ಸಾಮಾಜಿಕ ಕಾಳಜಿಯುಳ್ಳ ಜನನಾಯಕರು ಅವಶ್ಯಕ : ಡಾ.ಸಾರಂಗಧರ ಶ್ರೀಗಳು

0
107

ಕಲಬುರಗಿ: ಸಮಾಜದಲ್ಲಿರುವ ದೀನ-ದಲಿತ, ಬಡವರು, ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ಸಮ-ಸಮಾಜ ನಿರ್ಮಾಣದ ಬಗ್ಗೆ ಕಳಕಳಿಯುಳ್ಳ, ಅದಕ್ಕಾಗಿ ಶ್ರಮಿಸುವ ಜನನಾಯಕರ ಸಂಖ್ಯೆ ಪ್ರಸ್ತುತ ಸಂದರ್ಭಗಳಲ್ಲಿ ಹೆಚ್ಚಾಗಬೇಕಾಗಿದೆ. ಡಾ.ವಂಟಿ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಸಮಾಜದ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಇಂತಹ ವ್ಯಕ್ತಿಗಳಿಗೆ ರಾಜಕೀಯ ಅದಿಕಾರ ದೊರೆತರೆ ಇನ್ನು ಹೆಚ್ಚಿನ ಮಟ್ಟದಲ್ಲಿ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಜೀಯವರು ಮಾರ್ಮಿಕವಾಗಿ ಹೇಳಿದರು.

ಜರ್ಮನಿಯ ಪೀಸ್ ಯುನಿವರ್ಸಿಟಿಯ ಗೌರವ ಡಾಕ್ಟರೇಟ್‌ಗೆ ಭಾಜನರಾದ ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಅವರಿಗೆ ಅಭಿನಂದನಾ ಬಳಗವು ನಗರದ ಎಸ್.ಎಂ.ಪಂಡಿತ ರಂಗಮಂದಿರದ ಭ್ರಾತೃತ್ವದ ಕಂಪು ವೇದಿಕೆಯಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಅಭಿನಂದನೆ, ಸರ್ವಧರ್ಮಗಳ ಗುರುಗಳ, ಮುಖಂಡರ ಸಂಗಮ, ಜಿಲ್ಲೆಯ ವಿವಿಧ ಕ್ಷೇತ್ರದ ೭೦ ಜನ ಸಾಧಕರಿಗೆ ಪ್ರಶಸ್ತಿ, ಗೌರವದ ಐತಿಹಾಸಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ನಗ್ನ ಸತ್ಯ ಅನಾವರಣಗೊಳಿಸುವ “ಭಾವ ದೀಪ್ತಿ”

ಇಸ್ಲಾಂ ಧಾರ್ಮಿಕ ಮೌಲ್ವಿ ಜನಾಬ್ ಆದಮ್ ಅಲಿ ಬಾಬಾ, ಕ್ರೈಸ್ಥ ಧಾರ್ಮಿಕ ಮುಖಂಡ ರೆವರೆಮಡ್ ಸುಮಂತ್ ಸರಡಗಿ, ಭೌದ್ಧ ಧರ್ಮದ ಭಂತೆಜೀ ವರಜ್ಯೋತಿ, ಗುರುನಾನಕ ಮಠದ ಶಿಖ್ ಧಾರ್ಮಿಕ ಮುಖಂಡ ಭಾಯ್ ದೀಪಸಿಂಗ್‌ಜೀ ಮಾತನಾಡುತ್ತಾ, ಡಾ.ವಂಟಿಯವರ ಬಹುಮುಖ ವ್ಯಕ್ತಿತ್ವ, ಸಮಾಜಮುಖಿ ಕಾರ್ಯವನ್ನು ಮುಕ್ತಕಂಠದಿಂದ ಕೊಂಡಾಡಿದರು.

ಅಭಿನಂದನಾ ಸತ್ಕಾರ ಸ್ವೀಕರಿಸಿರಿ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಕಳೆದ ಮೂರು ದಶಕಗಳ ಕಾಲದ ಸೇವೆಯನ್ನು ಗುರ್ತಿಸಿ ನನಗೆ ದೊರೆತ ಗೌರವ ನನ್ನ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿದ ಜಿಲ್ಲೆಯ ಸಹೃದಯಿಗಳಿಗೆ ಅರ್ಪಿಸುತ್ತೇನೆ. ಮುಂದೆಯೂ ಕೂಡಾ ತಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಹೀಗೆ ಇರಲಿ. ನಾವೆಲ್ಲರು ಜೊತೆಗೂಡಿ ಬುದ್ಧ-ಬಸವ-ಡಾ.ಅಂಬೇಡ್ಕರ್ ಅವರ ತತ್ವದಡಿಯಲ್ಲಿ ಸಮ-ಸಮಾಜ ನಿರ್ಮಾಣಕ್ಕೆ ನಿರಂತರವಾಗಿ ಶ್ರಮಿಸೋಣ ಎಂದರು.

ಇದನ್ನೂ ಓದಿ: ಅಗ್ನಿಶಾಮಕ ಸೇವಾ ಸಪ್ತಾಹ ಆಚರಣೆ: ಸಾರ್ವಜನಿಕರಿಗೆ ಅಣುಕು ಪ್ರದರ್ಶನ

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಬಸವರಾಜ ದೇಶಮುಖ, ಬಿಜೆಪಿ ಯುವ ಮುಖಂಡ ಪ್ರಫುಲ್ ಎಸ್.ನಮೋಶಿ, ಜೈನ ಧಾರ್ಮಿಕ ಮುಖಂಡ ಶಾಂತಿನಾಥ ಎಸ್.ಪಂಡಿತ, ನಿವೃತ್ತ ಪ್ರಾಂಶುಪಾಲ ಡಾ.ವಿಶ್ವನಾಥ ಚಿಮಕೋಡ್, ಸಮಾಜ ಸೇವಕಿ ಜಯಶ್ರೀ ಎಚ್.ವಂಟಿ, ಅಭಿನಂದನಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸ್ವಾತಂತ್ರ್ಯ ಹೋರಾಟಗಾರ ಶಿವಶರಣಪ್ಪ ಗೋಗಿ ವೆದಿಕೆ ಮೇಲಿದ್ದರು.

ಸಿದ್ಧಾರ್ಥ ಚಿಮ್ಮಾಇದಲಾಯಿ ತಂಡದವರು ಪ್ರಾರ್ಥಿಸಿದರು. ಸಂಗಮೇಶ್ವರ ಸರಡಗಿ ಸ್ವಾಗತಿಸಿದರು. ಶಿವಕಾಂತ ಚಿಮ್ಮಾ, ವೀರೇಶ ಬೋಳಶೆಟ್ಟಿ ನರೋಣಾ ನಿರೂಪಿಸಿದರು. ಸತ್ಕಾರ ಡಾ.ಸಮಾಜದಲ್ಲಿ ಅನೇಕ ಪ್ರತಿಭಾವಂತರು ಎಲೆಮರೆ ಕಾಯಿಯಂತೆ ಅಮೋಘವಾದ ಸೇವೆ ಸಲ್ಲಿಸುತ್ತಿದ್ದಾರೆ. ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ್ ವಂದಿಸಿದರು.

ಇದನ್ನೂ ಓದಿ: ವಿವಿಧ ಸಾಧಕರಿಗೆ ಕಲ್ಯಾಣ ರತ್ನ ಪ್ರಶಸ್ತಿ ಪ್ರದಾನ

ಶಿಕ್ಷಣ ರತ್ನ : ಚಂದ್ರಕಾಂತ ಬಿರಾದಾರ, ಕೆ.ಬಸವರಾಜ, ನರಸಪ್ಪ ಬಿರಾದಾರ ದೇಗಾಂವ, ಸಂಗಮೇಶ್ವರ ಸರಡಗಿ, ಕೃಷಿ ರತ್ನ : ಶರಣಬಸಪ್ಪ ಪಾಟೀಲ; ಹಾಲ್ ಸುಲ್ತಾನಪುರ, ಬಸವರಾಜ ದೇಸಾಯಿ, ಹಣಮಂತಪ್ಪ ಎಂ.ಬೆಳಗುಂಪಿ, ವೈದ್ಯಕೀಯ ರತ್ನ: ಡಾ.ಬಸವರಾಜ ರಾಯಕೋಡ್, ಡಾ.ಸಚಿನ್ ಶಹಾ, ಡಾ.ಪ್ರೀಯದರ್ಶಿನಿ ಎಸ್.ಪಾಟೀಲ, ಡಾ.ಸದಾನಂದ ಪಾಟೀಲ, ಡಾ.ನವನೀತಾ ರಡ್ಡಿ,ಡಾ.ಧನಂಜಯಲು ಪುತ್ತೂರ್, ಕಲಾ ರತ್ನ : ಡಾ.ಸುಬ್ಬಯ್ಯ ಎಂ.ನೀಲಾ, ಸಾಂಸ್ಕೃತಿಕ ರತ್ನ : ಎಂ.ಬಿ.ನಿಂಗಪ್ಪ, ಸಾಹಿತ್ಯ ರತ್ನ: ಡಾ.ಗಾಂಧೀಜಿ ಸಿ.ಮೋಳಕೆರೆ, ಸಾಮಾಜಿಕ ಸೇವಾ ರತ್ನ : ಸಂಜೀವಕುಮಾರ ಶೆಟ್ಟಿ, ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ್, ಸಂಗೀತ ರತ್ನ : ಪ್ರೀತಿ ಕುಲಕರ್ಣಿ, ವಿಜ್ಞಾನ ರತ್ನ : ಚಂದ್ರಶೇಖರ ಪಾಟೀಲ, ತಂತ್ರಜ್ಞಾನ ರತ್ನ: ರಾಘವೇಂದ್ರ ಕೊದಂಪೂರ್, ಉದ್ಯಮ ರತ್ನ: ಶರಣಬಸಪ್ಪ ಆರ್.ಪಾಟೀಲ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಲ್ಲದೆ ೪೨ ಜನ ವಿವಿಧ ಕ್ಷೇತ್ರದ ಮಹನಿಯರಿಗೆ ವಿಶೇಷವಾಗಿ ಸತ್ಕರಿಸಿ, ಗೌರವಿಸಲಾಯಿತು.

ಇದನ್ನೂ ಓದಿ: ಹಿಂದೂ ಕಾರ್ಯಕರ್ತೆ ದಿವ್ಯ ಹಾಗರಗಿ ಮನೆ ಮೇಲೆ ಸಿಐಡಿ ದಾಳಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here