ಕಲಬುರಗಿ :ಇಲ್ಲಿನ ಹುಮಾನಬಾದ್ ರಸ್ತೆಯ ಗಣೇಶ ನಗರದಲ್ಲಿರುವ ಪ್ರತಿಷ್ಠಿತ ಮಣೂರ ಮಲ್ಟಿಸ್ಪೆμÁಲಿಟಿ ಆಸ್ಪತ್ರೆಯಲ್ಲಿ ಬೀದಿ ಬದಿ ವ್ಯಾಪಾರಿಗಳು, ಚಮ್ಮಾರರು, ತರಕಾರಿ ಮಾರಾಟಗಾರರಿಗೆ, ಹೂವು, ಹಣ್ಣು ವ್ಯಾಪಾರಸ್ಥರಿಗಾಗಿ ನೆರಳುವ ಕಲ್ಪಿಸುವ 200 ಕೊಡೆಗಳನ್ನು ಶಾಸಕಿ ಖನೀಜ್ ಫಾತಿಮಾ ವಿತರಿಸಿದರು.
ಆರೋಗ್ಯ ಸಂಬಂಧಿ ಕೆಲಸ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿ ತೊಡಗಿರುವ ಡಾ. ಫಾರುಖ ಅಹ್ಮದ್ ಅವಿರತ ಶ್ರಮವಹಿಸಿದ್ದಾರೆ. ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವ ಮಣೂರ ಆಸ್ಪತ್ರೆಯ ವೈದ್ಯರ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ನೇತೃತ್ವವಹಿಸಿದ್ದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವೈದ್ಯ ಡಾ. ಫಾರುಖ ಅಹ್ಮದ್ ಮಣೂರ ಮಾತನಾಡಿ, ಬಿಸಿಲಿನ ಬೇಗೆಯಿಂದ ಪಾರಾಗಲು ಹಣ್ಣು ಹಂಪಲು ಮೊರೆ ಹೋಗಬೇಕು. ಯಾವುದಕ್ಕೆ ಕಾರಣಕ್ಕೂ ಸಾರ್ವಜನಿಕರು ಪ್ರಖರ ಬಿಸಿಲಿಗೆ ಮನೆಯಿಂದ ಹೊರಗೆ ಬರಬಾರದು. ಕಲ್ಲಂಗಡಿ, ಕರ್ಬೂಜಾ, ಕಬ್ಬಿನ ಹಾಲು, ಮಜ್ಜಿಗೆ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಂಬ್ಬದ್ಧಿವರ್ಗದವರು ಇದ್ದರು.