ಕಾಂಟ್ರ್ಯಾಕ್ಟರ್ ಸಂತೋಷ್​​ ಆತ್ಮಹತ್ಯೆಗೆ ಬಿಗ್​​ ಟ್ವಿಸ್ಟ್​​

0
86
  • ಕಾಂಟ್ರ್ಯಾಕ್ಟರ್ ಸಂತೋಷ ಪಾಟೀಲ ಆತ್ಮಹತ್ಯೆಗೆ ಸಿಕ್ಕ ಬಿಗ್​​ ಟ್ವಿಸ್ಟೂ, ​​ಶಾಂಭವಿ ಲಾಡ್ಜ್​​​ನಲ್ಲಿ ನಡೆದಿದ್ದು ಏನು? ಮತ್ತು ಸಂತೋಷ.ಪಾಟೀಲ ಆತ್ಮಹತ್ಯೆಗೆ ನೇರ ಕಾರಣ ಈ ಕೆ.ಎಸ್.ಈಶ್ವರಪ್ಪನವರೂ..! —
  • ಕಾಂಟ್ರ್ಯಾಕ್ಟರ್ ಸಂತೋಷ್​​ ಆತ್ಮಹತ್ಯೆಗೆ ಬಿಗ್​​ ಟ್ವಿಸ್ಟ್​​ ಸಿಕ್ಕಿದ್ದೆ,  ​​ಶಾಂಭವಿ ಲಾಡ್ಜ್​​​ನಲ್ಲಿ ನಡೆದ ಘಟನೆ ಬಗ್ಗೆ ಸಂತೋಷ್​ ಸ್ನೇಹಿತರು ಈ ತೆರನಾಗಿ ವಿವರಿಸುತ್ತಾರೆ.

– ಕೆ.ಶಿವು.ಲಕ್ಕಣ್ಣವರ

ಈ ಬಗ್ಗೆ ಮಾಹಿತಿ ನೀಡಿದ ಸಂತೋಷ್​ ಸ್ನೇಹಿತರಾದ ಪ್ರಶಾಂತ್ ಶೆಟ್ಟಿ, ಸಂತೋಷ್ ಮೇದಪ್ಪ, ನಾವೆಲ್ಲಾ ಒಟ್ಟಾಗಿ ಕೂತು ಬಾರ್​​ನಲ್ಲಿ ಕುಡಿದಿದ್ದೆವು, ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು. ಏಪ್ರಿಲ್ 7 ರಂದು ಧಾರವಾಡದಿಂದ ಮೂವರು ಕಾರಿನಲ್ಲಿ ಪ್ರಯಾಣ ಮಾಡಿ, ಏಪ್ರಿಲ್ 8 ಚಿಕ್ಕಮಗಳೂರಿಗೆ  ಮೂವರು ತಲುಪಿದ್ದಿವಿ.

ಇದನ್ನೂ ಓದಿ: ಭಾಲ್ಕಿ: ವಚನ ಜಾತ್ರೆ ಉದ್ಘಾಟನೆ

Contact Your\'s Advertisement; 9902492681

4 ದಿನ ಚಿಕ್ಕಮಗಳೂರಿನ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿ, ಏಪ್ರಿಲ್ 11 ರ ಸಂಜೆ 4 ಗಂಟೆಗೆ ಉಡುಪಿ ತಲುಪಿದ್ದಿವಿ.
ಶಾಂಭವಿ ಲಾಡ್ಜ್​​ನಲ್ಲಿ ಸಂತೋಷ್​​ ಹೆಸರಲ್ಲಿ 2 ರೂಮ್​ ಬುಕ್ಕಿಂಗ್​​​ ಮಾಡಲಾಗಿತ್ತು. ಸಂತೋಷ್ 207 ರಲ್ಲಿ, ನಾವಿಬ್ಬರು ರೂಮ್ ನಂ. 209 ರಲ್ಲಿ ತಂಗಿದ್ದೆವು.

ಸಂಜೆ 7 ರ ನಂತರ ಮೂವರೂ ಡ್ರಿಂಕ್ಸ್ ಮಾಡಲು ಬಾರ್​​ಗೆ ಹೋಗಿದ್ದೆವು. ಬಾರ್​​ನಿಂದ ಫ್ರೂಟ್ ಜ್ಯೂಸ್ ತಗೊಂಡಿದ್ದ ಸಂತೋಷ್, ಏ.11 ರ ರಾತ್ರಿ ಗುಡ್ ನೈಟ್ ಹೇಳಿ, ಬೆಳಗ್ಗೆ ಎಬ್ಬಿಸ್ಬೇಡಿ ಅಂತ ಹೇಳಿದ್ದರು, ರಾತ್ರಿ ಮಲಗಿದ್ದ ಸಂತೋಷ್ ಏಪ್ರಿಲ್12 ರಂದು ಬೆಳಗ್ಗೆ ಎದ್ದಿರಲಿಲ್ಲ. ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಬೆಳಗಾವಿಯಿಂದ ಗೆಳೆಯ ಸುನಿಲ್ ಪವಾರ್ ಅವರಿಂದ ಫೋನ್ ಬಂದಿದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಆಮ್ ಆದ್ಮಿ ಕಾರ್ಯಕರ್ತರು ಪೊಲೀಸರ ವಶಕ್ಕೆ

ಸಂತೋಷ್ ಕಾಣೆಯಾದ ಬಗ್ಗೆ ಮೀಡಿಯಾಗಳಲ್ಲಿ ಬರುತ್ತಿದೆ ಎಂದರು. ಅಷ್ಟರವರೆಗೆ ನಾವಿಬ್ಬರೂ ಮೊಬೈಲ್ ನೋಡಿರಲಿಲ್ಲ
ತಕ್ಷಣ ಕೊಠಡಿ ಸಂಖ್ಯೆ 207 ಕ್ಕೆ ತೆರಳಿ ಬಾಗಿಲು ಬಡಿದಿದ್ದೇವೆ, ಫೋನ್​ ಮಾಡಿದ್ದರೂ ಸಂತೋಷ್​ ರೆಸ್ಪಾನ್ಸ್​ ಮಾಡಲಿಲ್ಲ.
ಡೂಬ್ಲಿಕೆಟ್​ ಕೀ ತಂದು ರೂಮ್​ ಓಪನ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿತು. ಹೀಗೆಂದು  ವಿಚಾರಣೆ ವೇಳೆ  ಸಂತೋಷ್​​ ಸ್ನೇಹಿತರು ಮಾಹಿತಿ ನೀಡಿದರು..! ಹೀಗೆಯೇ ಹೇಳುವ ಸಂತೋಷ.ಪಾಟೀಲ ಗೆಳೆಯರು ಸಂತೋಷ.ಪಾಟೀಲ ಸಾವಿಗೆ ಈಗ ಅವರು ಮಾಡುತ್ತಿದ್ದ ಗುತ್ತಿಗೆಯೇ ಕಾರಣ ಎಂದು ಹೇಳುವುದರಲ್ಲಿ ಯಾವ ಅನುಮಾನವೂ ಇಲ್ಲ..!

# ಗುತ್ತಿಗೆ‌ ಆತ್ಮಹತ್ಯೆ ಕೇಸ್​ಗೆ ಮತ್ತೊಂದು ಟ್ವಿಸ್ಟ್; ಉಡುಪಿ ಪೊಲೀಸರ ತನಿಖೆ ವೇಳೆ ಮಹತ್ವದ ಮಾಹಿತಿ ಲಭ್ಯವೂ. ಸಂತೋಷ್ ಪಾಟೀಲ್ ಕುಟುಂಬಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಿಪಿಎ ಅಷ್ಟೇ ಅಲ್ಲಾ ಬೇರೆ ಎಲ್ಲಾ ಮಾಹಿತಿ ನಮ್ಮ ಬಳಿ ಇದೆ ಅಂತ ತಿಳಿಸಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಂತೋಷ್ ಕರೆದೊಯ್ದಿರುವುದು ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್​ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್.ಮನ್ನೋಳ್ಕರ್ ಅವರು ಸಂತೋಷ್ ಪಾಟೀಲ್ ಮನೆಯನ್ನು ಜಿಪಿಎ ಮಾಡಿಸಿಕೊಂಡಿದ್ದರು ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಉಡುಪಿ ಪೊಲೀಸರ ತನಿಖೆಯ ವೇಳೆ ಮಾಹಿತಿ ಲಭ್ಯವಾಗಿದೆ. 40 ಲಕ್ಷ ರೂಪಾಯಿಗೆ ಜಿಪಿಎ ಮಾಡಿಸಿಕೊಂಡ ಬಗ್ಗೆ ಪೊಲೀಸರಿಗೆ ದಾಖಲೆ ಸಿಕ್ಕಿದೆ. ಈ ಬಗ್ಗೆ ಹೇಳಿಕೆ ನೀಡಿರುವ ನಾಗೇಶ್.ಮನ್ನೋಳ್ಕರ್, ಕಾಮಗಾರಿ ವ್ಯವಹಾರಕ್ಕೂ ಮನೆ ಜಿಪಿಎ ವಿಚಾರಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಅದೂ ನಿಜವಾಗಿಯೂ ಇದೆ.

ಇದನ್ನೂ ಓದಿ: ಪಿಎಸ್ಐ ನೇಮಕಾತಿಯಲ್ಲಿ ಆಕ್ರಮ: ಕಾಂಗ್ರೆಸ್ ಮುಖಂಡನ ಬಂಧನ

ಮತ್ತೊಂದೆಡೆ ಸಂತೋಷ್ ಪಾಟೀಲ್ ಕುಟುಂಬಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಿಪಿಎ ಅಷ್ಟೇ ಅಲ್ಲಾ ಬೇರೆ ಎಲ್ಲಾ ಮಾಹಿತಿ ನಮ್ಮ ಬಳಿ ಇದೆ ಅಂತ ತಿಳಿಸಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಂತೋಷ್ ಕರೆದೊಯಿದಿರುವುದು. ನೋಂದಣಿ ಮಾಡಿಸಿಕೊಂಡ ದಾಖಲೆಗಳು ನಮ್ಮ ಬಳಿ ಇವೆ. ಯಾವ ಆಸ್ತಿಯನ್ನು ನೋಂದಣಿ ಮಾಡಿಸಿಕೊಂಡಿದ್ದಾರೆಂದು ಗೊತ್ತಿದೆ. ಸರ್ಕಾರ ಏನು ಮಾಡುತ್ತೋ ಮಾಡಲಿ, ಆಮೇಲೆ ಮಾತಾಡುತ್ತೇವೆ ಅಂತ ಡಿ.ಕೆ.ಶಿ ಹೇಳಿದ್ದಾರೆ.

ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್.ಮನ್ನೋಳಕರ್ ನೇತೃತ್ವದಲ್ಲಿ ಈಚೆಗೆ ಉಪಗುತ್ತಿಗೆದಾರರು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದರು. ಉಡುಪಿ ಪೊಲೀಸರ ವಿಚಾರಣೆಗೆ ಹಾಜರಾಗದ ಇವರು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ಸಂತೋಷ್.ಪಾಟೀಲ ಹಲವು ಕಾಮಗಾರಿಗಳನ್ನು ಮಾಡಿಸಿದ್ದರು.

ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲು ನಿಗದಿ ಮಾಡಿ ಚುನಾವಣೆ ನಡೆಸಿ: ಪತ್ರೇಶ್

ಕಾಮಗಾರಿ ಮಂಜೂರಾತಿ ಪಡೆಯುವ ವೇಳೆ ರಮೇಶ್.ಜಾರಕಿಹೊಳಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್.ಮನ್ನೋಳಕರ್ ಲೆಟರ್ ಹೆಡ್ ಮೂಲಕವೇ ಮೃತ ಸಂತೋಷ್ ಪಾಟೀಲ ಕಾಮಗಾರಿಯ ವಿವರಗಳನ್ನು ಈಶ್ವರಪ್ಪ ಅವರಿಗೆ ಒದಗಿಸಿ, ಅನುದಾನ ಬಿಡುಗಡೆಗೆ ಮನವಿ ಮಾಡಿದ್ದರು.

ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ಮೌಖಿಕ ಸೂಚನೆ ಮೇರೆಗೆ ರೂಪಾಯಿ 4.12 ಕೋಟಿ ವೆಚ್ಚದಲ್ಲಿ 108 ಕಾಮಗಾರಿ ಮಾಡಿಸಿದ್ದೇನೆ ಎಂದು ಸಂತೋಷ ಪಾಟೀಲ್ ಹೇಳಿದ್ದರು. ಆದರೆ ಆ ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪನವರು ಈ ಸಂತೋಷ.ಪಾಟೀಲರ ಕಾಮಗಾರಿ ಬಿಲ್ ನ್ನು ಬಿಡುಗಡೆ ಆಗದಂತೆ ಮಾಡಿದ್ದರು. ಅದೆಷ್ಟೋ ಬಾರಿ ಗುತ್ತಿಗೆದಾರ ಸಂತೋಷ.ಪಾಟೀಲ ಬೇಡಿಕೊಂಡರೂ ಈಶ್ವರಪ್ಪನವರು ಬಿಲ್ ಪಾಸಾಗದಂತೆ ಮಾಡಿದ್ದರು.

ಈಗ ಸಂತೋಷ.ಪಾಟೀಲ ಈ ಗುತ್ತಿಗೆ ಬಿಲ್ ಪಾಸಾಗದಿದ್ದಕ್ಕೆ ಅನಿವಾರ್ಯವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂತೋಷ.ಪಾಟೀಲ ಸಾವಿಗೆ ನೇರವಾಗಿ ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈ ಕೆ.ಎಸ್.ಈಶ್ವರಪ್ಪನವರೇ ಕಾರಣರಾಗಿದ್ದಾರೆ. ಸಾಲ ಮಾಡಿಕೊಂಡು ಹಣ ತಂದು ಕಾಮಗಾರಿ ನಡೆಸಿದ್ದ ಸಂತೋಷ.ಪಾಟೀಲ ಗುತ್ತಿಗೆ ಹಣ ಬಾರದಿದ್ದಕ್ಕೆ ಅನಿವಾರ್ಯವಾಗಿ ಮುಂದಿನ ದಿಕ್ಕು ಕಾಣದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂತೋಷ.ಪಾಟೀಲ ಆತ್ಮಹತ್ಯೆಗೆ ನೇರ ಹೊಣೆ ಈಗಿನ ಕೆ.ಎಸ್.ಈಶ್ವರಪ್ಪನವರೇ ಕಾರಣವಾಗಿದ್ದಾರೆ.

ಇಂತಹ ಗುತ್ತಿಗೆದಾರ ಸಂತೋಷ.ಪಾಟೀಲರ ಸಾವಿಗೆ ಕಾರಣರಾದ ಕೆ.ಎಸ್.ಈಶ್ವರಪ್ಪನವರೇ ನೇರವಾಗಿ ಹೊಣೆಯಾಗಿದ್ದಾರೆ. ಇಂತಹ ಕೆ.ಎಸ್.ಈಶ್ವರಪ್ಪನವರನ್ನು ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದೇ ಸಂತೋಷ.ಪಾಟೀಲ ಅವರ ಕುಟುಂಬದವರ ಕಳಕಳಿಯ ಮನವಿಯಾಗಿದೆ. ಈಗ ಹೇಳಿ ಇಲ್ಲಿ ಯಾರು ಗುತ್ತಿಗೆದಾರ ಸಂತೋಷ.ಪಾಟೀಲರನ್ನು ಕೊಂದವರು ಯಾರೆಂದು.!?

ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲು ನಿಗದಿ ಮಾಡಿ ಚುನಾವಣೆ ನಡೆಸಿ: ಪತ್ರೇಶ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here