ಸುರಪುರ: ಇಲ್ಲಿಯ ತಾಲ್ಲೂಕು ಪಂಚಾಯಿತಿಯ ನೂತನ ಕಾರ್ಯನಿರ್ವಹಕ ಅಧಿಕಾರಿ ಹುದ್ದೆಗೆ ತಾತ್ಕಾಲಿಕವಾಗಿ ಪ್ರಭಾರವನ್ನು ಶ್ರೀ ರವಿಚಂದ್ರ ಲಕ್ಕುಂಡಿ ಸೋಮವಾರ ಅಧಿಕಾರ ವಹಿಸಿಕೊಂಡರು.
ಅಧಿಕಾರ ಸ್ವೀಕರಿಸಿದ ನೂತನ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಯಾಳಗಿ ಗ್ರಾಮದ ಹಿತೈಷಿಗಳಾದ ರಾಮಣ್ಣ ಕಾಡಮಗೇರಿ, ರಮೇಶ ಹೆಳವರ ಯಾಳಗಿ ಹಾಗೂ ಇನ್ನಿತರರು ಸನ್ಮಾನಿಸಿ ಸ್ವಾಗತಿಸಿದರು.
ನಂತರ ಮಾತನಾಡಿದ ಅವರು ತಾಲ್ಲೂಕಿನಲ್ಲಿ ನರೇಗಾ ಹಾಗೂ ವಿವಿಧ ವಸತಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.