ಕಲಬುರಗಿ ಭ್ರಷ್ಟಾಚಾರ ಜಿಲ್ಲೆಯಾಗಿದೆ: ಸೂಕ್ತ ತನಿಖೆಗೆ ಅಲ್ಲಮಪ್ರಭು ಪಾಟೀಲ್ ಆಗ್ರಹ

0
55
ಅತಿವೃಷ್ಟಿಯಿಂದ ಹಾನಿಗೊಳಗಾದ ಹುಣಸಿ ಹಡಗಿಲ್‌ ಕೆರೆ ರಿಪೇರಿಗೆಂದು ಇಟ್ಟಿರುವ 23. 68 ಲಕ್ಷರು ಹಣ ಗುಳುಂ ಆಗಿದೆ. ಜಂಗಲ್‌ ಕಟ್ಟಿಂಗ್‌ ಎಂದು ನಾಲ್ಕಾರು ಮುಳ್ಳಿನ ಗಿಡ ಕತ್ತರಿಸಿ, ನಾಲ್ಕಾರು ಕಲ್ಲು ನೆಟ್ಟಿದ್ದು ಬಿಟ್ಟರೆ ಇಲ್ಲೇನು ಮಾಡಿಲ್ಲ. ಇದೇ ದೀಶಿ 44. 88 ಲಕ್ಷ ರು ಮೊತ್ತದ ಮೇಳಕುಂದಾ ಕೆರೆ ದುರಸ್ಥಿಯಲ್ಲಿ ಹತಗುಂದಾ (ಯಳವಂತಿ) ಕೆರೆ ದುರಸ್ಥಿಯಲ್ಲಿಯೂ 44. 83 ಲಕ್ಷರು ಹಣದಲ್ಲಿ ಶ. 75 ರಷ್ಟು ಹಣ ಕೆಲಸ ಮಾಡದೆ ಬಿಲ್ ಎತ್ತಿ ಹಾಕಿ ಸ್ವಾಹಾ ಮಾಡಲಾಗಿದೆ. ಈ ಊರುಗಳಲ್ಲಿರುವ ಜನರೇ ಕೆರೆ ಠಿಪೇರಿ ಆಗೇ ಇಲ್ಲ ಬಿಲ್‌ ಎತ್ತಿದ್ದಾರಂದು ಭೇಟಿ ನೀಡಿದಾಗ ಗೊಳಾಡಿದ್ದಾರೆ. ಈಗಲೂ ಯಾರಾದರೂ ಹೋಗಿ ಕೆರೆಗಳ ದುರವಸ್ಥೆ ನೋಡಬಹುದಾಗಿದೆ. ಈ ರೀತಿ ಬಂದ ಹಣಗಳ ಸಣ್ಣ ಉದಾಹರಣೆಗಳು ಇವು. ಇದಕ್ಕಿಂತ ದೊಡ್ಡ ಹಗರಣಗಳು ಇವೆ ಎಂದು ತಿಳಿಸಿದರು.

ಕಲಬುರಗಿ: ಕರ್ನಾಟಕದಲ್ಲಿ ಶೇ. 40 ಕಮೀಷನ್‌ ನಡೆಯುತ್ತಿದೆ ಎಂಬುದನ್ನು ಖುದ್ದು ಗುತ್ತಿಗೆದಾರರೇ ಹೇಳಿದ್ದಾರೆ. ರಾಜ್ಯದಲ್ಲೇ ಅತ್ಯಂತ ಭ್ರಷ್ಟ ಆಡಳಿತ ಕಲಬುರಗಿಯಲಿದೆ. ಇದಕ್ಕೆ ಪುರಕವಾಗಿ ಇಲ್ಲಿನ ಕೆಕೆಆರ್‌ಡಿಬಿಯಲ್ಲಿಯೂ ಶೇ. 50 ಕ್ಕಿಂತ ಅಧಿಕ ಭ್ರಷ್ಟಾಚಾರ ವಿರೋಧ ಅನೇಕ ಗುತ್ತಿಗೆದಾರರು ಹೇಳುತ್ತಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ಹಿರಿಯ ಮುಖಂಡರಾದ ಅಲ್ಲಮಪ್ರಭು ಪಾಟೀಲ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಸಮತಾ ಸೈನಿಕ ದಳದ ವತಿಯಿಂದ ಅಂಬೇಡ್ಕರ ಜಯಂತಿಯ ಪ್ರಯುಕ್ತ ಅನ್ನಸಂತರ್ಪಣೆ

Contact Your\'s Advertisement; 9902492681

ಶುಕ್ರವಾರ ನಗರ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಇಲ್ಲಿನ ಆಡಳಿತ ಪಕ್ಷದ ಶಾಸಕರೆಲ್ಲರೂ ಶೇ. 40 ಕ್ಕಿಂತ ಹಚ್ಚು ಕಮಿಷನ್‌ ಪಡೆದು ಜನಹಿತ ಮರೆತು ತಮ್ಮ ಐಷಾರಾಮಿ ಬದುಕು ಮಾಡುತ್ತಿದ್ದಾರೆಂಬ ಅಪಖ್ಯಾತಿಗೆ ಒಳಗಾಗಿದ್ದಾರೆ ಎಂದು ಆರೋಪಿಸಿದರು.

ಕೆಕೆಆರ್‌ಡಿಬಿ, ಪಿಡಬ್ಲೂಡಿ. ಆರ್‌ಡಿಪಿಆರ್‌, ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ. ಸಣ್ಣ ನೀರಾವರಿ, ಜಲಸಂಪನ್ಮೂಲ ಹೀಗೆ ಅನೇಕ ಇಲಾಖೆಗಳಲ್ಲಿ ನಿಗಮ- ಮಂಡಳಿಗಳಲ್ಲಿ ಕಾಮಗಾರಿ ಗುತ್ತಿಗೆ ಪಡೆಯುವ ಗುತ್ತಿಗದಾರದು, ನಿತ್ಯ ಸರಕಾರಿ ಕಚೇರಿಗಳಿಗೆ ಅಲೆದು ಸುಸ್ತಾಗುವ ಜನ ಸಾಮಾನ್ಯರು ಹಣವಿಲ್ಲದೆ. ಕಮೀಷನ್‌, ಪರ್ಸೆಂಟೇಜ್‌ ವಹಿವಾಟು ಇಲ್ಲದೆ ಕೆಲಸವೇ ಆಗೋದಿಲ್ಲವೆಂಬ ನಿರ್ಣಯಕ್ಕೆ ಬಂದಿದ್ದಾರೆ. ಶೇ. 14 ಆಯಾ ಕೆಕೆಆರ್‌ಡಬಿ ಅದ್ಯಕ್ಷರಿಗೆ ಹೋಗುತ್ತದೆ. ಶೇ 4 ರಷ್ಟು ಕಾಮಗಾರಿ ನಡೆಯುವ ಜಾಗ ಸ್ಥಳದಲ್ಲಿರುವ ಆಯಾ ಶಾಸಕರ ಕಾರ್ಯಕರ್ತರ ಸಿಂಡಿಕೇಟ್‌ಗೆ ಶೇ. 12 ರಷ್ಟು ಆಯಾ ಗ್ರಾಮಗಳಲ್ಲಿ ವೆಚ್ಚ ಮಾಡಬೇಕು. ಗುಣಮಟ್ಟ ವರದಿ ಮಾಡಲು ಬರುವವರಿಗೆ ಶೇ. 2, ಮಟೇರಿಲ್‌ ಟೆಸ್ಟಿಂಗ್‌ಗೆ ಶೇ. 1 ಹೀಗೆ ಶೇ. 40 ಕ್ಲಿಂತಲೂ ಅಧಿಕ ಹಣ ಕಮೀಷನ್‌ ರೂಪದಲ್ಲಿ ಭ್ರಷ್ಟಾಚಾರವಾಗುತ್ತಿದೆ ಎಂದು ಅಂಕಿ ಅಂಶಗಳನ್ನು ಹೊರಹಾಕಿದ್ದಾರೆ..

ಇದನ್ನೂ ಓದಿ:ವಿಶ್ವರತ್ನ ಘನ ಪಂಡಿತ ಡಾ. ಬಿ.ಆರ್. ಅಂಬೇಡ್ಕರ್: ಚಂದ್ರಶೇಖರ್ ಕಟ್ಟಿಮನಿ

ಕಲಬುರಗಿಯಲ್ಲಂತೂ ಕಳೆದ 4 ವರ್ಷದಿಂದ ಕೆಕೆಆರ್‌ಡಿಬಿ ಕೆಲಸಗಲೇ ಆಗಿಲ್ಲ. ನೂರಾರು ಕಾಮಗಾರಿ ಮಂಜೂರಾದರೂ ಶುರುವಾಗಿಲ್ಲ, ಮೊನ್ನೆಯಷ್ಟೇ ಮಂಡಳಿ ಅಧ್ಯಕ್ಷರೇ ಈ ಬಗ್ಗೆ ಆತಂಕ ಹೊರಹಾಕಿದ್ದಾರೆ. ಅವರಿಗೆ ಗೊತ್ತಿದೆ ಕಾಮಗಾರಿ  ಆಕಾಗುತ್ತಿಲ್ಲವಂದು, ಈದಾಗ್ಯೂ ಮೊಸಳೆ ಕಣ್ಣೀರು ಸುರಿಸತ್ತಿದ್ದಾರೆ. ಗುತ್ತಿಗೆದಾರರೇ ಹೇಳುವಂತೆ ಕಮೀಷನ್‌ ಕೈ ತಲುಪದೆ ಪೂಜೆಗೇ ಶಸಾಕರು, ಸಂಸದರು ಬರೋದಿಲ್ಲವಂತೆ! ಅದಕ್ಕೇ ಕಲಬುರಗಿ ಜಿಲ್ಲೆಯಲ್ಲಿ ಕಾಮಗಾರಿ ನೆನೆಗುದ್ದು, ಭ್ರಷ್ಟಾಚಾರ ಹಾಸುಹೊಕ್ಕಾಗಿದೆ ಎಂದು ಆರೋಪ ಮಾಡಿದರು.

ಹೀಗಾದರೆ ಗುಣಮಟ್ಟದ ಕೆಲಸ ಹೇಗಾಗಲು ಸಾಧ್ಯ? ಕೆಕೆಆರ್‌ಡಿಬಿಯಲ್ಲಂತೂ 1, 506 ಕೋಟಿ ರು ಅನುದಾನದಲ್ಲಿ ಕೊಟಿಗಟ್ಟಲೆ ಅನುದಾನ ಇದೇ ರೀತಿ ಸೋರಿಕೆಯಾಗುತತಿದ್ದರೂ ಕೇಳೋರಿಲ್ಲ ಹೀಗಾಗಿಯೇ ಮಂಡಳಿಯ ಕೆಲಸಗಲು ಸಮಯಕ್ಕೆ ಸರಿಯಾಗಿ ಮುಗಿಯುತ್ತಿಲ್ಲ ಆರಂಭವಾಗುತ್ತಿಲ್ಲ. ಹೀಗಾಗಿ ಮೂಲ ಸವಲತ್ತು ನಿರ್ಮಾಣವಾಗದೆ ಕಲ್ಯಾಣ ನಾಡಿನ 4। ರಷ್ಟು ತಾಲೂಕುಗಳು ಇಂದಿಗೂ ಹಿಂದುಳಿದ” ಇವೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here