೧೩ ರಿಂದ ಕಸಾಪದಿಂದ ‘ಸತ್ಯ ಬಿತ್ತಿದ ಪರಿ’: ಬಸವ ಬೆಳಕು-ಭೀಮ ಬದುಕು’ ವಿಶೇಷ ಕಾರ್ಯಕ್ರಮ| kannada sahitya parishat programs

0
51

ಕಲಬುರಗಿ: ವಿಶ್ವದ ಭವ್ಯ ಭವಿಷ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಉರಿಯುವ ಕರ್ಪೂರದಂತೆ ಬೆಳಗಿದ ವಿಶ್ವಗುರು ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಜಯಂತಿ ಪ್ರಯುಕ್ತ ಅವರ ವಿಚಾರಗಳನ್ನು ಇಂದಿನ ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ ೧೩ ರಿಂದ ತಿಂಗಳಪರ್ಯಂತ ‘ ಸತ್ಯ ಬಿತ್ತಿದ ಪರಿ ’ ಎನ್ನುವ ಘೋಷವಾಕ್ಯದೊಂದಿಗೆ ಬಸವ ಬೆಳಕು-ಭೀಮ ಬದುಕು ಎಂಬ ಸರಣಿ ಕಾರ್ಯಕ್ರಮವೊಂದನ್ನು ನಗರದ ಸೇರಿದಂತೆ ವಿವಿಧ ತಾಲೂಕುಗಳ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಶಿಕ್ಷಕರ ಪ್ರಕ್ರಿಯೆ ತಾತ್ಕಾಲಿಕ ಕೈಬಿಡುವಂತೆ ಸಚಿವರಿಗೆ ಮನವಿ| Teacher appointment process

Contact Your\'s Advertisement; 9902492681

೧೨ನೇ ಶತಮಾನದಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಅಪ್ಪಿ ಮಾನವೀಯ ಮೌಲ್ಯಗಳನ್ನು ಒಪ್ಪಿ, ಕಾಯಕ-ದಾಸೋಹದ ಪರಿಕಲ್ಪನೆಯನ್ನು ತಮ್ಮ ವಚನಗಳ ಮೂಲಕ ಜನಮನಕ್ಕೆ ತಲುಪಿಸುವಲ್ಲಿ ವಿಶ್ವಗುರು ಬಸವಣ್ಣ ಪ್ರಯತ್ನಿಸಿದ್ದಾರೆ. ಹಾಗೆಯೇ, ೨೦ ನೇ ಶತಮಾನದಲ್ಲಿ ಭಾರತದ ಸಂವಿಧಾನ ರಚಿಸುವ ಮೂಲಕ ಶೋಷಿತ ಜನಾಂಗದ ಉಜ್ವಲ ಭವಿಷ್ಯಕ್ಕಾಗಿ ಸರ್ವ ಸಮಾನತೆಯ ಸೂತ್ರಗಳನ್ನು ನೀಡಿದ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ರವರಾಗಿದ್ದಾರೆ. ಮಹಾತ್ಮರ ವಿಚಾರಕ್ರಾಂತಿಯ ಕಿಡಿಯನ್ನು ಇಂದಿನ ಯುವ ಪೀಳಿಗೆಗೆ ಹಸ್ತಾಂತರಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದು ತೇಗಲತಿಪ್ಪಿ ವಿವರಿಸಿದ್ದಾರೆ.

ಶಿಕ್ಷಕರ ಪ್ರಕ್ರಿಯೆ ತಾತ್ಕಾಲಿಕ ಕೈಬಿಡುವಂತೆ ಸಚಿವರಿಗೆ ಮನವಿ| Teacher appointment process

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here