- ಮುಸ್ಲಿಂ ಭಾಂದವರಿಗೆ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಇಪ್ತಿಯಾರ ಕೂಟ
ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಶನಿವಾರ ಮುಸ್ಲಿಂ ಭಾಂದವರಿಗೆ ಇಪ್ತಿಯಾರ ಕೂಟ ಏರ್ಪಡಿಸಲಾಗಿತ್ತು.
ರಂಜಾನ್ ತಿಂಗಳು ಪ್ರತಿಯೊಬ್ಬ ಮುಸ್ಲಿಂರಿಗೆ ಪವಿತ್ರ ತಿಂಗಳಾಗಿದ್ದು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗವಾಗಿದೆ. ಅಲ್ಲದೇ ಇದು ಸೌಹಾರ್ದತೆ ಬೆಸೆಯುವ ಸಂಕೇತವಾಗಿದೆ. ಸಾಮೂಹಿಕ ಇಪ್ತಿಯಾರ ಕೂಟಗಳು ಸಾಮರಸ್ಯಕ್ಕೆ ಪೂರಕವಾಗಿವೆ.ಲ ಹಾಗೂ ಪರಸ್ಪರಲ್ಲಿ ಪ್ರೀತಿ, ವಿಶ್ವಾಸ ಗಟ್ಟಿಗೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದು ಬಡಾವಣೆಯ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ತಿಳಿಸಿದರು.
ಇದನ್ನೂ ಓದಿ: ಮಾತು ಕೊಟ್ಟಂತೆ ಕುಡಿಯುವ ನೀರಿನ ಸೌಲಭ್ಯ ನೀಡುವೆ: ಮತ್ತಿಮಡು
ಕಾರ್ಯಕ್ರಮದಲ್ಲಿ ಸಂಜೀವಕುಮಾರ ಶೆಟ್ಟಿ, ಬಾಲಕೃಷ್ಣ ಕುಲಕರ್ಣಿ, ಚಂದ್ರಕಾಂತ ತಳವಾರ, ಡಿ.ವಿ. ಕುಲಕರ್ಣಿ, ಶ್ರೀನಿವಾಸ ಬುಜ್ಜಿ, ರಮೇಶ ಕೋರಿಶೆಟ್ಟಿ, ಮಹ್ಮದ ಮಶಾಕ ಸಾಬ, ಗೌಸ ಅಸ್ಮತ ಅಲಿ ಖಾನ್, ಮಲ್ಲಣ್ಣ ಮಲ್ಲೆದ, ರಮೇಶ ಕಟ್ಕೆ, ಬಸವರಾಜ ಹೆಳವರ ಯಾಳಗಿ, ನರಸಿಂಗ ಕಟ್ಕೆ, ಶಿವಕಾಂತ ಚಿಮ್ಮಾ, ಸಿದ್ದಾರೂಡ ಅಸ್ಟಗಿ, ದಿಲೀಪ್ ಬಕ್ರೆ, ರಾಜಶೇಖರ ಜಕ್ಕಾ, ಎಹತೆ ಶಾಮ್, ಮಹ್ಮದ ಅಪ್ಸರ್, ಮಹ್ಮದ ಇಮ್ರಾನ್, ಮಹ್ಮದ ಅಮಾನ್, ಅಫಾನ ಅಲಿ ಖಾನ್, ಸಯ್ಯದ ಮೈನೂದ್ದಿನ ಜುನೈದಿ, ಶೆಖ್ ಅಲೀಮ್ ಹಾಗೂ ಇನ್ನಿತರರುರು ಭಾಗವಹಿಸಿದ್ದರು.