“ಅಂಬೇಡ್ಕರ್ ರವರ ವಿಚಾರಧಾರೆ ಅಳವಡಿಸಿಕೊಳ್ಳಲು : ಸೋಮಶೇಖರ ಎಲ್.ಲಮಾಣಿ ಕರೆ “

0
64

ಕೊಪ್ಪಳ (ಕುಕನೂರ) : ‘ಪಟ್ಟಣದ ವಿದ್ಯಾನಂದ ಗುರುಕುಲ ಪ್ರೌಢಶಾಲೆ ಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜಯಂತ್ಸೋತ್ಸವವನ್ನು ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಗುಚ್ಛ ಅರ್ಪಿಸಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಶಾಲೆಯ ಉಪಪ್ರಾಂಶುಪಾಲ ಸೋಮಶೇಖರ ಎಲ್. ಲಮಾಣಿ ಮಾತಾನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವನದ್ದುದ್ದಕೂ ಹಲವಾರು ಸುಧಾರಣೆ ಕಾರ್ಯಗಳನ್ನು ಜಾರಿಗೆ ತಂದರು. ದಲಿತರು ಹಾಗೂ ಅಸ್ಪೃಶ್ಯರಿಗೆ ಸಮಾನ ಹಕ್ಕುಗಳಿಗಾಗಿ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿದರು. ವಿಶೇಷವಾಗಿ ಶಿಕ್ಷಣಕ್ಕಾಗಿ ನೀಡಿದ ಕೊಡುಗೆ ಅಪಾರ ಮತ್ತು ಅಂಬೇಡ್ಕರ ಅವರು ಯಾವದೇ ವರ್ಗ ಹಾಗೂ ಜಾತಿಯನ್ನು ಲೆಕ್ಕಿಸದೆ ತುಳಿತಕ್ಕೊಳಗಾದವರ, ಬಡವರ ಹಕ್ಕುಗಳಿಗಾಗಿ, ನ್ಯಾಯಕ್ಕಾಗಿ ನಿರಂತರ ಹೋರಾಡಿದರು’ ಎಂದು ಹೇಳಿದರು.

Contact Your\'s Advertisement; 9902492681

ಇದನ್ನೂ ಓದಿ: ಆತ್ಮಹತ್ಯೆ ಪ್ರಕರಣ: ಈಶ್ವರಪ್ಪ ಒಂದೆರಡು ದಿನದಲ್ಲಿ ರಾಜೀನಾಮೆ ಕೊಡಬಹುದು-ಹೆಚ್.ಡಿ.ಕುಮಾರಸ್ವಾಮಿ 

ಬಾಬಾ ಸಾಹೇಬ ಅಂಬೇಡ್ಕರ್ ಅವರ ಜೀವನ ಹೋರಾಟ ನಮಗೆ ಅತ್ಯಂತ ಸ್ಫೂರ್ತಿದಾಯಕವಾಗಿದೆ. ಇಂತಹ ಮಹಾನ್ ಚೇತನವನ್ನು ನೆನಪಿಸಿಕೊಳ್ಳುವ ಮತ್ತು ಅವರ ನಂಬಿಕೆಗಳು, ಆದರ್ಶ ಬೋಧನೆಗಳು ಮತ್ತು ಕಾರ್ಯಗಳನ್ನು ಗೌರವಿಸುವ ಸುದಿನ. ಅವರು ಕನಸು ಕಂಡಂತೆ ಭಾರತವನ್ನು ದೇಶವನ್ನಾಗಿ ನನಸು ಮಾಡಲು ನಾವೆಲ್ಲರೂ ಪ್ರತಿಜ್ಞೆ ಮಾಡಿ ಮುಂದೆ ಬರಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಸಿಬ್ಬಂದಿಗಳಾದ ಶಿವಕುಮಾರ್ ಹೆಳವರ, ಗಿರೀಶ್ ನಿಲೋಗಲ್, ಆರ್.ಎಂ.ದೇವರೆಡ್ಡಿ, ಗೀತಾ ಪದಕಿ, ಶ್ರೀಲತಾ ಕೆ., ಅರುಂದತಿ ಬಟನೂರ, ಉದಯ ನಿಂಗಾಪುರ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here