ಜಾತಿ ಪದ್ಧತಿಯನ್ನು ಹೋಗಲಾಡಿಸಿ ಎಲ್ಲರೂ ಸಮಾನರು ಎಂಬ ಭಾವನೆ ಸಾರಿದ ಕೀರ್ತಿ ವಚನ ಸಾಹಿತ್ಯಕ್ಕೆ ಸಲ್ಲುತ್ತದೆ. ವಿಶ್ವ ಸಾಹಿತ್ಯವನ್ನು ತೆಗೆದುಕೊಂಡು ನೋಡಿದರೆ ವಚನ ಸಾಹಿತ್ಯ ಬಹಳಷ್ಟು ಪ್ರಮಾಣದಲ್ಲಿ ಕೊಡುಗೆಯನ್ನು ನೀಡಿದೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ದಿವ್ಯಾ ಹಾಗರಗಿ ಮಾತನಾಡಿ, ವಚನಗಳು ಹಾಗೂ ವಚನಕಾರರ ಬಗ್ಗೆ ಇಂದಿನ ಯುವಕರಿಗೆ ತಿಳಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಶಿವರಾಜ ಅಂಡಗಿ, ಯಶವಂತರಾಯ ಅಷ್ಠಗಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ಸಾಹಿತಿಗಳಾದ ಸೂರ್ಯಕಾಂತ ಸೊನ್ನದ, ವಿಜಯಕುಮಾರ ಚೌಧರಿ, ಪ್ರಮುಖರಾದ ರಾಜುಗೌಡ ನಾಗನಳ್ಳಿ, ಶಿವಲೀಲಾ ತೆಗನೂರ, ಪದ್ಮಾವತಿ, ಸೈಯದ್ ಹಾಜೀಪೀರ, ಸಂತೋಷ ಕುಡಳ್ಳಿ ಕಾಳಗಿ, ಗುರುಬಸಪ್ಪ ಸಜ್ಜನಶೆಟ್ಟಿ, ವಿಶ್ವನಾಥ ತೊಟ್ನಳ್ಳಿ, ಮೌನೇಶ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here