ಮಾತು ಕೊಟ್ಟಂತೆ ಕುಡಿಯುವ ನೀರಿನ ಸೌಲಭ್ಯ ನೀಡುವೆ: ಮತ್ತಿಮಡು

0
54

ಶಹಾಬಾದ: ಕಳೆದ ಚುನಾವಣೆಯಲ್ಲಿ ತೊನಸನಹಳ್ಳಿ(ಎಸ್) ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಮಾತು ಕೊಟ್ಟಿದ್ದೆ.ಅದರಂತೆ ನಾಲ್ಕೈದು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ ಹಾಗೂ ಉದ್ಘಾಟನೆಯೂ ಕೈಗೊಳ್ಳಲಾಗುತ್ತದ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ಶ್ರೀ ಸಂಗಮೇಶ್ವರ ಸಂಸ್ಥಾನಮಠದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಗುರು ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ ೧೫ನೇ ವ?ದ ಪಟ್ಟಾಧಿಕಾರ ಮಹೋತ್ಸವದ ನಿಮಿತ್ತ ಶನಿವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ನಮ್ಮ ನಡೆ — ಹಾವೇರಿ ಜಿಲ್ಲೆಯ ಕಾಗಿನೆಲೆ ಕಡೆ

ಈಗಾಗಲೇ ಕುಡಿಯುವ ನೀರಿನ ವ್ಯವಸ್ಥೆಗೆ ೩ ಕೋಟಿ ರೂ.ಅನುದಾನದಲ್ಲಿ ಪೈಪಲೈನ್ ಕಾಮಗಾರಿ ಪೂರ್ಣಗೊಂಡಿದೆ.ನಾಲ್ಕೈದು ದಿನಗಳಲ್ಲಿ ಸರಬರಾಜು ಮಾಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ.ಅಲ್ಲದೇ ತೊನಸನಹಳ್ಳಿ ಸಂಗಮೇಶ್ವರ ಸಂಸ್ಥಾನಮಠದ ಅಭಿವೃದ್ಧಿಗೆ ೧೦ ಲಕ್ಷ ರೂ ಅನುದಾನ ಒದಗಿಸಲಾಗಿದೆ.ಗ್ರಾಮದಿಂದ ಮರತೂರ ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ೨ ಕೋಟಿ ರೂ ಅನುದಾನ, ತೊನಸನಹಳ್ಳಿ ದರ್ಗಾದಿಂದ ಕಡೆಹಳ್ಳಿ ಗ್ರಾಮದ ರಸ್ತೆ ನಿರ್ಮಾಣಕ್ಕೆ ೫ ಕೋಟಿ ಅನುದಾನ,ತೊನಸನಹಳ್ಳಿ ಗ್ರಾಮದಿಂದ ಶಹಾಬಾದನ ಜೇವರ್ಗಿ ವೃತ್ತದವರೆಗಿನ ರಸ್ತೆ ಹಾಗೂ ವಾಡಿ ವೃತದ ಹತ್ತಿರದಿಂದ ರೇಲ್ವೆ ಸೇತುವೆ ಬಳಿಯ ರಸ್ತೆ ನಿರ್ಮಾಣಕ್ಕೆ ೩ಕೋಟಿ ಅನುದಾನ ಒದಗಿಸಲಾಗಿದೆ.ಅಲ್ಲದೇ ಗ್ರಾಮಗಳಲ್ಲಿ ಸಿಸಿ ರಸ್ತೆಯೂ ನಿರ್ಮಾಣ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ನಿಮ್ಮ ಯಾವುದೇ ಸಮಸಯೆಗಳಿರಲಿ ಅದನ್ನು ಪ್ರಾಮಾಣಿಕವಾಗಿ ಬಗೆಹರಿಸುತ್ತೆನೆ ಎಂದು ಹೇಳಿದರು.

ಅಫಜಲಪೂರ ಮಾಜಿ ಶಾಸಕ ಮಾಲಿಕಯ್ಯ ಗುತ್ತೆದಾರ ಮಾತನಾಡಿ,ಮನುಷ್ಯನಲ್ಲಿರುವ ಕಲ್ಮಷ ಮತ್ತು ನ್ಯೂನತೆಗಳನ್ನು ಹೋಗಲಾಡಿಸಲು ಪುರಾಣ ಮತ್ತು ಪ್ರವಚನಗಳು ಸಹಕಾರಿಯಾಗಿವೆ.ಎರಡು ವರ್ಷದಿಂದ ಕೋವಿಡ್ ದಾಳಿಯಿಂದ ಜನರು ತತ್ತರಿಸಿ ಹೋಗಿದ್ದರು.ಮನುಷ್ಯನಿಗೆ ಸೊಕ್ಕು ಜಾಸ್ತಿಯಾಗಿದ್ದರಿಂದ ಕೊರೊನಾ ಎಂಬ ರೋಗ ಬಂದು ಸರಿಯಾದ ಪಾಠ ಕಲಿಸಿದೆ.

ಮೂರು ಅಲೆಗಳ ನಡುವೆ ನಾವು ಹೋಗಬಹುದಿತ್ತೇನೋ, ಆದರೆ ಪೂಜ್ಯರ ಆಶೀರ್ವಾದ ಹಾಗೂ ನಾವು ಮಾಡಿದ ಒಳ್ಳೆಯ ಸತ್ಕರ್ಮಗಳಿಂದ ನಾವು ಬದುಕಿದ್ದೆವೆ ಎಂಬುದು ನನ್ನ ನಂಬಿಕೆ.ಆದ್ದರಿಂದ ಒಳ್ಳೆಯ ಕೆಲಸಗಳು ಯಾವತ್ತಿಗೂ ನಮ್ಮನ್ನು ಕಾಪಾಡುತ್ತವೆ.ಧರ್ಮದ ಹಾದಿಯಲ್ಲಿ ಮತ್ತು ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಬದುಕು ಬಂಗಾರವಾಗುವುದರಲ್ಲಿ ಸಂದೇಹವಿಲ್ಲ ಎಂದರು. ಸಂಗಮೇಶ್ವರ ಸಂಸ್ಥಾನಮಠದ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು ಹಾಗೂ ನಿಲಗಲನ ರೇಣುಕ ಶಾಂತಮಲ್ಲ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಳೆಕುಮಟಗಿಯ ಗುರುಸ್ವಾಮಿ ಶರಣರು, ಯರಗಲ್‌ನ ಸಂಗಮನಾಥ ದೇವರು,ಬಿಜೆಪಿ ಶಹಾಬಾದ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಜಯಶ್ರೀ ಮತ್ತಿಮಡು, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಭಾಗಿರಥಿ ಗುನ್ನಾಪೂರ, ಉದ್ದಿಮೆದಾರರಾದ ಮಲ್ಲಿಕಾರ್ಜುನ.ಎಸ್.ಗೊಳೇದ್,ಮಹಾದೇವ ಬಂದಳ್ಳಿ,ನಿಂಗಣ್ಣಗೌಡ ಮಾಲಿಪಾಟೀಲ, ವಿರೇಶ ರಾಮಶೆಟ್ಟಿ, ಬಸವರಾಜ ಮದ್ರಿಕಿ ವೇದಿಕೆಯ ಮೇಲಿದ್ದರು.

ಇದೇ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮಡು ಮತ್ತು ಅವರ ಧರ್ಮಪತ್ನಿ ಜಯಶ್ರೀ ಬಸವರಾಜ ಮತ್ತಿಮಡು ಅವರಿಗೆ ಸಂಗಮೇಶ್ವರ ಪ್ರಶಸ್ತಿ ಹಾಗೂ ಭರತ ನಾಟ್ಯ ಕಲಾವಿದರಾದ ಕಲಬುರಗಿಯ ಕು.ಆಕಾಂಕ್ಷಾ ಹಾಗೂ ತೊನಸನಹಳ್ಳಿ ಗ್ರಾಮದ ಸಮೃದ್ಧಿ.ಎಮ್. ಗೊಳೇದ್ ಅವರಿಗೆ ಸಗರನಾಡಿನ ನಾಟ್ಯ ಮಯೂರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಅಭಿವೃದ್ಧಿಗೆ ಶಾಸಕ ಮತ್ತಿಮಡು ಸಾಕಷ್ಟು ಶ್ರಮಿಸುತ್ತಿದ್ದಾರೆ.ಅಲ್ಲದೇ ಅವರ ಧರ್ಮ ಪತ್ನಿಯೂ ಕೂಡ ಅವರ ಹೆಗಲಿಗೆ ಹೆಗಲು ಕೊಟ್ಟು ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುತ್ತಿರುವುದು ನೋಡಿದರೇ ಈ ಮತಕ್ಷೇತ್ರಕ್ಕೆ ಶಾಸಕ ಬಸವರಾಜ ಮತ್ತಿಮಡು ಹಾಗೂ ಜಯಶ್ರೀ ಮತ್ತಿಮಡು ಇಬ್ಬರೂ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದೆನಿಸುತ್ತಿದೆ.ಧಾರ್ಮಿಕ ಕ್ಷೇತ್ರಗಳಿಗೆ ಅತಿ ಹೆಚ್ಚು ಅನುದಾನ ನೀಡಿದ್ದು ಹಾಗೂ ರೇಣುಕಾಚಾರ್ಯರ ಜಯಂತಿ ಆಚರಣೆ ಆದೇಶ ನೀಡಿದ್ದು ಬಿಜೆಪಿ ಸರ್ಕಾರ – ದೊಡ್ಡಪ್ಪಗೌಡ ಪಾಟೀಲ ನರಿಬೋಳ ಜೇವರ್ಗಿ ಮಾಜಿ ಶಾಸಕ.

ವಿಶ್ವದಲ್ಲಿಯೇ ನಮ್ಮ ದೇಶದ ಪ್ರಧಾನಿ ಮೋದಿಯವರು ನಂ.೧ ನಾಯಕ ಎಂದು ಹೆಗ್ಗಳಿಕೆ ಪಡೆದಿದ್ದಾರೆ.ಆದರೆ ಅವರಿಗೆ ಇನ್ನೂ ತೃಪ್ತಿಯಿಲ್ಲ.ಕಾರಣ ಅವರು ನಾನು ನಂ.೧ ಬರೋದಲ್ಲ. ದೇಶ ನಂ.೧ ಬರಬೇಕು ಎಂದು ಅವರ ಅಭಿಲಾಷೆಯಾಗಿದೆ ಎಂದರು- ಮಾಲಿಕಯ್ಯ ಗುತ್ತೆದಾರ ಮಾಜಿ ಶಾಸಕ ಅಫಜಲಪೂರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here