ಕಲಬುರಗಿ: ನಗರದ ಕನ್ನಡ ಭವನದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ವಚನ ಸಂಜೀವಿನಿ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಸ್ಥೆ ಹಾಗೂ ಡಾ.ಶರಣಕುಮಾರ ಮೋದಿ ಫೌಂಡೇಶನ್ ಆಶ್ರಯದಲ್ಲಿ ಹಿಂದೂಸ್ತಾನಿ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಶ್ರೀಶೈಲ ಸುಲಫಲ ಮಠದ ಶ್ರೀ ಜಗದ್ಗುರು ಡಾ.ಸಾರಂಗ ದೇಶಿಕೇಂದ್ರ ಮಹಾಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಒತ್ತಡದಿಂದ ಮುಕ್ತ ಆಗಬೇಕಾದರೆ ಸಂಗೀತ ಅವಶ್ಯ, ಸಂಗೀತ ಬೆಳೆಸುವ ಆಸಕ್ತಿ ಬೆಳೆಯಬೇಕು ಎಂದು ಹೇಳಿದರು.
ಇದನ್ನೂ ಓದಿ: ಪಿಎಸ್ಐ ಅಕ್ರಮ ನೇಮಕಾತಿ: ಗೃಹ ಸಚಿವರ ರಾಜೀನಾಮೆಗೆ ಆಗ್ರಹ
ಸಂಗೀತ ಕಲಾವಿದರಿಗೆ ನಿರಂತರ ವೇದಿಕೆ ಕಲ್ಪಿಸುವಂತಾಗಬೇಕು. ಹಾಗಾದಾಗ ಕಲೆಯನ್ನು, ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೇಳಿದರು. ಆಕಾಶವಾಣಿ ನಿಲಯದ ಕಲಾವಿದರಾದ ಉಸ್ತಾದ್ ರಫೀಕ್ ಖಾನ್, ಉಸ್ತಾದ್ ಶಫೀಕ್‌ಖಾನ್‌ರಿಂದ ಜುಗಲ್‌ಬಂದಿ ಸಿತಾರವಾದನ ನಡೆಯಿತು. ಆಕಾಶವಾಣಿ ಕಲಾವಿದರಾದ ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರ ತಬಲಾ ವಾದನ ನಡೆಯಿತು.
ಮಾಜಿ ಮೇಯರ್ ಡಾ.ಶರಣಕುಮಾರ ಮೋದಿ, ಕೆಎಂಎಫ್ ಅಧ್ಯಕ್ಷ ಆರ್. ಕೆ.ಪಾಟೀಲ್, ಪತ್ರಕರ್ತರಾದ ವಾದಿರಾಜ ವ್ಯಾಸಮುದ್ರ, ಬಾಬುರಾವ್ ಯಡ್ರಾಮಿ, ಕನ್ನಡ ಮತ್ತು ಸಾಮಸ್ಮೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ, ಕಸಾಪ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಡಾ. ಸಂಜುಪಾಟೀಲ್, ಶಂಕರ ಹೂಗಾರ ದೇಸಾಯಿ ಕಲ್ಲೂರ ಇತರರಿದ್ದರು. ವೀರೇಶ ಹೂಗಾರ ಸ್ವಾಗತಿಸಿದರು.
ಇದನ್ನೂ ಓದಿ: ಹಕ್ಕ-ಬುಕ್ಕ, ಇತರೆ ಮಹಾರಾಜರಗಳ ಬಗ್ಗೆ ಹೆಚ್ಚು ಸಂಶೋಧನೆ ನಡೆಯಲಿ: ಪ್ರಕಾಶ ದೊರೆ