ಕಲಬುರಗಿಯಲ್ಲಿ ಸಿಎಂ ವಾಹನಕ್ಕೆ ಮುತ್ತಿಗೆ ಯತ್ನ: ಕಾಂಗ್ರೆಸ್ ಕಾರ್ಯಾಕರ್ತರ ಬಂಧನ

0
56

ಕಲಬುರಗಿ: ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರನ್ನು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಿ ರವರ ನೇತೃತ್ವದಲ್ಲಿ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಹತ್ತಿರ ನಡೆದಿದೆ.

ಇತ್ತೀಚೆಗೆ ನಡೆದ ಪಿಎಸ್ಐ ನೇಮಕಾತಿ ಪರೀಕ್ಷೆ ಯಲ್ಲಿ ಕಲಬುರ್ಗಿ ಬಿಜೆಪಿ ನಾಯಕಿ ದಿವ್ಯಾ ಹಾಗರಗೀ ಹಾಗೂ ಬಿಜೆಪಿ ನಾಯಕರು ಭಾಗಯಾಗಿದು, ಸಿಐಡಿ ತನಿಖೆ ನಡೆಸುತ್ತಿದ್ದಾರೆ. ಆದರೆ ಇಲ್ಲಿ ಯವರಿಗೆ ದಿವ್ಯ ಬಂಧಿಸದೆ ಸರ್ಕಾರದ ಪ್ರಭಾವಿ ಮಂತ್ರಿಗಳು ಮಾಜಿ ಮುಖ್ಯಮಂತ್ರಿ ಪರೋಕ್ಷವಾಗಿ ಆರೋಪಿಗಳಿಗೆ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೆಲಸ ಆಗುತ್ತಿದೆ ಎಂದು ಪ್ರತಿಭಟನಾನಿರತ ಕಾರ್ಯಕರ್ತರು ಆರೋಪಿಸಿದರು.

Contact Your\'s Advertisement; 9902492681

ಇದನ್ನೂ ಓದಿ: ಪಿ.ಎಸ್.ಐ.ನೇಮಕಾತಿ ಅಕ್ರಮ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿ.ಎಂ

ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿ ಯುವಕರ ಮುಂದಿನ ಜೀವನಕ್ಕೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಸರ್ಕಾರ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಗಳಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ ಬಂಧಿಸುವ ಮೂಲಕ ಬಿಜೆಪಿ ಸರ್ಕಾರ ನ್ಯಾಯದ ಪರವಾಗಿ ಇಲ್ಲ ಎಂಬುದನ್ನು ದೃಢಪಡಿಸಿದಾರೆ ಎಂದು ಅವರು ಹೇಳಿದರು.

ಪ್ರಕರಣದಲ್ಲಿ ಸಂಸದ ಉಮೇಶ್ ಜಾಧವ್ ರವರ ಕೈವಾಡವಿದೆ ಎಂಬುದು ಅವರ ಶಿಫಾರಸ್ಸು ಪತ್ರ ನೀಡಿದ ತನಿಖೆ ನಡೆಸಿ ಎಂದು ಇದೆ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಆಗ್ರಹಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಶಾಸಕನ ಗನ್ ಮ್ಯಾನ್ ಸೇರಿ ಇಬ್ಬರ ಬಂಧನ

ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಈರಣ್ಣ ಪಾಟೀಲ್ ಝಳಕಿ, ಕೀಶೋರ ಗಾಯಕವಾಡ, ಅಮರಶಿರವಾಳ್, ಶಕೀಲ್ ಸರಡಗಿ, ಶರಣುಪ್ರತಾಬಾದ, ಕಾರ್ತಿಕ ನಾಟಿಕಾರ್, ಆಶಿದಖಾನ್, ನಧಿಮ ಶೇರಿಕಾರ್, ಶರಣು ಹಾಗರಗುಂಡಗಿ, ಅಸ್ಲಾಂ ಮುಂತಾದವರು ಭಾಗವಹಿಸಿದ್ದರು.

ಇದನ್ನೂ ಓದಿ: ಅಲ್ಪಸಂಖ್ಯಾತರ ಇಲಾಖೆಗೆ 10 ಸಾವಿರ ಕೋಟಿ ಮೀಸಲಿಡಲು‌ CMಗೆ ನಯ ಸವೇರದಿಂದ ಮನವಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here