ಭಾಲ್ಕಿ: ವಚನ ಜಾತ್ರೆ ಉದ್ಘಾಟನೆ

0
17

ಭಾಲ್ಕಿ: ವಚನ ಜಾತ್ರೆ-೨೦೨೨ ಹಾಗೂ ಡಾ.ಚನ್ನಬಸವ ಪಟ್ಟದ್ದೇವರ ೨೩ನೇ ಸ್ಮರಣೋತ್ಸವದ ಉದ್ಘಾಟನಾ ಸಮಾರಂಭ ಜ್ಯೋತಿ ಪ್ರಜ್ವಲನೆಯ ಮುಖಾಂತರ ಉದ್ಘಾಟಿಸಿ, ನಾಡೋಜ ಗೊ.ರು.ಚನ್ನಬಸಪ್ಪನವರು ಇಂದು ಎಲ್ಲೆಡೆ ಅನಾಚಾರ, ಭೃಷ್ಟಾಚಾರ, ಅನೈತಿಕ, ಘಟನೆಗಳು ನಡೆದು ನಿಜವಾದ ಅರ್ಥದಲ್ಲಿ ಮಾನವ ಮಾನಸಿಕ ಒತ್ತಡದ ಹುತ್ತಕ್ಕೆ ಬಿದ್ದಂತಾಗಿದೆ. ಇಂತಹ ಹುತ್ತದಿಂದ ಹೊರಬರುವ ಏಕೈಕ ಮಾರ್ಗವೆಂದರೆ, ಶರಣರ ವಚನಗಳ ಅಧ್ಯಯನ. ಇಂತಹ ವಚನ ಸಾಹಿತ್ಯ ಅದೊಂದು ವಿನೂತನ ಸಂವಿಧಾನ. ಸಾರ್ವಕಾಲಿಕವಾಗಿ ಸಲ್ಲುವ ಮಾರ್ಗ ಈ ಸಾಹಿತ್ಯದಲ್ಲಿದೆ ಎಂದರು.

ದಿವ್ಯಸನ್ನಿಧಾನವಹಿಸಿದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಕರ್ನಾಟಕದಲ್ಲಿ ಮೊಟ್ಟ ಮೊದಲು ಬಸವಣ್ಣಣವರೆ ಧರ್ಮಗುರು, ವಚನ ಸಾಹಿತ್ಯವೇ ಧರ್ಮಗ್ರಂಥ, ಇಷ್ಟಲಿಂಗವೆ ಏಕೈಕ ದೈವ ಎಂದು ನಂಬಿ, ನಡೆದ ಮಠಾಧೀಶರೆಂದರೆ, ಸದ್ಗುರುಗಳಾದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು. ಅವರ ೨೩ನೆಯ ಸ್ಮರಣೋತ್ಸವವನ್ನು ವಚನ ಜಾತ್ರೆಯಾಗಿ ಆಚರಿಸುತ್ತಿರುವುದು ಅವರ ಬಸವನಿಷ್ಠೆಗೆ ಹಿಡಿದ ಕನ್ನಡಿಯಾಗಿದೆ. ಇಂದು ಎಲ್ಲರೂ ವಚನ ಸಾಹಿತ್ಯವನ್ನು ಓದಿ ಬಸವಾದಿ ಶರಣರ ಮಾರ್ಗದಲ್ಲಿ ನಡೆದರೆ ವಿಶ್ವಶಾಂತಿ ಎಲ್ಲಡೆ ನೆಲೆಸುವುದು ಎಂದರು.

Contact Your\'s Advertisement; 9902492681

ಇದನ್ನೂ ಓದಿ: ಪಿಎಸ್ಐ ನೇಮಕಾತಿಯಲ್ಲಿ ಆಕ್ರಮ: ಕಾಂಗ್ರೆಸ್ ಮುಖಂಡನ ಬಂಧನ

ಅನುಭಾವ ನುಡಿಗಳಲ್ಲಿ ಸಾಹಿತಿ ಡಾ.ಬಸವರಾಜ ಸಾದರ ವಚನಗಳನ್ನು ಕೇವಲ ನುಡಿದರೆ ಮಾತ್ರ ಸಾಲದು. ಅದು ನಮ್ಮ ನಿತ್ಯ ಆಚರಣೆಯಲ್ಲಿ ಬಂದಾಗ ಬದುಕು ಸಾರ್ಥಕವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಭಾಲ್ಕೇಶ್ವರ ಶುಗರ‍್ಸ ಅಧ್ಯಕ್ಷ ಪ್ರಕಾಶ ಖಂಡ್ರೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ.ಬಸವರಾಜ ಸಾದರ ವಿರಚಿತ ವಚನ ವರ್ಷಾರ್ಥ, ಪೂಜ್ಯ ಡಾ.ಬಸವಲಿಂಗ ಪಟ್ಟದದೇವರು ವಿರಚಿತ ಮಕ್ಕಳಿಗಾಗಿ ಪಂಚಾಚಾರ ಲೋಕಾರ್ಪಣೆ ಮಾಡಲಾಯಿತು.

ವೇದಿಕೆಯಲ್ಲಿ ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿಗಳು ಹುಲಸೂರು, ಪೂಜ್ಯ ಅಭಿನವ ಷಣ್ಮುಖ ಸ್ವಾಮಿಗಳೂ ಕೌಲಗಾ, ಪೂಜ್ಯ ಸಿದ್ಧರಾಮೇಶ್ವರ ಪಟ್ಟದ್ದೇವರು ಗೋರಚಿಂಚೋಳಿ, ಪೂಜ್ಯ ಸಿದ್ಧರಾಮೇಶ್ವರ ಶರಣರು ಬೆಲ್ದಾಳ, ಪೂಜ್ಯ ಪಂಚಾಕ್ಷರಿ ಸ್ವಾಮಿಗಳು, ಪೂಜ್ಯ ಅಕ್ಕ ಗಂಗಾಂಬಿಕಾ ದಿವ್ಯಸಮ್ಮುಖ ವಹಿಸಿದ್ದರು.

ಇದನ್ನೂ ಓದಿ: ಕಲಬುರಗಿಯಲ್ಲಿ ಆಮ್ ಆದ್ಮಿ ಕಾರ್ಯಕರ್ತರು ಪೊಲೀಸರ ವಶಕ್ಕೆ

ಅತಿಥಿಗಳಾಗಿ ಡಿ.ಕೆ.ಸಿದ್ರಾಮ, ಗುರುನಾಥ ಕೊಳ್ಳುರು, ಜೈರಾಜ ಖಂಡ್ರೆ, ಬಾಬು ವಾಲಿ, ಅಧ್ಯಕ್ಷರು ನಗರಾಭಿವೃದ್ಧಿ ಬೀದರ, ಬಸವರಾಜ ವಂಕೆ ಅಧ್ಯಕ್ಷರು, ಪುರಸಭೆ ಭಾಲ್ಕಿ, ಡಾ.ಜಗನ್ನಾಥ ಹೆಬ್ಬಾಳೆ, ಭಾಗವಹಿಸಿದ್ದರು. ಕೀಶನರಾವ ಸರೋದೆ, ಎ.ಎಸ್.ಪಾಟೀಲ, ಮನಯ್ಯಾ ಬಡಿಗೇರ ಅವರಿಗೆ ನಾಡೋಜ ಜೆ.ಎಸ್. ಚಿತ್ರಕಲಾ ಪ್ರಶಸ್ತಿ ನೀಡಲಾಯಿತು. ಡಾ.ಸೋಮನಾಥ ನುಚ್ಚಾ, ಡಾ.ವೈಜಿನಾಥ ಭಂಡೆ, ಪ್ರೊ.ಚಂದ್ರಶೇಖರ ಬಿರಾದಾರ ಅವರಿಗೆ ಡಾ.ಜಿ.ಬಿ.ವಿಸಾಜಿ ಸಾಹಿತ್ಯ ಪ್ರಶಸ್ತಿ ನೀಡಲಾಯಿತು.

ಶಕುಂತಲಾ ಬೆಲ್ದಾಳೆ ಬಸವಗುರುಪೂಜೆ ನೆರವೇರಿಸಿದರು. ಶಶಿಧರ ಕೋಸಂಬೆ ಸ್ವಾಗತಿಸಿದರು. ಕು.ಪುಷ್ಪಾಂಜಲಿ ಪಟ್ನೆ ವಚನ ನೃತ್ಯ ನಡೆಸಿಕೊಟ್ಟರು, ದೀಪಕ ಥಮಕೆ ನಿರೂಪಿಸಿದರು. ಮಲ್ಲಮ್ಮ ಆರ್. ಪಾಟೀಲ ವಂದಿಸಿದರು. ಕೊನೆಯಲ್ಲಿ ಜಮುರಾ ಸುತ್ತಾಟ ಕಲಾವಿದರಿಂದ ಸೋರುತಿಹದು ನಾಟಕ ಪ್ರದರ್ಶನಗೊಂಡಿತು.

ಪ್ರಭಾತ ಪಥಸಂಚಲನ: ಇಂದು ಬೆಳಿಗ್ಗೆ ಹಿರೇಮಠ ಸಂಸ್ಥಾನದಿಂದ ಚನ್ನಬಸವಾಶ್ರಮವರೆಗೆ ಪ್ರಭಾತ ಪಥಸಂಚಲನ ಯಶಸ್ವಿಯಾಗಿ ನಡೆಯಿತು. ಈ ಪಥಸಂಚಲನ ನಂತರದಲ್ಲಿ ಷಟ್‌ಸ್ಥಲ ಧ್ವಜಾರೋಹಣವನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಮಂಡಳಿ ಆಯುಕ್ತ ರಮೇಶ ಕೋಲಾರ ನೆರವೇರಿಸಿದರು. ರಾಜಶೇಖರ ಅಷ್ಟೂರೆ, ಬಸವಗುರುಪೂಜೆ ನೆರವೇರಿಸಿದರು. ಗಣ್ಯಮಾನ್ಯರಾದ ಪ್ರಸನ್ನ ಖಂಡ್ರೆ, ಸಾಗರ ಖಂಡ್ರೆ, ಶಿವು ಲೋಖಂಡೆ, ಚಂದ್ರಕಾಂತ ಪಾಟೀಲ, ಕಿರಣ ಖಂಡ್ರೆ, ಓಂಪ್ರಕಾಶ ರೊಟ್ಟೆ, ವಿಜಯಕುಮಾರ ಪರಮಾ, ಬಾಬುರಾವ ಧೂಪೆ ಉಪಸ್ಥಿತರಿದ್ದರು. ವೀರಣ್ಣ ಕುಂಬಾರ ನಿರೂಪಿಸಿದರು.

ಇದನ್ನೂ ಓದಿ: 2.5 ಲಕ್ಷ ಯುವ ಜನತೆಗೆ ತರಬೇತಿ ನೀಡುವ ಗುರಿ: ಬಸವರಾಜ ಬೊಮ್ಮಾಯಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here