ಸುರಪುರ: ಅಂಬೇಡ್ಕರ್ ಸೇನೆ ಸಂಘಟನೆಯ ಕಲ್ಯಾಣ ಕರ್ನಾಟಕ ಭಾಗದ ಪ್ರಧಾನ ಕಾರ್ಯದರ್ಶಿಯನ್ನಾಗಿ ಹೋರಾಟಗಾರ ರಾಜು ಕಟ್ಟಿಮನಿ ಸುರಪುರ ಅವರನ್ನು ನೇಮಕಗೊಳಿಸಲಾಗಿದೆ.
ಈ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷ ಪಿ.ಮೂರ್ತಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದು,ತಮ್ಮ ನಾಡು ನುಡಿ ಹಾಗು ದಲಿತ ಹಿಂದುಳಿದವರ ಅಭಿವೃಧ್ಧಿ ಪರವಾದ ಕಾಳಜಿ ಹಾಗೂ ಸಂಘಟನೆಯನ್ನು ಕಟ್ಟುವಲ್ಲಿನ ಶ್ರಮವನ್ನು ಗೌರವಿಸಿ ಕಲ್ಯಾಣ ಕರ್ನಾಟಕ ವಿಭಾಗದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಲಾಗಿದ್ದು,ಸಂಘಟನೆಯನ್ನು ಬೆಳೆಸುವ ಜೊತೆಯಲ್ಲಿ ಸಮಾಜದ ಏಳಿಗೆಗೆ ಶ್ರಮಿಸುವಂತೆ ತಿಳಿಸಿದ್ದಾರೆ.