ಸುರಪುರ: ಕಳೆದ ಅನೇಕ ವರ್ಷಗಳಿಂದ ಸರಿಯಾದ ಬೆಲೆ ಸಿಗದೆ ಹಾಗೂ ಅತಿವೃಷ್ಟಿ ಅನಾವೃಷ್ಟಿಯಿಂದ ಹೈರಾಣಾಗಿರುವ ರೈತರು ಈಗ ಬೆಳೆದಿರುವ ಅಲ್ಪಸ್ವಲ್ಪ ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ಖರಿದಿ ಕೇಂದ್ರ ಆರಂಭಿಸದಿದ್ದಲ್ಲಿ ಎಪಿಎಮ್‌ಸಿ ಗಂಜ್ ಗೇಟ್ ಬಂದ್ ಮಾಡಿ ಪ್ರತಿಭಟನೆ ನಬಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕುಂಬಾರಪೇಟೆಯ ಎಪಿಎಮ್‌ಸಿ ಕಚೇರಿ ಮುಂದೆ ಸೋಮವಾರ ನಡೆದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿ,ರಾಜಕಾರಣಿಗಳು ಮತ್ತು ಅಧಿಕಾರಿಗಳು ಒಂದಾಗಿ ರೈತರನ್ನು ನಿರ್ನಾಮ ಮಾಡಲು ಹೊರಟಿದ್ದಾರೆ.ಆದರೆ ರೈತರು ಕಾರ್ಮಿಕರಿಗೆ ಬುದ್ಧಿ ಇಲ್ಲ ಚುನಾವಣೆಯಲ್ಲಿ ಮತ ಕೇಳಲು ಬಂದಾಗ ಅವರ ಬಣ್ಣದ ಮಾತುಗಳಿಗೆ ಮರಳಾಗಿ,ಅವರ ಆಸೆಯ ಮಾತುಗಳಿಂದ ಮತ ನೀಡಿ ಈಗ ಪರಿತಪಿಸುವಂತಾಗಿದೆ.ಇನ್ನಾದರು ಮತವನ್ನು ಮಾರಿಕೊಳ್ಳದೆ ರೈತರಿಗಾಗಿ ಕೆಲಸ ಮಾಡುವಂತವರಿಗೆ ಮತ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದರು.
ಸುರಪುರ ಎಪಿಎಮ್‌ಸಿ ಕಚೇರಿ ಮುಂದೆ ರೈತ ಸಂಘ ಪ್ರತಿಭಟನೆ
ನಂತರ ಚಿಂತಕ ಮಲ್ಲಯ್ಯ ಕಮತಗಿ ಮಾತನಾಡಿ,ಕೇಂದ್ರ ಸರಕಾರ ಬೆಂಬಲ ಬೆಲೆಯನ್ನು ಕಾನೂನಿನ ಅಡಿಯಲ್ಲಿ ತರಬೇಕು ಅಂದಾಗ ರೈತರಿಗೆ ಅನುಕೂಲವಾಗಲಿದೆ.ಅಲ್ಲದೆ ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ರದ್ದುಗೊಳಿಸಿದರು ರಾಜ್ಯ ಸರಕಾರ ರದ್ದುಗೊಳಿಸಿಲ್ಲ ಕೂಡಲೇ ರದ್ದುಗೊಳಿಸಬೇಕು ಎಂದರು.
ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಮಾತನಾಡಿ,ಇಲ್ಲಿಯ ಎಪಿಎಮ್‌ಸಿಯಲ್ಲಿ ನಕಲಿ ಪಟ್ಟಿ ನೀಡುವ ಮೂಲಕ ಸರಕಾರಕ್ಕೆ ವಂಚಿಸಲಾಗುತ್ತಿದೆ.ಆದ್ದರಿಂದ ರೈತರ ಬೆಳೆಗಳಿಗೆ ಉತ್ತಮ ಧಾರಣೆ ನೀಡಬೇಕು ಮತ್ತು ರೈತರಿಗೆ ಅಸಲಿ ಪಟ್ಟಿ ನೀಡಬೇಕು,ಮತ್ತು ಶೀಘ್ರವೆ ಖರಿದಿ ಕೇಂದ್ರ ಆರಂಭಿಸದಿದ್ದಲ್ಲಿ ಕಚೇರಿಗೆ ಬೀಗ ಹಾಕುವುದಾಗಿ ಎಚ್ಚರಿಸಿದರು.
ಪರಿಷತ್ತಿನ ಕಾರ್ಯ ಇತಿಹಾಸದಲ್ಲಿ ಮಾನವೀಯತೆ ಮೆರೆಯುವ ಕೆಲಸ: ಹರ್ಷಾನಂದ ಗುತ್ತೇದಾರ
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಮಲ್ಲಯ್ಯ ದಂಡು ಹಾಗು ಎಪಿಎಮ್‌ಸಿ ಕಾರ್ಯದರ್ಶಿಗಳ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ರಾಘು ಕುಪಗಲ್,ನಾಗಪ್ಪ ಕುಪಗಲ್,ವೆಂಕಟೇಶ ಕುಪಗಲ್,ತಿಪ್ಪಣ್ಣ ಜಂಪಾ,ಶಿವನಗೌಡ ರುಕ್ಮಾಪುರ,ಯಂಕೋಬ ದೊರೆ,ಅವಿನಾಶ ಕೊಡೇಕಲ್,ತಿರುಪತಿ ಕುಪಗಲ್,ಮಾನಪ್ಪ ಕೊಂಬಿನ್,ಪ್ರಭು ದೊರೆ ಅರಳಳ್ಳಿ,ದೇವಪ್ಪ ಪೂಜಾರಿ,ಮರೆಪ್ಪ ನಗರಗುಂಡ,ಶರಣು ಮೇಟಿ,ರಂಗಯ್ಯ ಬೂದೂರು ಸೇರಿ ಅನೇಕರಿದ್ದರು.