ಇಫ್ತೆಯಾರ್ ಕೂಟದಲ್ಲಿ ಸಂಸದ ಜಾಧವ್ ವಾಕ್ಫ್ ಮಂಡಳಿ ಅಧ್ಯಕ್ಷ ಮಹಮದ್ ಷಫಿ ಸಾ-ಆದಿ ಭಾಗಿ | Iftar Party with MP Jadhav and waqf board president

0
187

ಕಲಬುರಗಿ: ಮಂಗಳವಾರ ಸಂಜೆ ನಗರದ ಖಾಜಾ ಬಂದಾ ನವಾಜ್ ದರ್ಗಾದ ಛೋಟಿ (ಸಣ್ಣ) ದರ್ಗಾದ ಪೀಠಾಧಿಪತಿ ನದಿಮ ಉಲ್ಲಾ ಹುಸೈನಿ ಮನೆಯಲ್ಲಿ ನಿಜಾಮ್ ಬಾಬಾ ಅವರ ಸಹೋಗದಲ್ಲಿ ಆಯೋಜಿಸಿದ ಇಫ್ತೆಯಾರ್ ಕೂಟದಲ್ಲಿ ರಾಜ್ಯ ವಾಕ್ಫ್ ಮಂಡಳಿ ಅಧ್ಯಕ್ಷರಾದ ಮಹಮದ್ ಷಫಿ ಸಾ-ಆದಿ ಮತ್ತು ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಭಾಗವಹಿಸಿದರು.

Contact Your\'s Advertisement; 9902492681

ಇದಕ್ಕೂ ಮುನ್ನಾ ವಾಕ್ಫ್ ಮಂಡಳಿ ಅಧ್ಯಕ್ಷರಾದ ಮಹಮದ್ ಷಫಿ ಸಾ-ಆದಿ ಅವರು ಆಳಂದ ಹಜರತ್ ಲಾಡ್ಲೆ ಮಶಾಕ್ ದರ್ಗಾಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ನಿಲೂರು ದರ್ಗಾದ ಪೀಠಾಧಿಪತಿ ವಸೀಮ್ ಬಾಬಾ, ಬಿಜೆಪಿ ಮುಖಂಡರಾದ ಕೆ.ಎಮ್ ಬಾರಿ, ಕೆಎಮ್ಡಿಸಿ ನಿರ್ದೇಶಕರಾದ ಸದ್ದಾಮ್ ಹುಸೇನ್ ವಜಿರಗಾಂವ, ವಕ್ಫ್ ಬೋರ್ಡ್ ಜಿಲ್ಲಾ ಅಧಿಕಾರಿ ಹಜರ್ ಅಲಿ, ಗುತ್ತೇದಾರರಾದ ಇಮ್ತೆಯಾಜ್ ಅಲಿ, ವಜಿದ್, ನಿಜಾಮೋದ್ದಿನ್ ಸೌಕಾರ್, ಮತೀನ್ ಸೌದಾಗರ್ ಚಿಂಚೋಳಿ, ಅಬ್ದುಲ್ ರಜಾಕ್ ಚೌಧರಿ ಅಫಜಲಪುರ, ಡಾ. ಮುನೀರ್ ಹಾಗೂ ಹಬಿಬುಲ್ಲಾಹ ಸರ್ಮಸ್ತ್ ಸೇರಿದಂತೆ ಹಲವರು ಇಫ್ತೆಯಾರ್ ಕೂಟದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಕಲಬುರಗಿಯಲ್ಲಿ ಏಪ್ರಿಲ್ 18 ರಿಂದ 30ವರೆಗೆ ಆರೋಗ್ಯ ಮೇಳ: ಡಾ. ಉಮೇಶ ಜಿ ಜಾಧವ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here