ಸರ್ಕಾರಿ ನೌಕರರ ದಿನಾಚರಣೆ ಹಿನ್ನೆಲೆಯಲ್ಲಿ 20 ಅಧಿಕಾರಿ-ಸಿಬ್ಬಂದಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ

1
72
  • ಜಿಲ್ಲೆಯ ಅಭಿವೃದ್ಧಿಗೆ ನೌಕರರು ಶ್ರಮಿಸಬೇಕು: ಡಾ. ಉಮೇಶ ಜಾಧವ ಕರೆ

ಕಲಬುರಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿಯೂ ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ತಲಾ ಅದಾಯ ಕಡಿಮೆ ಇದ್ದರೆ, ನಿರುದ್ಯೋಗ, ಅಪೌಷ್ಟಿಕತೆ ಹೆಚ್ಚಿದೆ. ಇದರ ನಿವಾರಣೆಗೆ ಪ್ರತಿಯೊಬ್ಬ ಸರ್ಕಾರಿ ನೌಕರರು ಸಂಕಲ್ಪ ಮಾಡುವುದರ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಬೇಕೆಂದು ಸಂಸದ ಡಾ.ಉಮೇಶ ಜಾಧವ ಅವರು ಕರೆ ನೀಡಿದರು.

ಕಲಬುರಗಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ ಪ್ರಪ್ರಥಮ ಕಲಬುರಗಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಮತ್ತು ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಇಂಗ್ಲೀಷ್ ಭಾಷಾ ದಿನದ ನಿಮಿತ್ತ ಹಕ್ಕುಸ್ವಾಮ್ಯ ದಿನ ಆಚರಣೆ

ಅಧಿಕಾರಿ-ನೌಕರರು ಮನಸ್ಸು ಮಾಡಿದರೆ, ಏನೆಲ್ಲ ಸಾಧಿಸಬಹುದು. ಐ.ಎ.ಎಸ್. ಅಧಿಕಾರಿ ಮತ್ತು ಸರ್ಕಾರಿ ನೌಕರರ ಉತ್ತಮ ಸೇವೆಯಿಂದಲೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಆಡಳಿತ ನೀಡಲು ಸಾಧ್ಯವಾಗಿದಲ್ಲದೆ ವಿಶ್ವನಾಯಕರಾಗಿ ಹೊರಹೊಮ್ಮಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿದ ಮೂರೇ ದಿನದಲ್ಲಿ ಮಹಿಳೆಯೊಬ್ಬಳಿಗೆ ಅನುಕಂಪದ ನೌಕರಿ ನೀಡುವ ಮೂಲಕ ಯಶವಂತ ವಿ. ಗುರುಕರ್ ಅವರು ಸರ್ಕಾರಿ ಸೇವೆ ಹೇಗೆ ಮಾಡಬೇಕು ಎಂಬುದನ್ನು ತೋರಿಸಿದ್ದು, ಅವರು ನೌಕರರಿಗೆ ಮಾದರಿಯಾಗಿದ್ದಾರೆ. ಪ್ರತಿ ಕಡತದಲ್ಲಿ ಪ್ರತಿಯೊಬ್ಬರ ಜೀವನವಿರುತ್ತದೆ ಎಂಬುದನ್ನು ನೌಕರರು ಅರಿಯಬೇಕು ಎಂದರು.

2020ರಲ್ಲಿ ಕೋವಿಡ್ ಮಹಾಮಾರಿಗೆ ತುತ್ತಾಗಿ ಕುಟುಂಬದ ಜೊತೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದಾಗ ಅಲ್ಲಿನ ಆಸ್ಪತ್ರೆಯ ಅಯಾ, ನರ್ಸ್‍ಗಳು ತುಂಬಾ ಕಾಳಜಿಯಿಂದ ಕಂಡಿದನ್ನು ಸ್ಮರಿಸಿದ ಅವರು ಕೋವಿಡ್ ಸಂದರ್ಭದಲ್ಲಿನ ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ನೌಕರರ ಸೇವೆ ಮರೆಯಲಾಗದು. ರಾಜಕೀಯಕ್ಕೆ ಬರುವ ಮುನ್ನ ನಾನು ಸಹ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಿದ್ದು, ನೌಕರರ ಸಮಸ್ಯೆ ಬಲ್ಲವನಾಗಿದ್ದೇನೆ. ನೌಕರರ ದಿನಾಚರಣೆಯು ಉತ್ಸವವಾಗಿ ಅಚರಿಸಬೇಕು. ಪ್ರತಿಯೊಬ್ಬ ನೌಕರರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ವೇದಿಕೆಯಾಗಬೇಕು ಎಂದರು.

ಇದನ್ನೂ ಓದಿ: ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯಲ್ಲಿ ರೈತ ಸಮ್ಮೇಳನ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಮಾತನಾಡಿ, ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಜೀವನದ ಹಂಗು ತೊರೆದು ಕಾರ್ಯನಿರ್ವಹಿಸಿದ ನೌಕರರಿಗೆ ಸರ್ಕಾರವು “ಕೊರೋನಾ ವಾರಿಯರ್ಸ್” ಬಿರುದು ನೀಡಿ ಗೌರವಿಸಿದೆ. ಕಾಯಕದಲ್ಲಿ ಕೈಲಾಸ ಕಂಡ ನಮ್ಮ ನೌಕರರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಅಭಿಪ್ರಾಯ ಹೊಂದಿದ್ದು, ಮುಂದಿನ ದಿನದಲ್ಲಿ ನೌಕರರ ಬಹುದಿನ ಬೇಡಿಕೆಯಾದ 7ನೇ ವೇತನ ಜಾರಿ ಮಾಡುವರು ಎಂಬ ವಿಶ್ವಾಸ ನನಗಿದೆ ಎಂದರು.

ಕಲಬುರಗಿಯನ್ನು ಅಭಿವೃದ್ಧಿ ಪಥದಲ್ಲಿ ಸಾಗಲು ಜನಪ್ರತಿನಿಧಿಗಳು-ನೌಕರರು ಒಟ್ಟಾಗಿ ಟೀಮ್ ರೂಪದಲ್ಲಿ ಕೆಲಸ ಮಾಡೋಣ. ಕಲಬುರಗಿಯಲ್ಲಿ ನೌಕರರ ಭವನ ನಿರ್ಮಾಣಕ್ಕೆ ಎಷ್ಟು ಅನುದಾನ ಬೇಕೋ ಅಷ್ಟು ಹಣ ಸರ್ಕಾರದಿಂದ ದೊರಕಿಸುವ ಪ್ರಯತ್ನ ಮಾಡಲಾಗುವುದು. ಇನ್ನೂ ಬೇಸಿಗೆ ಸಂದರ್ಭದಲ್ಲಿ ಅರ್ಧ ದಿನ ಕಚೇರಿ ನಿರ್ವಹಣೆ ಬಗ್ಗೆಯೂ ಸಿ.ಎಂ. ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ಜಿಲ್ಲೆಯಲ್ಲಿ ರಾಜು ಲೇಂಗಟಿ ಮತ್ತು ರಾಜ್ಯದಲ್ಲಿ ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿ ನೌಕರರ ಸಂಘ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

ಇದನ್ನೂ ಓದಿ: ದತ್ತಾತ್ರೇಯ ಪಾಟೀಲ ರೇವೂರ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಸಾಮಾಗ್ರಿ ವಿತರಣೆ

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮಾತನಾಡಿ ಸರ್ಕಾರಿ ನೌಕರರು ಪಕ್ಷ, ಜಾತಿ, ಧರ್ಮ ಎಂಬುದನ್ನು ನೋಡದೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಪ್ರತಿಯೊಂದು ಪಿಂಚಣಿಯಲ್ಲಿ ವೃದ್ಧರ ಜೀವನ ಅಡಗಿರುತ್ತದೆ. ಸಾಮಾಜಿಕ ಪಿಂಚಣಿ ನೀಡುವುದರಲ್ಲಿ ಜಿಲ್ಲೆಯಲ್ಲಿ ಶೇ.99 ಸಾಧನೆ ತೋರಿದ್ದು, ಶೀಘ್ರ ಶೇ.100 ಗುರಿ ಸಾಧಿಸಲಾಗುವುದು. ಜಿಲ್ಲೆಯ ನೌಕರರು ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದರಿಂದಲೇ ಕಲಬುರಗಿ ಜಿಲ್ಲೆ ಸಕಾಲದಲ್ಲಿ 3ನೇ ಸ್ಥಾನ, ಭೂಮಿ ಕೇಂದ್ರದಲ್ಲಿ 3ನೇ ಸ್ಥಾನ ಹೊಂದಿದೆ. ಸರ್ಕಾರಿ ನೌಕರರು ಅಮೇಜಾನ್, ಫ್ಲಿಫ್ ಕಾರ್ಟ್‍ನಂಥ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಮಾಡುವವರಿಂತ ಹೆಚ್ಚಿನ ಕಾರ್ಯಕ್ಷಮತೆ ಹೊಂದಿದ್ದು, ಹೆಚ್ಚು ಕೆಲಸ ಮಾಡುತ್ತಾರೆ. ಆಶಾ ಕಾರ್ಯಕರ್ತೆಯರು 10 ಸಾವಿರ ವೇತನ ಪಡೆದು, ಅತಿ ಹೆಚ್ಚಿನ ಅದ್ಭುತ ಕಾರ್ಯ ಮಾಡುತ್ತಾರೆ.

ಐಎಎಸ್ ಅಧಿಕಾರಿ ಸೆಲ್ವಂ ಅವರು ರಾತ್ರಿ 3 ಗಂಟೆಗೆ ಜನಸಾಮಾನ್ಯನೊಬ್ಬ ಕರೆ ಮಾಡಿ, ಬಸ್ ನೀಡಿ ಎಂದು ಮನವಿ ಮಾಡಿದಕ್ಕೆ ಆ ಕ್ಷಣವೇ ಸ್ಪಂದಿಸಿ ಬಸ್ ವ್ಯವಸ್ಥೆ ಮಾಡಿದ್ದರು. ಅಂಥವರು ನಮಗೆ ಮಾದರಿ ಆಗಬೇಕು. ಕೆ.ವೈ.ಸಿ ಆಗಿಲ್ಲ ಎಂದು 3 ತಿಂಗಳು ಬಡವರಿಗೆ ಪಡಿತರವನ್ನೇ ನೀಡಿರಲಿಲ್ಲ. ಅದನ್ನು ಬಗೆಹರಿಸಿದ ಸಂತೃಪ್ತಿ ಇದೆ. ಯಾವುದೇ ಕೆಲಸ ಬಂದರೂ ಸರಿಯಾಗಿ ಸ್ಪಂದಿಸಬೇಕು. ಪ್ರೀತಿಯಿಂದ ಜನರ ಮನಸ್ಸು ಗೆಲ್ಲಬೇಕು ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ತಮ್ಮ ಅನುಭವವನ್ನು ಹಂಚಿಕೊಂಡರು.

ಇದನ್ನೂ ಓದಿ: ತೈಲ ಬೆಲೆ ಏರಿಕೆ ವಿರೋಧಿಸಿ ಕರುನಾಡ ವಿಜಯ ಸೇನೆ ಪ್ರತಿಭಟನೆ

ಕಲಬುರಗಿ ನಗರ ಪೆÇಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ ಮಾತನಾಡಿ, ನೌಕರರಿಗೆ ಸೇವಾ ಭದ್ರತೆ ಇರುವುದರಿಂದ ನಿರ್ಭಿತಿಯಿಂದ ಕೆಲಸ ಮಾಡಬೇಕಿದೆ. ಸರ್ಕಾರದ ಯೋಜನೆಗಳು ಪ್ರತಿಯೊಬ್ಬರಿಗೆ ತಲುಪುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಕಲಬುರಗಿಗೆ ಬಂದ ಕೂಡಲೇ ಕಚೇರಿಯಲ್ಲಿನ ನೌಕರರಿಗೆ ಬರಬೇಕಿದ್ದ ಬಾಕಿ ವೇತನ ಬಡ್ತಿ, ಅರಿಯರ್ಸ್ ಕಡತಗಳನ್ನು ಮೊದಲು ವಿಲೇವಾರಿ ಮಾಡಿದೆ. ಜನಪ್ರತಿನಿಧಿಗಳು ಯಾವುದೇ ನಿರ್ದೇಶನ ನೀಡಿದಾಗ ಅದು ಕಾನೂನು ಚೌಕಟ್ಟಿನಲ್ಲಿದ್ದರೆ ತಕ್ಷಣವೇ ಅದನ್ನು ಪೂರ್ಣಗೊಳಿಸಬೇಕು. ಇದರಿಂದ ನೌಕರರ ಬಗ್ಗೆ ಜನಪ್ರತಿನಿಧಿಗಳಿಗೆ ಉತ್ತಮ ಅಭಿಪ್ರಾಯ ಮೂಡುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ದಿಲೀಪ್ ಶಶಿ ಅವರು ಮಾತನಾಡಿ, ಕುಟುಂಬಕ್ಕಿಂತ ನೌಕರರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೇನೆ. ಅಧಿಕಾರಿ-ನೌಕರರು ಎಂಬ ಬೇಧವಿಲ್ಲದೆ ನಾವೆಲ್ಲರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ ಸೇರಿದಂತೆ ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳಾದ ಅಬ್ದುಲ್ ಅಜೀಮ್, ಬಾಬು ಮೌರ್ಯ, ನಿಜಲಿಂಗಪ್ಪ ಕೊರಳ್ಳಿ, ಹಣಮಂತರಾಯ ಗೊಳಸಾರ, ಸತೀಷ್ ಕೆ. ಸಜ್ಜನ್, ಚಂದ್ರಕಾಂತ ಏರಿ, ಗುರುಲಿಂಗಪ್ಪ ಪಾಟೀಲ, ಅಶೋಕ ಶಾಬಾದಿ, ಜಮೀಲ್ ಅಹ್ಮದ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು, ತಾಲೂಕಿನ ಅಧ್ಯಕ್ಷರು-ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ನೌಕರ ಬಾಂಧವರು ಭಾಗವಹಿಸಿದ್ದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಲಬುರಗಿಯಲ್ಲಿ ನಿರ್ಮಿಸಲು ಉದೇಶಿಸಿರುವ ನೌಕರರ ಭವನಕ್ಕೆ ಶಾಸಕ ಮತ್ತು ಸಂಸದರ ನಿಧಿಯಿಂದ ಹೆಚ್ಚಿನ ಅನುದಾನ ನೀಡಬೇಕೆಂದರು. ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಯ್ಯ ಮಠಪತಿ ಅವರು ಸ್ವಾಗತಿಸಿದರು. ಶ್ರೀಕಾಂತ ಫುಲಾÁರಿ ನಿರೂಪಿಸಿದರು. ಅಪರ ಶಿಕ್ಷಣ ಆಯುಕ್ತರ ಕಚೇರಿಯ ವಿಷಯ ಪರಿವೀಕ್ಷಕ ನಾಗೇಂದ್ರ ಔರಾದಿ ಅವರು ಉಪನ್ಯಾಸ ನೀಡಿದರು.

ಇದನ್ನೂ ಓದಿ:ಅಖಿಲ ಕರ್ನಾಟಕ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದಿಂದ ಸಿಎಂಗೆ ಮನವಿ

20 ಅಧಿಕಾರಿ-ನೌಕರರಿಗೆ ಸರ್ವೋತ್ತಮ ನಾಗರಿಕ ಸೇವಾ ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ 20 ಅಧಿಕಾರಿ-ನೌಕರರಿಗೆ ಗಣ್ಯರು ಸರ್ವೋತ್ತಮ ನಾಗರಿಕ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೋವಿಡ್ ಕಾರಣ ಕಳೆದ ವರ್ಷ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ. ಹೀಗಾಗಿ 2020-21 ಸಾಲಿನ 10 ಸೇರಿ ಈ ವರ್ಷ ಒಟ್ಟು 20 ನೌಕರರಿಗೆ ಇಂದು ಸನ್ಮಾನಿಸಲಾಯಿತು.

ಪ್ರಶಸ್ತಿ ಪುರಸ್ಕøತರ ವಿವರ: ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಸಂಗಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ್ ಯು., ಜಿಲ್ಲಾ ಖಜಾನೆ ಉಪನಿರ್ದೇಶಕ ಅಶೋಕ ವಿ., ಕಲಬುರಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಚಿಂಚೋಳಿ ತಹಶೀಲ್ದಾರ ಅಂಜುಮ್ ತಬಸ್ಸುಮ್, ತಹಶೀಲ್ದಾರ ನಾಗಮ್ಮ ಕಟ್ಟಿಮನಿ, ಸೇಡಂ ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಶೀಲ್ದಾರ ಮಹಾಂತಪ್ಪ ಮುಡಬಿ, ಕಾಳಗಿ ತಹಶೀಲ್ದಾರ ನಾಗನಾಥ, ಪ್ರಾದೇಶಿಕ ಆಯುಕ್ತರ ಕಚೇರಿಯ ಶಿರಸ್ತೆದಾರ ರಾಘವೇಂದ್ರ ವಿಭೂತೆ, ಕಲಬುರಗಿ ನಗರ ಮಾಪನ ಭೂದಾಖಲೆ ಸಹಾಯಕ ನಿರ್ದೇಶಕರ ಕಚೇರಿಯ ಸಹಾಯಕ ಅಧೀಕ್ಷಕ ಖಾಜಾ ಬಂದೇನವಾಜ್, ಜಿಲ್ಲಾ ಪಂಚಾಯತಿಯ ಅಕ್ಷರ ದಾಸೋಹ ಯೋಜನೆಯ ಪ್ರಥಮ ದರ್ಜೆ ಸಹಾಯಕ ಸೂರ್ಯಕಾಂತ ಎಸ್. ಹಿಪ್ಪರಗಿ, ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರ ಸಮುದಾಯ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಅಂಬುಜಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಲಬುರಗಿ ಉಪನಿರ್ದೇಶಕರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರವಿ ಎ. ಮಿರಸ್ಕರ್, ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮ ಪಂಚಾಯತಿಯ ಪಿ.ಡಿ.ಓ ಅನುಪಮಾ, ಕಲಬುರಗಿ ಸರ್ಕಾರಿ ಮೆಟ್ರಿಕ್ ಬಾಲಕೀಯರ ವಸತಿ ನಿಲಯದ ನಿಲಯ ಮೇಲ್ವಿಚಾರಕಿ ಲಕ್ಷ್ಮೀ ಕೋರೆ, ಅಫಜಲಪೂರ ತಾಲೂಕಿನ ಗೊಬ್ಬೂರ ಪಿ.ಹೆಚ್.ಸಿ.ಯ ಲ್ಯಾಬ್ ಟೆಕ್ನಿಷಿಯನ್ ಪುಷ್ಪಾ, ಜಿಲ್ಲಾ ಪಂಚಾಯತ್ ಕಚೇರಿಯ ಗ್ರೂಪ್ ‘ಡಿ’ ಸಿಬ್ಬಂದಿ ನಾಗಭೂಷಣ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಗ್ರೂಪ್ ‘ಡಿ’ ಸಿಬ್ಬಂದಿ ಜಗನ್ನಾಥ ಪ್ರಶಸ್ತಿ ಪುರಸ್ಕøತರು. ಪ್ರಶಸ್ತಿಯು ಪ್ರಮಾಣ ಪತ್ರ, ನಗದು ಮೊತ್ತ ಹಾಗೂ ಫಲ-ತಾಂಬೂಲ ಒಳಗೊಂಡಿದೆ.

ಇದನ್ನೂ ಓದಿ: ಕಾರ್ಮಿಕರಿಗೆ ಉಪಕರಣಗಳ ಕಿಟ್ ವಿತರಿಸಲು ಆಗ್ರಹ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here