ಕಲಬುರಗಿ: ವಿಶ್ವ ಮಲೇರಿಯಾ ದಿನಾಚರಣೆ

0
101

ಕಲಬುರಗಿ: ನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲಾ ಆಸ್ಪತ್ರೆ ಕಲಬುರಗಿ ಇವರೆಲ್ಲರ ಸಂಯುಕ್ತಾಶ್ರಯದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಯನ್ನು ಆಚರಣೆ ಮಾಡಲಾಯಿತು.

ಜಿಲಾ ಆಸ್ಪತ್ರೆಯ ಜಿಲ್ಲಾ ಶಸ್ರ್ತಜ್ಞರು ಹಾಗೂ ಅಧಿಕ್ಷರಾದ ಡಾ.ಅಂಬಾರಾಯ ರುದ್ರವಾಡಿ ಇವರ ಜನಜಾಗೃತಿ ಜಾಥಾಗೆ ಹಸಿರು ನಿಶಾನೆಯನ್ನು ತೋರಿಸುವುದರ ಮೂಲಕ ಚಾಲನೆಯನ್ನು ನೀಡಿದರು.ಈ ಸಂದರ್ಬದಲ್ಲಿ ಮಾತನಾಡಿದ ಅವರು ಈಗಾಗಲೇ ಕರ್ನಾಟಕ ರಾಜ್ಯ ಮಲೇರಿಯಾ ನಿರ್ಮೂಲನೆಯತ್ತ ಒಂದು ಮಹತ್ತರ ಹೆಜ್ಜೆಯನ್ನು ಇಡುತ್ತಿದ್ದು, ಈ ಸಂದರ್ಬದಲ್ಲಿ ಆರೋಗ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿಗಳು ಇನ್ನೂ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ಸಕ್ರೀಯ ಸಮೀಕ್ಷೆಯನ್ನು ಮಾಡಿ ಪ್ರಾರಂಬಿಕ ಹಂತದಲ್ಲಿಯೇ ಮಲೇರಿಯಾ ರೋಗಿಗಳನ್ನು ಪತ್ತೆ ಹಚ್ಚುವುದರ ಮೂಲಕ ಮಲೇರಿಯಾ ರೋಗಿಗಳನ್ನು ಪತ್ತೆ ಹಚ್ಚಿ ಅವರಿಗೆ ತೀವ್ರತರ ಚಿಕಿತ್ಸೆಯನ್ನು ನೀಡಿ ಜನರಲ್ಲಿಯ ಮಲೇರಿಯಾ ರೋಗಾಣುಗಳನ್ನು ಹೊಡೆದು ಹಾಕುವಲ್ಲಿ ನಾವು ಮಹತ್ತರವಾದ ಹೆಚ್ಚೆಯನ್ನು ಇಡಬೇಕೆಂದು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಕರೆ ನೀಡಿದರು.

Contact Your\'s Advertisement; 9902492681

ಇದನ್ನೂ ಓದಿ: ನಾಳೆ ಗುಲ್ಬರ್ಗಾ ವಿವಿಯ 39 ಮತ್ತು 40ನೇ ಘಟಿಕೋತ್ಸವ

ಮುಂದುವರೆದು ಮಾತನಾಡುತ್ತಾ ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಒಂದು ಘೋಷವಾಕ್ಯದೊಂದಿಗೆ ಕೆಲಸ ಮಾಡುತ್ತೇವೆ ಹೀಗಾಗಿ ಈ ವರ್ಷದ ಘೋಷ ವಾಕ್ಯ ನೂತನ ವಿಧಾನಗಳನ್ನು ಅಳವಡಿಸುವುದರ ಮೂಲಕ ಮಲೇರಿಯಾ ಕಡಿಮೆ ಮಾಡೋಣ ಹಾಗೂ ಜೀವ ಉಳಿಸೋಣ ಎಂಬದಾಗಿದೆ.ಸಾರ್ವಜನಿಕರು ಕೂಡಾ ಈ ನಿಟ್ಟಿನಲ್ಲಿ ಮಲೇರಿಯಾ ರೋಗವನ್ನು ನಿಯಂತ್ರಣ ಮತ್ತು ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಮಲೇರಿಯಾ ರೋಗ ಬರದಂತೆ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು,ಸೊಲ್ಳ ಪರೆದೆಯನ್ನು ಉಪಯೋಗಿಸುವುದು ಹಾಗೂ ಮನೆಯ ಒಳಗಡೆ ಬೇವಿನ ಸೊಪ್ಪಿನ ಹೊಗೆ ಹಾಕುವುದರ ಮೂಲಕ ಸೊಳ್ಳೆಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಶರಣಬಸಪ್ಪ ಗಣಜಲಖೇಡ ಮಾತನಾಡಿ ವಿಶ್ವ ಮಲೇರಿಯಾ ಮೊಟ್ಟ ಮೊದಲು ಆಫ್ರಿಕಾ ಮಲೇರಿಯಾ ದಿನವನ್ನಾಗಿ ಆಚರಣೆ ಮಾಡುತ್ತಿದ್ದರು ತದನಂತರ ವಿಶ್ವದ ೪೪ ಮಲೇರಿಯಾ ಪೀಡಿತ ದೇಶಗಳೆಲ್ಲ ವಿಶ್ವ ಸಂಸ್ಥೆಯ ಸಭೆಯಲ್ಲಿ ಎಪ್ರೀಲ್ ೨೫ ಈ ದಿನವನ್ನು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಣೆ ಮಾಡಲು ನಿರ್ಧಾರ ಮಾಡಲಾಯಿತು ಈ ದಿನಾಚರಣೆಯ ಒಂದು ಮುಖ್ಯ ಉದ್ದೇಶ ಜನರಲ್ಲಿ ಮಲೇರಿಯಾ ರೋಗದ ಕುರಿತಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸಿ ಸಾರ್ವಜನಿಕರು ಕೂಡಾ ರೋಗವನ್ನು ಹತೋತಿಗೆ ತರವಲ್ಲಿ ಅವರೂ ಪ್ರಮುಖ ಪಾತ್ರವಹಿಸವಂತೆ ಪ್ರೇರೆಪಿಸುವುದಾಗಿದೆ ಹೀಗಾಗಿ ಇಂತಹ ದಿನಾಚರಣೆಗಳಲ್ಲಿ ಎಲ್ಲರೂ ಸಕ್ರೀಯವಾಗಿ ಭಾವಹಿಸಿ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣ ಮಾಡುವಲ್ಲಿ ಎಲ್ಲರೂ ಶ್ರಮ ವಹಿಸಬೇಕೆಂದು ತಿಳಿಸಿದರು.

ಇದನ್ನೂ ಓದಿ: ವಾರ್ಷಿಕ ವರದಿ ಸಲ್ಲಿಸಲು ವಕ್ಫ್ ಸಂಸ್ಥೆಗಳಿಗೆ ಸೂಚನೆ

ಕಾರ್ಯಕ್ರಮ ಅಧಿಕಾರಿಗಳಾದ ಡಾ.ಬಸವರಾಜ ಗುಳಗಿ ಮಾತನಾಡಿ ಕಳೆದ ೫ ವರ್ಷಗಳಿಂದ ಜಿಲ್ಲೆಯಲ್ಲಿ ಮಲೇರಿಯಾ ಪ್ರಕಣಗಳು ಇಳಿಮುಖ ಹಂತದಲ್ಲಿದ್ದು ಮುಂದೆಯೂ ಕೂಡಾ ಇನ್ನೂ ನಿಯಂತ್ರಣ ಮಾಡುವಲ್ಲಿ ಇಲಾಖೆಯ ಸಿಬ್ಬಂದಿಗಳು ಶ್ರಮ ವಹಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರi ಅಧಿಕಾರಿಗಳಾದ ಡಾ.ರಾಜಕುಮಾರ,ಡಾ.ವಿವೇಕಾನಂದ ರೆಡ್ಡಿ,ಐಎಂಎ ಪ್ರತಿನಿಧಿಗಳಾದ ಡಾ.ಶಾಂತೇಶ ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ದೊಡಮನಿ, ಜಿಲ್ಲಾ ಸಮಾಲೋಚಕ ಕಾರ್ಣಿಕ ಕೋರೆ, ಜಿಲ್ಲಾ ಮೇಲ್ವಿಚಾರಕ ಗಣೇಶ ಚಿನ್ನಾಕಾರ, ಸರಕಾರಿ ನೌಕರರ ಸಂಘದ ಕಾರ್ಯಧ್ಯಕ್ಷ ಚಂದ್ರಕಾಂತ ಏರಿ, ಶರಣು ಅರಳಿಮರದ , ಜಿಲ್ಲಾ ನೋಡಲ್ ಪ್ರಯೋಗಶಾಲಾ ತಂತ್ರಜ್ಞ ಲಕ್ಷ್ಮಣ ರಾಠೋಡ ಹಾಗೂ ನರ್ಸಿಂಗ್ ಶಾಲೆ ಪ್ರಾಂಶುಪಾಲರು ಹಾಗು ವಿಧ್ಯಾರ್ಥಿಗಳು ಹಾಗೂ ಇಲಾಖೆಯ ಸಿಬ್ಬಂದಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯಲ್ಲಿ ರೈತ ಸಮ್ಮೇಳನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here