ವಾರ್ಡ್ ಸಮಿತಿ ರಚನೆಯಿಂದ ಪಾಲಿಕೆ ಸದಸ್ಯರ ಬಲ ಹೆಚ್ಚುವುದು : ಜನಾಗ್ರಹ ಸಂತೋಷ

0
40

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಪ್ರತಿ ವಾರ್ಡಿನಲ್ಲಿ ವಾರ್ಡ ಸಮಿತಿ ರಚನೆಯಿಂದ ವಾರ್ಡ್ ಮಟ್ಟದಲ್ಲಿನ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಪರಿಹರಿಸಲು ,ನಾಗರೀಕರು ಮತ್ತು ಪಾಲಿಕೆ ಅಧಿಕಾರಿಗಳ ನಡುವೆ ಸಮನ್ವಯತೆ ನಂಬಿಕೆ ಉತ್ತಮವಾಗಲು , ನಗರದ ಅಭಿವೃದ್ಧಿಗೆ ವೇಗ ನೀಡಲು ಇದರ ಜೊತೆಜೊತೆಗೆ ಪಾಲಿಕೆ ಸದಸ್ಯರ ಬಲವೂ ಹೆಚ್ಚುವುದು ಎಂದು ಬೆಂಗಳೂರಿನ ಜನಾಗ್ರಹ ಸಂತೋಷ ಅವರು ಹೇಳಿದರು.

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಇನ್ಸ್ಟಿಟ್ಯುಟ್ ಆಫ್ ಇಂಜಿನಿಯರ್ಸ್ ಸಂಸ್ಥೆ ಆಯೋಜಿಸಿದ್ದ  ವಾರ್ಡ್ ಸಮಿತಿ ಜನಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಜನಾಗ್ರಹ ಸಂತೋಷ ನರಗುಂದ ,ಮಹಾತ್ಮ ಗಾಂಧೀಜಿಯವರ ಕನಸಿನ ಸ್ವರಾಜ್ಯ ಈ ಮೂಲಕ ಕಾಣಬಹುದು.ಆಡಳಿತವನ್ನು ಜನರ ಬಳಿಗೆ ತಲುಪಿಸುವ ಯೊಜನೆಯೇ ವಾರ್ಡ್ ಸಮಿತಿಯಾಗಿದ್ದು, ನಗರ ಮತ್ತು ಪಟ್ಟಣಗಳ ಜನರ ಜೀವನ ಮಟ್ಟದಲ್ಲಿ ಸುಧಾರಣೆ ತರುವುದಾಗಿದೆ.

Contact Your\'s Advertisement; 9902492681

ಜನಾಗ್ರಹ ಸಂಸ್ಥೆಯ ವತಿಯಿಂದ ವಾರ್ಡ್ ಸಮಿತಿ ರಚನೆ ಕುರಿತು ರಾಜ್ಯಾದ್ಯಂತ ನಾಗರಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಾರ್ಡ್ ಸಮಿತಿಗಳನ್ನು ಬಲಪಡಿಸಲು ಕೆಲಸ ಮಾಡುತ್ತಿದ್ದೇವೆ. ಸಂಸ್ಥೆಯ ಉದ್ದೇಶ ಸಮಸ್ಯೆಯ ಬಗ್ಗೆ ಚರ್ಚೆ ಮಾಡುವ ಬದಲಾಗಿ, ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುವತ್ತ ಅತ್ಯಂತ ಶ್ರದ್ಧೆಯಿಂದ ಲಾಭ ರಹಿತವಾಗಿ ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿದೆ.

ಮೂಲಸೌಕರ್ಯ ಸೇವೆಗಳು ಮತ್ತು ಪೌರತ್ವದ ಸುಧಾರಣೆಯಿಂದ ಜೀವನ ಮಟ್ಟದಲ್ಲಿ ಬದಲಾವಣೇಯಾಗುತ್ತದೆ.ನಾಗರಿಕರ ಸಹಬಾಗಿತ್ವದೊಂದಿಗೆ ನಗರ ವ್ಯವಸ್ಥೆ  ಮತ್ತು ಸರ್ಕಾರಿ ಅಂಗಗಳಲ್ಲಿ ಸುಧಾರಣೆ ತರಲು ಶ್ರಮಿಸುತ್ತದ್ದೇವೆ. ವಾರ್ಡ್ ಸಮಿತಿ ಕುರಿತು ಮಹತ್ವದ ಅರಿವು ಮೂಡಿಸುವ ಕಾರ್ಯಕ್ರಮ ಸಾರ್ವಜನಿಕರ ಸಹಭಾಗಿತ್ವದಿಂದ ಜನರು ನೀಡುತ್ತಿರುವ ಬೃಹತ್ ಸ್ಪಂದನೆಯಿಂದ ಯಶಸ್ವಿಯಾಗುತ್ತಿದೆ.

ಈ ರೀತಿಯ ಕಾರ್ಯಾಗಾರ/ಸಭೆ ಅಥವಾ ಸಂವಾದಗಳನ್ನು ಆಯೋಜಿಸಲು ಕಲ್ಬುರ್ಗಿ ನಗರದ ಸಂಘ ಸಂಸ್ಥೆಗಳು,ಕಾಲೇಜುಗಳು ಉತ್ಸುಕಾರಾಗಿದ್ದರೆ ಜನಾಗ್ರಹ ಸಂಸ್ಥೆಯ ಸಂಯೋಜಕ ಅಧಿಕಾರಿ ಶ್ರಾವಣಯೋಗಿ ಹಿರೇಮಠ, 99648 90856. ಅವರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಾರ್ಡ್ ಸಮಿತಿಗಳ ಪ್ರಾಮುಖ್ಯತೆಯ ಕುರಿತು ಜನ ಜಾಗೃತಿ ಸಂವಾದ ನಡೆಸಿ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಪ್ರಕ್ರಿಯೆಯ , ಕುರಿತು ವಿವರಿಸಿದರು.ಜನಾಗ್ರಹದ ಸಂಯೋಜಕರಾದ ಶ್ರಾವಣಯೋಗಿ ಹಿರೇಮಠ ಅವರು ಸಂಪೂರ್ಣ ಕಾರ್ಯಕ್ರಮ ಪ್ರಕ್ರಿಯೆಯನ್ನು ಸಂಯೋಜಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ಸ್ಟಿಟ್ಯುಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯ ಕಾರ್ಯದರ್ಶಿ ಹನಮಯ್ಯ ಬೇಲುರೆ ವಹಿಸಿದ್ದರು,ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರು ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here