ಕಲಬುರಗಿ: ಎಸ್ ಡಿಎ ಮತ್ತು ಎಫ್ ಡಿಎ ಖಾಲಿ ಇರುವ ಹುದ್ದೆಗಳಿಗೆ ಈಗಾಗಲೇ ಪರೀಕ್ಷೆಗಳು ನಡೆದಿದ್ದು ಫಲಿತಾಂಶ ಪಟ್ಟಿ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕನ್ನಡ ಭೂಮಿ ಜಾಗೃತಿ ಸಮಿತಿ ವತಿಯಿಂದ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಕಲಬುರ್ಗಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಹುದ್ದೆಗಳಿಗೆ 2017ರಲ್ಲಿ ಸರಕಾರವು ಸುತ್ತೋಲೆ ಹೊರಡಿಸಿದೆ.ಅದರಂತೆ 2019ರಲ್ಲಿ ಫಲಿತಾಂಶ ಬಂದು ದಾಖಲೆಗಳ ಪರಿಶೀಲನೆ ಆಗಿದೆ.2020 ಜನೆವರಿಯಲ್ಲಿ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ.2021 ಅಕ್ಟೋಬರನಲ್ಲಿ ಆಯ್ಕೆಯಾದ 851 ಹುದ್ದೆಯಲ್ಲಿ 230 ಅಭ್ಯರ್ಥಿಗಳು ಎಸ್ ಡಿಎಗೆ ಸೇರ್ಪಡೆ ಹೊಂದಿಲ್ಲ.ಎಸ್ ಡಿಎದಿಂದ ಆಯ್ಕೆಯಾದ ಅಭ್ಯರ್ಥಿಗಳು ಎಫ್.ಡಿಎಗೂ 230 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.ಆದ ಕಾರಣ ಎಫ್ ಡಿಎಗೆ ನೇಮಕಗೊಂಡಿರುತ್ತಾರೆ.ಆದರೆ ಎಸ್ ಡಿಎ 250 ಹುದ್ದೆಗಳು ಖಾಲಿ ಉಳಿದಿರುವುದು.
ಇದನ್ನೂ ಓದಿ: ಅಲ್ಪಸಂಖ್ಯಾತರ ಇಲಾಖೆಗೆ 10 ಸಾವಿರ ಕೋಟಿ ಮೀಸಲಿಡಲು CMಗೆ ನಯ ಸವೇರದಿಂದ ಮನವಿ
ಕಳೆದ 5 ವರ್ಷಗಳಿಂದ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಲ್ಲ.ಕೂಡಲೇ ತಡೆ ಹಿಡಿದಿರುವ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಸಮಿತಿ ರಾಜ್ಯ ಯುವ ಘಟಕದ ಅಧ್ಯಕ್ಷ ಆನಂದ ತೆಗನೂರ, ವಿಭಾಗೀಯ ಅಧ್ಯಕ್ಷ ಜೈರಾಜ್ ಕಿಣಿಗೀಕರ, ಪ್ರಶಾಂತ ತಂಬೂರಿ, ರಾಹುಲ್,ಧರ್ಮರಾಜ ಅವರು ಮನವಿ ಪತ್ತದಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪಿ.ಎಸ್.ಐ.ನೇಮಕಾತಿ ಅಕ್ರಮ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿ.ಎಂ