ಮಹಾತ್ಮ ಜ್ಯೋತಿಬಾ ಫುಲೆ ಜಯಂತಿ ಆಚರಣೆ

0
21

ಭಾಲ್ಕಿ: ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಸಮಾಜ ಸುಧಾಕರ ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿಯನ್ನು ಆಚರಿಸಲಾಯಿತು. ಸಮಾರಂಭದ ದಿವ್ಯಸನ್ನಿಧಾನವನ್ನು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ವಹಿಸಿದ್ದರು.

ಮಹಾತ್ಮ ಜ್ಯೋತಿಬಾ ಫುಲೆ ಅವರು ನಮ್ಮ ದೇಶ ಕಂಡ ಮಹಾನ್ ಸಮಾಜ ಸುಧಾರಕರು ಹಾಗೂ ಶಿಕ್ಷಣದ ಕ್ರಾಂತಿಕಾರರು ಆಗಿದ್ದರು. ವಿಶ್ವಗುರು ಬಸವಣ್ಣನವರು ೧೨ನೇ ಶತಮಾನದಲ್ಲಿ ಬೋಧಿಸಿದ ಮಾನವೀಯ ಮೌಲ್ಯಗಳನ್ನು ಅಧುನಿಕ ಕಾಲದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಅವರು ಆಚರಣೆಯಲ್ಲಿ ತಂದವರು. ವಿಶೇಷವಾಗಿ ತಮ್ಮ ಸತಿಯಾಗಿರುವ ಸಾವಿತ್ರಿಬಾಯಿ ಫುಲೆ ಅವರನ್ನು ಓದಲಿಕ್ಕೆ ಬರಯಲಿಕ್ಕೆ ಕಲಿಸಿ ಹೆಣ್ಣುಮಕ್ಕಳಿಗಾಗಿ ಮೊದಲನೇ ಪಾಠಶಾಲೆ ತೆಗೆದವರು. ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಹಾಗೂ ಅವರ ಶಿಕ್ಷಣಕ್ಕಾಗಿ ನಿರಂತರವಾಗಿ ಹೋರಾಡಿದವರು.

Contact Your\'s Advertisement; 9902492681

ಅನಾಥ ಮಕ್ಕಳಿಗೆ ಆಶ್ರಯವನ್ನು ನೀಡಿದರು. ಅನೇಕ ಕಾರಣಗಳಿಂದ ಗರ್ಭಿಣಿಯಾದ ಹೆಣ್ಣುಮಕ್ಕಳಿಗೆ ಸ್ವಂತ ಮನೆಯವರು ಹೊರಗಡೆ ಹಾಕಿದಾಗ ಅಂತಹವರಿಗೆ ಮನೆಯಲ್ಲಿ ಆಶ್ರಯ ನೀಡಿ ಹೆರಿಗೆ ಮಾಡುವ ವ್ಯವಸ್ಥೆ ಮಾಡುತ್ತಾರೆ. ತಮಗೆ ಕೊಲ್ಲಲು ಬಂದವರನ್ನು ಶಿಕ್ಷಣ ನೀಡಿ ಅವನಿಗೆ ಮಹಾವಿದ್ವಾಂಸರನ್ನಾಗಿ ಮಾಡುತ್ತಾರೆ. ಅವರ ಜೀವನ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳುವ ಮೂಲಕ ನಮ್ಮ ದೇಶದಲ್ಲಿ ಶಿಕ್ಷಣದ ಕುರಿತು ಇನ್ನೂ ಹೆಚ್ಚಿನ ಅರಿವನ್ನು ಮೂಡಿಸಬೇಕು. ಮೂಢನಂಬಿಕೆ, ಜಾತಿಯತೆ ಹಾಗೂ ಲಿಂಗ ಅಸಮಾನತೆಯನ್ನು ತೊಲಗಿಸಬೇಕು ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ಯುವಕ ಸಂಘದ ಅಧ್ಯಕ್ಷರಾದ ಶಶಿಧರ ಕೋಸಂಬೆ ವಹಿಸಿದ್ದರು. ಶರಣ ಆಕಾಶ ರಿಕ್ಕೆ, ಶರಣ ವಿಜಯಕುಮಾರ ಶೆಟಕಾರ, ಶರಣ ನಾಗೇಶ ತಮಾಸಂಗೆ, ಶರಣ ಶಾಂತಯ್ಯ ಸ್ವಾಮಿ, ಪ್ರಶಾಂತರೆಡ್ಡಿ ಅತಿಥಿಗಳಾಗಿ ಭಾಗವಹಿಸಿದ್ದರು. ರಾಜು ಜುಬರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಪ್ರಸಾದ ಶಾಲೆಯ ಮುಖ್ಯಗುರುಗಳಾದ ಬಾಬು ಬೆಲ್ದಾಳ ಅವರು ನಿರೂಪಿಸಿದರು. ಪ್ರಸಾದ ನಿಲಯದ ಮಕ್ಕಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here