CUETಯಿಂದ ಬಡ, ಗ್ರಾಮೀಣ, ದಲಿತ, ಮಹಿಳಾ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದಿಂದ ದೂರ ಇಡುವ ಹುನ್ನಾರ: KVS

0
51

ಕಲಬುರಗಿ: CUET ಮುಖಾಂತರ ಬಡ, ಗ್ರಾಮೀಣ, ದಲಿತ, ಮಹಿಳಾ ವಿದ್ಯಾರ್ಥಿಗಳನ್ನು ಪದವಿ ಶಿಕ್ಷಣದಿಂದಲೂ ದೂರ ಇಡುವ ಸರ್ಕಾರದ ಹುನ್ನಾರವಾಗಿದ್ದು, ತಕ್ಷಣ ಕೈಬಿಟ್ಟು ಖಾಸಗೀ ಶಿಕ್ಷಣ ಸಂಸ್ಥೆಗಳ ಡೋನೇಷನ್ ಫೀಸ್ ಮೇಲೆ ನಿಯಂತ್ರಣ ಹೇರಿ ಸರ್ವಾಜನಿಕ ಒಡೆತನದ ಉಚಿತ ಗುಣಮಟ್ಟದ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡಿ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಾಜವಾಳ, 2011 ರ ಜನಗಣತಿಯ ಪ್ರಕಾರ ದೇಶದ ಶೆ. 8.15% ಮಾತ್ರ ಪದವಿಧರರು ಇದ್ದಾರೆ ಕಳೆದ ಒಂದು ದಶಕದಲ್ಲಿ ಪದವಿ ಮತ್ತು ಉನ್ನತ ಶಿಕ್ಷಣಕ್ಕೆ ದಾಖಲಾತಿ (GER) ಸಾಪೇಕ್ಷವಾಗಿ ಹೆಚ್ಚಾಗಿದೆಯಾದರೂ ಒಟ್ಟರೆ ಶಿಕ್ಷಣದ ಮೇಲಿನ ಸಾರ್ವಜನಿಕ ಹೂಡಿಕೆ ಕಡಿಮೆಯಾಗುತ್ತಿದೆ. ಶಿಕ್ಷಣ ಮಾರುಕಟ್ಟೆಯ ಸರಕಾಗಿ ಮರ್ಪಾಡಾಗಿ ವಿದ್ಯಾರ್ಥಿ-ಪೋಷಕರು ಫೀಸ್ ಡೋನೇಷನ್ ಹಾವಳಿಗೆ ಸಿಕ್ಕಿ ನಲುಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಇದನ್ನೂ ಓದಿ: “ಅಂಬೇಡ್ಕರ್ ರವರ ವಿಚಾರಧಾರೆ ಅಳವಡಿಸಿಕೊಳ್ಳಲು : ಸೋಮಶೇಖರ ಎಲ್.ಲಮಾಣಿ ಕರೆ “

ಉಚಿತ ಗುಣಮಟ್ಟದ ಸಮಾನ ಶಿಕ್ಷಣವನ್ನು ಸರ್ಕಾರಗಳು ಖಾತರಿ ಮಾಡುವ ಬದಲಾಗಿ ಖಾಸಗೀಕರಣಕ್ಕೆ ಒತ್ತು ನೀಡುತ್ತಿದೆ. NEP-2020 ರಲ್ಲಿ ಖಾಸಗೀ ವಿವಿಗಳಿಗೆ ಒತ್ತು ನೀಡುವ ಮತ್ತು ಪದವಿಯ ಮೂರು ವರ್ಷದ ಯಾವುದೇ ಶೈಕ್ಷಣಿಕ ವರ್ಷದಲ್ಲಿ ಹೊರಗುಳಿದರೂ (ಡ್ರಾಪ್‌ಔಟ್) ಸರ್ಟಿಫಿಕೇಟ್ ನೀಡುವಂತ ಶಿಫಾರಸುಗಳನ್ನು ಮಾಡಿದೆ ಇದರಿಂದ ಆರ್ಥಿಕ-ಸಾಮಾಜಿಕವಾಗಿ ಹಿಂದುಳಿದಿರುವ ಕುಟುಂಬದ ವಿದ್ಯಾರ್ಥಿಗಳು ಶಿಕ್ಷಣದಿಂದ ಮತ್ತಷ್ಟು ಹೊರಗುಳಿಯುವ ಅಪಾಯ ಎದುರಾಗಿದೆ ಎಂದು ದುರಿದ್ದಾರೆ.

ಗಾಯದ ಮೇಲೆ ಬರೆ ಎಳೆದ ನಂತರ ಈಗ ಬೆಂಕಿಯ ಜೊತೆ ಸರಸವಾಡಲು ಬಡ ವಿದ್ಯಾರ್ಥಿಗಳನ್ನು ನೂಕುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಪದವಿ-ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳು ತಲುಪಲು ಸುಲಭ ಹಾಗೂ ಪರಿಣಾಮಕಾರಿ ಮಾರ್ಗಗಳನ್ನು ನಿರ್ಮಾಣ ಮಾಡುವ ಬದಲಾಗಿ ಬಿಎ, ಬಿಎಸ್ಸಿ, ಬಿಕಾಂ ಮತ್ತು ಸಮಾನಾಂತರ ಪದವಿಗಳಿಗೆ ಕೇಂದ್ರಿಯ ವಿವಿ ಮಾದರಿಯ, ಸೆಂಟ್ರಲ್ ಯೂನಿವರ್ಸಿಟಿ ಎಂಟ್ರೆನ್ಸ್ ಟೆಸ್ಟ್ (CUET) ಅನ್ನು ಎಲ್ಲಾ ರಾಜ್ಯ ವಿವಿಗಳಿಗೆ ವಿಸ್ತರಿಸಲು UGC ಆದೇಶಿಸಿದ್ದು ಕರ್ನಾಟಕದ 25 ವಿವಿಯ ಕುಲಪತಿಗಳು ಇದಕ್ಕೆ ಒಪ್ಪಿಗೆ ಸೂಚಿಸಿ ಏಪ್ರಿಲ್ 6 ರಿಂದ ನೊಂದಣಿಯನ್ನೂ ಶುರು ಮಾಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆತ್ಮಹತ್ಯೆ ಪ್ರಕರಣ: ಈಶ್ವರಪ್ಪ ಒಂದೆರಡು ದಿನದಲ್ಲಿ ರಾಜೀನಾಮೆ ಕೊಡಬಹುದು-ಹೆಚ್.ಡಿ.ಕುಮಾರಸ್ವಾಮಿ 

ಪದವಿ ಶಿಕ್ಷಣಕ್ಕೂ ಪ್ರವೇಶ ಪರೀಕ್ಷೆಯನ್ನು ಮಾಡಿ ವಿದ್ಯಾರ್ಥಿಗಳನ್ನು ಫಿಲ್ಟರ್ ಮಾಡುವ ಸರ್ಕಾರದ ಈ ಹುನ್ನಾರ ಖಂಡನೀಯ. ಇದು ಪಿಯು/12 ನೇ ತರಗತಿಯನ್ನು ನಗಣ್ಯ ಮಾಡುವುದಲ್ಲದೆ ಈ ಪ್ರವೇಶ ಪರೀಕ್ಷೆಯನ್ನು ಎದುರಿಸಲು ತಯಾರಿ ಮಾಡಿಸುವ ಖಾಸಗೀ ಕೋಚಿಂಗ್ ಸೆಂಟರ್ ಗಳು ಪಾರ್ಥೇನಿಯಮ್ ಗಿಡಗಳಂತೆ ಹುಟ್ಟಿಕೊಂಡು ಸುಲಿಗೆಗೆ ಮುಂದಾಗಲಿವೆ. ಕೋಚಿಂಗ್ ಪಡೆಯಲು ಶಕ್ತರಾಗುವ ಶ್ರೀಮಂತ ಮಕ್ಕಳಿಗೆ ಉನ್ನತ ಗುಣಮಟ್ಟದ ಕಾಲೇಜು ಮತ್ತು ಬಡ, ಗ್ರಾಮೀಣ, ದಲಿತ ವಿದ್ಯಾರ್ಥಿಗಳಿಗೆ ಕಳಪೆ ಅಥವಾ ಪದವಿ ಶಿಕ್ಷಣದಿಂದಲೇ ಹೊರಗುಳಿಸುವ ವಾತವರಣವನ್ನು ಸರ್ಕಾರ ಪ್ರಜ್ಞಾಪೂರ್ವಕವಾಗಿ ಮಾಡಿತ್ತಿದೆ ಮತ್ತು ಖಾಸಗೀ ವಿವಿ-ಕೋಚಿಂಗ್ ಸೆಂಟರ್ ಗಳ ವಸೂಲಿಯ ಪರವಾಗಿ ಯಾವುದೇ ಮುಜುಗರವಿಲ್ಲದೆ ನಿಂತು ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದೆ ಎಂದು ಕೆ.ವಿ.ಎಸ್ ಆರೋಪಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here