ನೆಮ್ಮದಿ ಬದುಕಿಗೆ ದಾರಿ ದೀಪ ಬಿ ಆರ್. ಅಂಬೇಡ್ಕರ್: ಡಾ. ಶ್ರೀಮಂತ ಹೋಳ್ಕರ

0
17

ಕಲಬುರಗಿ ನೂತನ ಪದವಿ ಮಹಾವಿದ್ಯಾಲಯzಲ್ಲಿ  ಡಾ ಬಿ ಆರ್. ಅಂಬೇಡ್ಕರ್ ರವರ ೧೩೧ನೇ ಜಯಂತಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಶ್ರೀಮಂತ ಹೋಳ್ಕರ ಅವರು ಅಂಬೇಡ್ಕರ್ ಅವರ ಜೀವನ, ಸಂವಿಧಾನದ ಪ್ರಾಮುಖ್ಯತೆ, ಸಂವಿಧಾನದನ ರಚನೆಯಲ್ಲಿ ಅಂಬೇಡ್ಕರ ಅವರ ಪಾತ್ರ ಹಾಗೂ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಸಂವಿಧಾನದ ಅವಶ್ಯಕತೆ ಕುರಿತು ಮಾತನಾಡಿದರು.

ಮಹಾವಿದ್ಯಾಲಯ  ಪ್ರಾಂಶುಪಾಲ ವೆಂಕಟೇಶ ಕುಲಕರ್ಣಿ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಅಂಬೇಡ್ಕರ ಅವರ ಜೀವನ ಪ್ರತಿ ಭಾರತೀಯರಿಗೂ ಆದರ್ಶಮಯವಾಗಿದ್ದು ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ಪ್ರೀತಿಸುತ್ತಾ ತಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕೆಂದು ಎಂದು ಕರೆನೀಡಿದರು.

Contact Your\'s Advertisement; 9902492681

ಇದನ್ನೂ ಓದಿ: ಭಾಲಿ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಚಂದಮ್ಮ ಪ್ರಾರ್ಥನಾ ಗೀತೆ ಹಾಡಿದಳು. ಕಾರ್ಯಕ್ರಮದ ಆಯೋಜಕರಾದ ಡಾ ದಯಾನಂದ ಶಾಸ್ತ್ರೀ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.  ವಿದ್ಯಾರ್ಥಿಗಳಾದ ಅಭಿಶೇಷಕ, ಅಕ್ಷತಾ,ಸಾಯಬಣ್ಣ ಅಂಬೇಡ್ಕರ ಅವರ ಕುರಿತು ಮಾತನಾಡಿದರು.

ಡಾ ಕಾಶಿನಾಥ ನೂಲಕರ್ ಅವರು ತಮ್ಮ ತಾಯಿ ಸ್ಮರಣಾರ್ಥ ರಾಜ್ಯಶಾಸ್ತ್ರ ವಿಷಯದಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿದರು.

ಇದನ್ನೂ ಓದಿ: ಭಾಲ್ಕಿ ಸಂಸ್ಥಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಡಾ ಮಲ್ಲಿನಾಥ ಎಸ್ ತಳವಾರ ನಿರೂಪಿಸಿದರು. ಪ್ರೊ ಸುತೇಜ್ ದೇಶಮುಖ ವಂದಿಸಿದರು. ಮಹಾವಿದ್ಯಾಲಯದ ಭೋಧಕ ಸಿಬ್ಬಂದಿ ಮತ್ತು ಭೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here