ಮನುಷ್ಯನ ದೈಹಿಕ ಬೆಳವಣಿಗೆಗೆ ಕ್ರೀಡೆ ಅವಶ್ಯ: ಸ್ವಾಮೀಜಿ 

1
8

ಕಲಬರುಗಿ: ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮ ಚಿತ್ತದಿಂದ ಕಾಪಾಡಿ ಕೊಳ್ಳುವುದು ಇಂದಿನ ಅಗತ್ಯವಾಗಿದ್ದು ಯೋಗ ಧ್ಯಾನದ ಜೊತೆಗೆ ಲವಲವಿಕೆಯಿಂದ ಇರಲು ಕ್ರೀಡೆ ಸಹಕಾರಿಯಾಗಲಿದೆ ಎಂದು ಚೌವಾದಪೂರಿ ಹಿರೇಮಠದ ಪೂಜ್ಯ ಶ್ರೀ ಡಾ ರಾಜಶೇಖರ ಶಿವಾಚಾರ್ಯರು ನುಡಿದರು.

ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಡಾ. ಶರಣಕುಮಾರ ಮೋದಿ ಫೌಂಡೇಶನ ಮತ್ತು ಆತ್ಮೀಯರ ಬಳಗದ ವತಿಯಿಂದ ಆಯೋಜಿಸಿದ ದಕ್ಷಿಣ ಕ್ರೀಕಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದ ಪೂಜ್ಯರು ಕ್ರೀಡೆಯಲ್ಲಿ ಸೋಲು ಗೆಲುವು ಸಮನಾಗಿ ಸ್ವೀಕರಿಸುವಂತೆ ಕರೆ ನೀಡಿದ ಅವರು ಜೀವನ ಸಹ ಕ್ರೀಡೆಯಂತೆ ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ಸಮ ಚಿತ್ತದಿಂದ ಎದುರಿಸುವ ಮನೋಭಾವ ಪ್ರತಿಯೊಬ್ಬರು ಬೆಳೆಸಿಕೊಳ್ಳುವಂತೆ ಕರೆ ನೀಡಿದರು

Contact Your\'s Advertisement; 9902492681

ಶರಣು ಮೋದಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸತತ ಪ್ರಯತ್ನದ ಮೂಲಕ ರಾಜಕೀಯ ಹಾಗೂ ಸಮಾಜದಲ್ಲಿ ಗುರುತಿಸಿಕೊಂಡಿದ್ದು ನಿಜಕ್ಕೂ ನಮಗೆ ಸಮಾಧಾನದ ಜೊತೆಗೆ ಹೆಮ್ಮೆ ತಂದಿದೆ ಎಂದು ಪೂಜ್ಯರು ಪ್ರಶಂಸೆ ವ್ಯಕ್ತ ಪಡಿಸಿದರು ಈ ಸಂದರ್ಭದಲ್ಲಿ ಡಾ. ಶರಣಕುಮಾರ ಮೋದಿ ಫೌಂಡೇಶನ ಮತ್ತು ಆತ್ಮೀಯರ ಬಳಗದ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here