ಕಲಬುರಗಿ: 2021-22 ನೇ ಸಾಲಿನ ವಕ್ಫ್ ಸಂಸ್ಥೆಗಳ ಮುತ್ತವಲ್ಲಿ, ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ತಮ್ಮ ವಾರ್ಷಿಕ ಲೆಕ್ಕಪತ್ರವನ್ನು ತಕ್ಷಣವೇ ಕಲಬುರಗಿ ಜಿಲ್ಲಾ ವಕ್ಫ್ ಕಾರ್ಯಾಲಯದಲ್ಲಿ ಸಲ್ಲಿಸಬೇಕು ಎಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರ ದಿನಾಚರಣೆ ಹಿನ್ನೆಲೆಯಲ್ಲಿ 20 ಅಧಿಕಾರಿ-ಸಿಬ್ಬಂದಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ
ವಕ್ಫ್ ಕಾಯ್ದೆ-1995 (ತಿದ್ದುಪಡಿ-2013)ರ ಕಾಯ್ದೆ 46ರ ಪ್ರಕಾರ ನಮೂನೆ-90ರಲ್ಲಿ, ಕಾಯ್ದೆ 44ರ ಪ್ರಕಾರ 2022-23ರ ಬಜೆಟ್ ಎಸ್ಟಿಮೇಟ್ ನಮೂನೆ-72 ಮತ್ತು ಕಾಯ್ದೆ 72ರ ಪ್ರಕಾರ ವಾರ್ಷಿಕ ವಕ್ಫ್ ವಂತಿಕೆ (Wಚಿಞಜಿ ಈuಟಿಜ)ನ್ನು ಕಾರ್ಯಾಲಯಕ್ಕೆ ಸಲ್ಲಿಸಬೇಕು. ತಪ್ಪಿದಲ್ಲಿ ವಕ್ಫ್ ಕಾಯ್ದೆ-1995ರ ಕಾಯ್ದೆ 44,46,72 ಹಾಗೂ 50ರ ಸ್ಪುಟ ಉಲ್ಲಂಘನೆಯಾಗುತ್ತದೆ.
ಈ ಹಿನ್ನೆಲೆಯಲ್ಲಿ ವಕ್ಪ್ ಕಾಯ್ದೆ-1995 (ತಿದ್ದುಪಡಿ-2013)ರ ಪ್ರಕಾರ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.