ಸುರಪುರ: ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಪರಿಹರಿಸುವಂತೆ ಆಗ್ರಹಿಸಿ ದೇವಾಪುರ ಗ್ರಾಮದ ಜನರು ಒತ್ತಾಯಿಸುತ್ತಿದ್ದಾರೆ.
ತಾಲೂಕಿನ ದೇವಾಪುರ ಗ್ರಾಮದಲ್ಲಿನ ಬಹುತೇಕ ಎಲ್ಲಾ ಬೋರವೆಲ್‌ಗಳು ಕೆಟ್ಟು ನಿಂತಿದ್ದು ಇದರಿಂದ ಕುಡಿಯುವ ನೀರಿನ ಸಮಸ್ಯೆ ಹಾಗೂ ದಿನ ಬಳಕೆಯ ನೀರಿನ ಸಮಸ್ಯೆ ತೀವ್ರವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ಸುರಪುರ:ಹಿಜಾಬ್‌ಗಾಗಿ ದ್ವೀತಿಯ ಪಿಯುಸಿ ಪರೀಕ್ಷೆ ಬಹಿಷ್ಕಾರ
ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಆಗಮಿಸಿದ ಸಾರ್ವಜನಿಕರು ಗ್ರಾಮದಲ್ಲಿ ಬೋರವೆಲ್‌ಗಳು ಕೆಟ್ಟಿದ್ದರಿಂದಾಗಿ ಫೀಲ್ಟರ್ ನೀರನ್ನೆ ದಿನಬಳಕೆಗೆ ಉಪಯೋಗಿಸುವ ಸ್ಥಿತಿ ಎದುರಾಗಿದೆ.ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳಿಗೆ ಕೇಳಬೇಕೆಂದರೆ ಸಂಪರ್ಕಕ್ಕೆ ಸಿಗುವುದಿಲ್ಲ.ಪಕ್ಕದಲ್ಲಿಯೇ ಕೃಷ್ಣಾ ನದಿ ಇದ್ದರು ಗ್ರಾಮಕ್ಕೆ ನೀರು ಸಿಗುತ್ತಿಲ್ಲ.ಗ್ರಾಮದಲ್ಲಿನ ಇರುವ ಒಂದು ಬಾವಿಯೂ ಸ್ವಚ್ಛವಿಲ್ಲದೆ ನೀರು ಕೆಟ್ಟುಹೋಗಿವೆ.
ಇದರಿಂದ ಗ್ರಾಮದಲ್ಲಿನ ಜನರು ನೀರಿಗಾಗಿ ಪರದಾಡು ಪರಸ್ಥಿತಿ ಉಂಟಾಗಿದೆ.ಆದ್ದರಿಂದ ಕೂಡಲೇ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕು ಇಲ್ಲವಾದಲ್ಲಿ ಇನ್ನೆರಡು ದಿನಗಳ ಕಾಲ ನೋಡಿ ನಂತರ ಗ್ರಾಮದ ಜನರು ಪಂಚಾಯತಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.