ಕಲಬುರಗಿ: ಕನ್ನಡ ಅಧ್ಯಯನ ವಿಭಾಗದಲ್ಲಿ ಶಿವರಂಜನ್ ಸತ್ಯಂಪೇಟೆ ಮಂಡಿಸಿದ “ಶರಣರ ಕುರಿತ ಕನ್ನಡ ನಾಟಕಗಳು ” ಎಂಬ ಮಹಾಪ್ರಬಂಧಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ದಯಾನಂದ ಅಗಸರ ಅವರು ಬುಧವಾರ 39 & 40 ನೇ ಘಟಿಕೋತ್ಸವದಲ್ಲಿ ಪಿಎಚ್. ಡಿ (ಡಾಕ್ಟರೇಟ್) ಪದವಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಘನತೆವೇತ್ತ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟಜಿ, ನ್ಯಾಕ್ ಕಮಿಟಿಯ ನಿರ್ದೇಶಕ ಎಸ್ ಸಿ ಶರ್ಮಾ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ,ಕುಲಸಚಿವ (ಮೌಲ್ಯಮಾಪನ) ಡಾ ಮೇಧಾವಿನಿ ಕಟ್ಟಿ, ಡಾ ವಿ ಟಿ ಕಾಂಬಳೆ, ಡಾ ದಶರಥ ನಾಯಕ, ಡಾ ಗುರುಶ್ರೀಮಲು, ಡಾ ಎಚ್ ಟಿ ಪೋತೆ, ಡಾ ರಮೇಶ ರಾಠೋಡ, ಡಾ.ಕೆ ಲಿಂಗಪ್ಪ, ಸಿಂಡಿಕೇಟ ಹಾಗೂ ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರಾದ ರಾಜು ಕಗ್ಗನಮಡಿ, ಕಲಬುರಗಿ ತಾಲೂಕಾ ಪಂಚಾಯತ ಮಾಜಿ ಅಧ್ಯಕ್ಷರಾದ ಸುಜಾತಾ ಅಂಬಾರಾಯ ಅಷ್ಠಗಿ, ಸಮಾಜ ಸೇವಕಿ ಡಾ ಪ್ರತಿಮಾ ಕಾಮರೆಡ್ಡಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ ಯಶವಂತರಾಯ ಅಷ್ಠಗಿ,ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.