ಮೋದಿಯೊಂದಿಗೆ ತಮ್ಮನ್ನು ಹೋಲಿಸಿಕೊಂಡು ಮತ ನೀಡಿ: ಖರ್ಗೆ

0
242

ಕಲಬುರಗಿ: ಅಭಿವೃದ್ದಿ ವಿಚಾರದಲ್ಲಿ ತಮ್ಮನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೋಲಿಸಿಕೊಂಡು ನೋಡಿ ಮತ ನೀಡುವಂತೆ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಮತದಾರರಿಗೆ ಮನವಿ ಮಾಡಿದರು.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಕಮಲಾಪುರ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಸಂಸತ್ ಸದಸ್ಯನಾಗಿ ಕೇಂದ್ರ ಸಚಿವನಾಗಿ ಕಲಬುರಗಿಗೆ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದೇನೆ. ನಾನು ಮಾಡಿದ ಕೆಲಸಕ್ಕೆ ಈಗ ಕೂಲಿ ಕೇಳುತ್ತಿದ್ದೇನೆ.

Contact Your\'s Advertisement; 9902492681

ಸೋಲಾಪುರ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಇಎಸ್ಐಸಿ, ಜಯದೇವ ಆಸ್ಪತ್ರೆ, ಟೆಕ್ಸಟೈಲ್ ಪಾರ್ಕ್, ಕೇಂದ್ರೀಯ ವಿವಿ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಈ ಕ್ಷೇತ್ರ ಔದ್ಯೋಗಿಕ, ಶೈಕ್ಷಣಿಕ ಹಾಗೂ ಆರ್ಥಿಕ ಬೆಳವಣಿಗಾಗಿ‌ ದುಡಿದಿದ್ದೇನೆ. ಆದರೆ, ಚುನಾವಣೆಗೆ ಮುನ್ನ ಉದ್ಯೋಗ ಸೃಷ್ಟಿ, ಕಪ್ಪುಹಣ ವಾಪಸಾತಿ, ಭಯೋತ್ಪಾದನೆ ನಿರ್ಮೂಲನೆ ಇತ್ಯಾದಿ ಭರವಸೆ ನೀಡಿದ್ದ ಮೋದಿ ಇವುಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದರೆ‌.

ಆದರೂ ಕೂಡಾ ಸುಳ್ಳಗಳನ್ನು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಹಾಗಾಗಿ, ಈ ವ್ಯತ್ಯಾಸವನ್ನು ಗುರುತಿಸಿ ನೀವು ನನ್ನನ್ನು ಪುನರಾಯ್ಕೆ ಮಾಡುವ ಮೂಲಕ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಮಾಜಿ‌ ಸಚಿವ ರೇವೂ ನಾಯಕ್ ಬೆಳಮಗಿ ಮಾತನಾಡಿ‌, ಈ ಭಾಗದ ಅಭಿವೃದ್ದಿಗೆ ಸಹಕಾರವಾಗುವಂತೆ ಮಾಡಲು ಸಂವಿಧಾನದ ಆರ್ಟಿಕಲ್ 371(ಜೆ) ಕ್ಕೆ ತಿದ್ದಪಡಿ ತರಲು ಖರ್ಗೆ ಅವರ ಹೋರಾಟವನ್ನು ಮರೆಯದಂತೆ ಮನವಿ ಮಾಡಿದರು.

ವೇದಿಕೆಯ ಮೇಲೆ ಮಾಜಿ ರಾಜ್ಯ ಸಭಾ ಸದಸ್ಯರ ಕೆ.ಬಿ.ಶಾಣಪ್ಪ, ಮಾಜಿ‌ ಸಂಸದ ಇಕ್ಬಾಲ್‌ ಅಹಮದ್ ಸರಡಗಿ, ಹನಮಂತರಾವ್ ಎಐಸಿಸಿ ಕಾರ್ಯದರ್ಶಿ, ಮಾಜಿ ಸಚಿವ ಬಾಬುರಾವ್ ಚವ್ಹಾಣ್,  ವಿಜಯಕುಮಾರ ರಾಮಕೃಷ್ಣ, ಮಲ್ಲಿಕಾರ್ಜುನ ಪಾಟೀಲ್, ಜಗನ್ನಾಥ್ ಗೋದಿ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here