ಸುರಪುರ:ಹಿಜಾಬ್‌ಗಾಗಿ ದ್ವೀತಿಯ ಪಿಯುಸಿ ಪರೀಕ್ಷೆ ಬಹಿಷ್ಕಾರ

2
36

ಸುರಪುರ: ರಾಜ್ಯದಲ್ಲಿನ ಶಾಲಾ ಕಾಲೇಜು ತರಗತಿಗೆ ಹಾಜರಾಗುವಾಗ ಹಿಜಾಬ್ ಮತ್ತು ಪರೀಕ್ಷೆಗಳಲ್ಲಿ ಹಿಜಾಬ್ ಧರಿಸದಂತೆ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿದ್ದರು ನಗರದ ಪರೀಕ್ಷಾ ಕೇಂದ್ರವೊಂದರಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆಗೆ ಆಗಮಿಸಿದ್ದ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ಪರೀಕ್ಷೆಗೆ ಹಾeರಾಗುವುದಿಲ್ಲ ಎಂದು ಬಹಿಷ್ಕರಿಸಿ ಹೊರನಡೆದ ಘಟನೆ ನಡೆದಿದೆ.

ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ವಿಜ್ಞಾನ ವಿಭಾಗದ ಗಣಿತ ಪರೀಕ್ಷೆ ಸಂದರ್ಭದಲ್ಲಿ ಇಂತಹ ಘಟನೆ ನಡೆದಿದ್ದು ವಿದ್ಯಾರ್ಥಿನಿಯರ ನಡೆಯ ಬಗ್ಗೆ ಈಗ ಚರ್ಚೆಗೆ ಗ್ರಾಸವಾಗಿದೆ.ರಾಜ್ಯದಲ್ಲಿನ ಯಾವುದೇ ಶಾಲಾ ಕಾಲೇಜುಗಳಲ್ಲಿ ತರಗತಿಗೆ ಹಾಜರಾದಾಗ ಅಥವಾ ಪರೀಕ್ಷೆಯ ಸಮಯದಲ್ಲಿ ಹಿಜಾಬ್ ಧರಿಸಬಾರದು ಎಂದು ನ್ಯಾಯಾಲಯ ಸ್ಪಷ್ಟ ಆದೇಶ ಹೊರಡಿಸಿದೆ.

Contact Your\'s Advertisement; 9902492681

ಇದನ್ನೂ ಓದಿ: ಪಿಎಸ್ಐ ಆಕ್ರಮ: ಮತ್ತೋರ್ವ ಆರೋಪಿ ಬಂಧನ

ಆದರೆ ರಂಗಂಪೇಟೆಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಎಂದು ಹೇಳಲಾಗುತ್ತಿದ್ದು,ಈ ವಿದ್ಯಾರ್ಥಿನಿಯರು ಸುರಪುರ ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪರೀಕ್ಷೆಗೆ ಆಗಮಿಸಿದ್ದು,ಅಲ್ಲಿದ್ದ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಹಿಜಾಬ್ ತೆಗೆದು ಗೊತ್ತು ಮಾಡಿರುವ ಕೋಣೆಯಲ್ಲಿಡಿ,ಪರೀಕ್ಷೆ ನಂತರ ಧರಿಸಿ ಹೋಗುವಂತೆ ತಿಳಿಸಿದ್ದಾರೆ.

ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಡಲು ಮೀಸಲಿರಿಸಿದ ಕೋಣೆಯಿಂದಲೇ ಪರೀಕ್ಷಾ ಕೊಠಡಿಗೆ ಹೋಗದೆ ಹೊರನಡೆದಿದ್ದಾರೆ ಎಂದು ಕೇಂದ್ರದ ಮುಖ್ಯಸ್ಥೆ ಸುವರ್ಣಾ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಸಹಕಾರ ಇಲಾಖೆಯಲ್ಲಿ ಲಂಚಾವತಾರ: ಬೆಚ್ಚಿಬೀಳುವ ಮಾಹಿತಿ ಹೊರಗೆಡವಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here