ಶಹಾಬಾದ: ಆಧುನಿಕತೆಯ ಅಬ್ಬರದಲ್ಲಿ ಜನಮಾನಸದಿಂದ ಮರೆಯಾಗುತ್ತಿರುವ ಜಾನಪದವನ್ನು ಉಳಿಸುವ ನಿಟ್ಟಿನಲ್ಲಿಅದರ ಮಹತ್ವ ಮತ್ತು ಅಗತ್ಯವನ್ನು ಇಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಬಸವರಾಜ ತೋಟದ್ ಹೇಳಿದರು.
ಅವರು ತಾಲೂಕಿನ ಮರತೂರ ಗ್ರಾಮದಲ್ಲಿ ಪ್ರಬುದ್ಧ ಸಾಂಸ್ಕøತಿಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಲಾದ ಜನಪದ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಘಟಕ ನಗರದ ಆಜಾದ್ ಪಾರ್ಕ್ ಗಣಪತಿ ಪೆಂಡಾಲಿನಲ್ಲಿಶುಕ್ರವಾರ ಏರ್ಪಡಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದದ ಅಗತ್ಯ ಮತ್ತು ಮಹತ್ವದ ಬಗ್ಗೆ ಇಂದಿನ ಪೀಳಿಗೆಗೆ ಅರಿವಿಲ್ಲ. ಇದರಿಂದ ಅವರು ಪಾಶ್ಚಾತ್ಯ ಸಂಸ್ಕøತಿಯತ್ತ ವಾಲುತ್ತಿದ್ದಾರೆ. ಜಾನಪದದ ಮಹತ್ವವನ್ನು ಅವರಿಗೆ ಮನದಟ್ಟಾಗುವಂತೆ ತಿಳಿಸಿದಲ್ಲಿ ಮತ್ತೆ ದೇಶಿಯ ಸಂಸ್ಕೃತಿಯತ್ತ ಮರಳುತ್ತಾರೆ ಎಂದರು.ಈ ಹಿಂದೆ ಗ್ರಾಮೀಣ ಭಾಗದ ಯುವಕರು ಮೊದಲು ದನಕರುಗಳು ಮೇಯಿಸಲು ಹೊದಾಗ ಅವರ ಬಾಯಿಂದ ಜಾನಪದ ಹಾಡಗಳು ಹಾಡುತ್ತ ಇದ್ದರೆ ದನಕರುಗಳು ಕೂಡ ಮಗ್ನ ವಾಗಿ ನಿಲ್ಲುತ್ತಿದ್ದವು. ಆದರೆ ಇಗ ಅವರ ಮೊಬೈಲ್ ನಲ್ಲಿ ಹಾಡು ಕೆಳುದರಿಂದ ಮನಸ್ಸಿನ ನೆಮ್ಮದಿ ಹಾಳಾಗುತ್ತಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಮಲ್ಲಪ್ಪ.ಎಸ್.ದೊಡ್ಡಿ ಅದ್ಯಕ್ಷತೆ ವಹಿಸಿ ಮಾತನಾಡಿ, ಮರೆಯಾಗುತ್ತಿರುವ ಜಾನಪದವನ್ನು ಉಳಿಸುವ ಉದ್ದೇಶದಿಂದ ನಮ್ಮ ಸಂಸ್ಥೆಯಿಂದ ನಿರಂತರವಾಗಿ ಜಾನಪದ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಮಲ್ಲಯ್ಯ ಸ್ವಾಮಿ,ಮಹೇಶ ದೇವಣಿ, ಶಿವಾನಂದ ಮುರಗನವರ, ರಂಗನಾಥ ಉದಯಕರ್,
ಜಾನಪದ ಗಾಯನ ರಾಣಮ್ಮ ಪ್ಯಾರಸಾಬಾದ, ಸೊಬಾನ ಪದ ಮಹಾದೇವಿ ಬುಟ್ನಾಳ, ತತ್ವ ಪದ ಮಲ್ಲಯ್ಯ ಸ್ವಾಮಿ ಮತ್ತು ಸಂಗಡಿಗರು, ಹಂತಿಪದ ಶಿವಾನಂದ ಪುಜಾರಿ ಹಾಗೂ ಸಂಗಡಿಗರು, ಲಾವಣಿಪದ ಮಲ್ಲಪ್ಪ ಡಿ. ಹಾಡಿದರು. ಪ್ರಮೋದ.ಎಮ್ ನಿರೂಪಿಸಿದರು, ನಾಗವೇಣಿ ವಂದಿಸಿದರು.