ಅಲ್ಪಸಂಖ್ಯಾತರ ಇಲಾಖೆಗೆ 10 ಸಾವಿರ ಕೋಟಿ ಮೀಸಲಿಡಲು‌ CMಗೆ ನಯ ಸವೇರದಿಂದ ಮನವಿ

0
218

ಕಲಬುರಗಿ: ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 10 ಸಾವಿರ ಕೋಟಿ ಅನುದಾನ ಮೀಸಲಿಟ್ಟು, ಶಾದಿಭಾಗ್ಯ ಯೋಜನೆ, ಶಾದಿ ಮಹಲ್ ಯೋಜನೆ, ವಿದೇಶಗಳಲ್ಲಿ ಓದಲು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಮರು ಚಾಲನೆ ಮಾಡಬೇಕೆಂದು ನಯ ಸವೇರ ಸಂಘಟನೆ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ ಸಿಎಂಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

Contact Your\'s Advertisement; 9902492681

ಗುರುವಾರ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ ಅವರು ಸಾಚಾರ್ ಸಮಿತಿ ಪ್ರಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ 72 ಯೋಜನೆಗಳಿದ್ದವು. ಈಗ ಉಳಿದಿರುವುದು 28 ಯೋಜನೆಗಳು ಮಾತ್ರ, ವ್ಯಾಸಂಗ, ಸಣ್ಣ ಪುಟ್ಟ, ವ್ಯಾಪಾರಿಗಳಿಗೆ ನೆರವು ನೀಡುವುದು, ಶಾದಿಮಹಲ್, ಶಾದಿಭಾಗ್ಯ, ವಿದೇಶದಲ್ಲಿ ವ್ಯಾಸಂಗ ಮಾಡಲು ಸ್ಕಾಲರ್ಶಿಪ್ ಕೊಡುವ ಜನಪ್ರಿಯ ಯೋಜನೆ ನಿಲ್ಲಿಸಲಾಗಿದೆ.

ಅಲ್ಪಸಂಖ್ಯಾತರ ಸಮುದಾಯದ ಕಡುಬಡವರು, ಸಾಂಪ್ರದಾಯಿ ಕುಶಲಕರ್ಮಿಗಳು, ಹಾಗೂ ವೃತ್ತಿ ಕುಲಕಸುಬು ದಾರರು, ಆಧುನಿಕ ತಂತ್ರಜ್ಞಾನ, ಬಳಕೆಯಿಂದ ತಮ್ಮ ಸಾಂಪ್ರದಾಯಿಕ ಮಾರುಕಟ್ಟೆಯನ್ನು ಹಾಗೂ ವೃತ್ತಿ ಕೌಶಲ್ಯ ತೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಲು, ಮತ್ತು ಆದಾಯ ಹೆಚ್ಚಿಸಲು ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅಗತ್ಯವಿರುವ ಆರ್ಥಿಕ ನೆರವನ್ನು ಕಲ್ಪಿಸುವ ಉದ್ದೇಶಿಸುವ ಶರ್ಮ ಶಕ್ತಿ ಯೋಜನೆಯಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಶ್ರಮಶಕ್ತಿ ಯೋಜನೆ ಬಹಳ ಕಡಿಮೆ ಜನರಿಗೆ ಸಿಗುತ್ತಿದೆ. ಅದನ್ನು ಕೂಡ ಹೆಚ್ಚಿನ ಜನರಿಗೆ ಸಿಗುವ ನಿಟ್ಟಿನಲ್ಲಿ ಜಾರಿಗೆ ತರಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: ಕಾಂಗ್ರೆಸ್ ಶಾಸಕನ ಗನ್ ಮ್ಯಾನ್ ಸೇರಿ ಇಬ್ಬರ ಬಂಧನ

ಬಡ ಮಕ್ಕಳು, ಸೂಕ್ತ ವೃತ್ತಿ ಮಾರ್ಗದರ್ಶನ, ಕೃಪೆಯಿಂದ ಉತ್ತಮ ಶಿಕ್ಷಣ ಉದ್ಯೋಗ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಸರಕಾರವೂ ಇದಕ್ಕೆ ಗಮನಹರಿಸಬೇಕು ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಬೆಳವಣಿಗೆಗೆ ಅಲ್ಪಸಂಖ್ಯಾತರ ಕಲ್ಯಾಣದ ಕಾರ್ಯಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸುಭಾನ್ ಪಟೇಲ್ ಹಡಗಿಲ್, ರಜಾಕ್ ಚೌದರಿ, ಸೈರಾ ಬಾನು ತಹನಿಯತ್ತ ಫಾತಿಮಾ, ಬಾಬಾ ಫಕ್ರುದ್ದಿನ್ ಅನ್ಸಾರಿ, ಕೂದ್ದೂಸ್ ಪಟೇಲ್ ಕುನ್ನುರ್ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ: ಪಿ.ಎಸ್.ಐ.ನೇಮಕಾತಿ ಅಕ್ರಮ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿ.ಎಂ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here