ಕಲಬುರಗಿ: ವಾಡಿ ಪಟ್ಟಣದಲ್ಲಿ ಏ.೧೬ ರಂದು ಹಿಂದುಪರ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿರುವ ಶ್ರೀರಾಮ ಜಯಂತಿ ಆಚರಣೆಗೆ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ, ಆಂದೋಲಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿಯನ್ನು ಆಹ್ವಾನಿಸಲಾಗಿದೆ. ಪ್ರಚೋಧನಕಾರಿ ಭಾಷಣದಿಂದ ಕೋಮು ಸೌಹಾರ್ಧತೆ ಕದಡುವ ಸ್ವಾಮೀಜಿಯನ್ನು ಯಾವೂದೇ ಕಾರಣಕ್ಕೂ ವಾಡಿ ನಗರ ಪ್ರವೇಶಿಸಲು ಬಿಡಬಾರದು ಎಂದು ಪ್ರಗತಿಪರ ಚಿಂತಕ, ನ್ಯಾಯವಾದಿ ಶ್ರವಣಕುಮಾರ ಮೊಸಲಗಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ದೇವಾಪುರ ಹಿರೇಹಳ್ಳದ ಬಳಿ ಬೈಕ್ ಗುದ್ದಿ ಮಹಿಳೆ ಸಾವು
ಈ ಕುರಿತು ಗುರುವಾರ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ಮಹಾಂತೇಶ ಜಿ.ಪಾಟೀಲ ಅವರಿಗೆ ಲಿಖಿತ ದೂರು ಕೊಟ್ಟಿರುವ ವಕೀಲ ಮೊಸಲಗಿ, ಚಿತ್ತಾಪುರ ತಾಲೂಕಿನಲ್ಲಿ ಸೌಹಾರ್ಧತೆಯಿಂದ ಬಾಳುತ್ತಿರುವ ಹಿಂದೂ ಮತ್ತು ಮುಸ್ಲೀಮರ ಮಧ್ಯೆ ಬಿರುಕು ತಂದಿಡುವ ಕೆಟ್ಟ ಉದ್ದೇಶದಿಂದ ಕೋಮು ಶಕ್ತಿಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಶಾಂತಿಯಿಂದ ಬದುಕುತ್ತಿರುವ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಸುವ ಉದ್ದೇಶದಿಂದ ಸ್ಥಳೀಯ ಕೋಮುವಾದಿ ಸಂಘಟನೆಗಳು ಆಂದೋಲಾ ಶ್ರೀಗೆ ವೇದಿಕೆ ಸಿದ್ಧಪಡಿಸಿವೆ.
ಇದನ್ನೂ ಓದಿ: ನಾನು ಮಣ್ಣಿಗೆ ಹೋಗುವುದರೊಳಗೆ ಜೆಡಿಎಸ್ʼನಿಂದ ದಲಿತ ಸಿಎಂ ಮಾಡುವೆ: ಕುಮಾರಸ್ವಾಮಿ ಘೋಷಣೆ
ಹೋದ ಕಡೆಗಳಲ್ಲೆಲ್ಲ ಪ್ರಚೋಧನಕಾರಿ ಭಾಷಣ ಮಾಡುವ ಈ ಸ್ವಾಮೀಜಿ, ಚಿತ್ತಾಪುರ ಮತಕ್ಷೇತ್ರದಲ್ಲೂ ಭಾವನಾತ್ಮಕವಾಗಿ ಜನರನ್ನು ಕೆರಳಿಸುವ ಸಾಧ್ಯತೆಯಿದೆ. ಯುವಜನರ ತಲೆಯಲ್ಲಿ ಧರ್ಮದ ವಿಷ ಬೀಜ ಬಿತ್ತುವ ಇಂತಹವರನ್ನು ನಗರ ಪ್ರವೇಶಕ್ಕೆ ಅವಕಾಶ ನೀಡಬಾರದು. ಮುನ್ನೆಚ್ಚರಿಕೆ ಕ್ರಮವಹಿಸುವ ಮೂಲಕ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು ಎಂದು ಶ್ರವಣಕುಮಾರ ಮೊಸಲಗಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಫ್ಲಿಪ್ ಕಾರ್ಟ್ ಸಮರರ್ಥ್ ನ `ಕ್ರಾಫ್ಟೆಡ್ ಬೈ ಇಂಡಿಯಾ’ದ 2 ನೇ ಆವೃತ್ತಿಯ ಮಾರಾಟ ಮೇಳ