ಗುವಿವಿ ಘಟಿಕೋತ್ಸವ: ಅಷ್ಠಿಗಿಗೆ ಡಾಕ್ಟರೇಟ ಪ್ರದಾನ

0
205

ಕಲಬುರಗಿ: ಅರ್ಥಶಾಸ್ತ್ರ ವಿಷಯದಲ್ಲಿ ಅಂಬಾರಾಯ ಬಿ. ಎಚ್. (ಅಷ್ಠಗಿ) ಮಂಡಿಸಿದ “ಎಸ್ಸೆ ಆನ ಅಗ್ರೀಕಲ್ಚರಲ್ ಕ್ರೆಡಿಟ್ ಇನ ಗುಲ್ಬರ್ಗ ಡಿಸ್ಟ್ರಿಕ್ಟ್ ” ಎಂಬ ಮಹಾಪ್ರಬಂಧಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿ ಇದರ ಕುಲಪತಿಗಳಾದ ಪ್ರೊ. ದಯಾನಂದ ಅಗಸರ ಅವರು  ಇಂದು ನಡೆದ ಗು-ವಿ-ಕ, ದ 39 & 40 ನೇಯ ಘಟಿಕೋತ್ಸವದಲ್ಲಿ ಪಿಎಚ್. ಡಿ (ಡಾಕ್ಟರೇಟ) ಪದವಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ   ಕರ್ನಾಟಕ ರಾಜ್ಯದ  ಘನತೆವೇತ್ತ ರಾಜ್ಯಪಾಲರಾದ ಶ್ರೀ  ಥಾವರಚಂದ ಗೆಹ್ಲೋಟಜಿ, ನ್ಯಾಕ್ ಕಮಿಟಿಯ ನಿರ್ದೇಶಕ ಎಸ್ ಸಿ ಶರ್ಮಾ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ,ಕುಲಸಚಿವ (ಮೌಲ್ಯಮಾಪನ) ಡಾ ಮೇಧಾವಿನಿ ಕಟ್ಟಿ, ಡಾ ವಿ ಟಿ ಕಾಂಬಳೆ, ಡಾ ದಶರಥ ನಾಯಕ, ಡಾ ಗುರುಶ್ರೀಮಲು, ಡಾ ಎಚ್ ಟಿ ಪೋತೆ, ಡಾ ರಮೇಶ ರಾಠೋಡ, ಡಾ.ಕೆ ಲಿಂಗಪ್ಪ, ಸಿಂಡಿಕೇಟ ಹಾಗೂ ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರಾದ ರಾಜು ಕಗ್ಗನಮಡಿ, ಕಲಬುರಗಿ ತಾಲೂಕಾ ಪಂಚಾಯತ ಮಾಜಿ ಅಧ್ಯಕ್ಷರಾದ  ಸುಜಾತಾ ಅಂಬಾರಾಯ ಅಷ್ಠಗಿ, ಸಮಾಜ ಸೇವಕಿ ಡಾ ಪ್ರತಿಮಾ ಕಾಮರೆಡ್ಡಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ ಯಶವಂತರಾಯ ಅಷ್ಠಗಿ,ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here