ಶಾಸಕ ಗುತ್ತೇದಾರಗೆ ಸಚಿವ ಸ್ಥಾನ ನೀಡಲು ಒತ್ತಾಯ

0
104

ಆಳಂದ: ಸಮ್ಮಿಶ್ರ ಸರ್ಕಾರ ಪತನಗೊಂಡ ಮೇಲೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಶತಸಿದ್ಧವಾಗಿದ್ದು, ಸಚಿವ ಸಂಪುಟದಲ್ಲಿ ಕ್ಷೇತ್ರದ ಶಾಸಕ ಸುಭಾಷ ಗುತ್ತೇದಾರ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಗಡಿ ತಾಲೂಕಿನ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಪಿ. ಗೌಳಿ ಅವರು ಇಂದಿಲ್ಲಿ ರಾಜ್ಯದ ಬಿಜೆಪಿ ವರಿಷ್ಠರಿಗೆ ಆಗ್ರಹಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರ್ಕಾರ ರಚನೆಯಾಗುತ್ತಿರುವುದು ಇಡೀ ರಾಜ್ಯದ ಜನತೆಗೆ ಸಂಭ್ರಮ ಆಚರಿಸುವಂತಾಗಿದೆ. ಇಂಥ ಸಂದರ್ಭದಲ್ಲಿ ಸ್ವಾತಂತ್ರ್ಯ ನಂತರ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಶಾಸಕರಾಗಿ ಗುತ್ತೇದಾರ ಅವರು ಆಯ್ಕೆಯಾಗಿರುವುದು ಕ್ಷೇತ್ರದ ಜನತೆಗೆ ಇನ್ನೂ ಹೆಚ್ಚಿನ ಸಂಭ್ರಮ ಆಚರಿಸುವಂತೆ ಮಾಡಿದೆ ಎಂದರು.
ದೇಶ ಸ್ವಾತಂತ್ರ್ಯವಾಗಿ ಇಷ್ಟು ವರ್ಷವಾದರೂ ಕ್ಷೇತ್ರದಿಂದ ಯಾರೊಬ್ಬರಿಗೂ ಇಂದಿಗೂ ಮಂತ್ರಿ ಸ್ಥಾನ ಕೊಟ್ಟಿಲ್ಲ. ಈ ಬಾರಿ ಪಕ್ಷದ ಸರ್ಕಾರದಲ್ಲಿ ಶಾಸಕ ಗುತ್ತೇದಾರ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಗಡಿಭಾಗದ ನೆಲ,ಜಲ, ಜನಪರ ಅಭಿವೃದ್ಧಿ ಕಾರ್ಯಕ್ಕೆ ಒತ್ತುಕೊಟ್ಟಂತಾಗುತ್ತದೆ ಎಂದರು.

Contact Your\'s Advertisement; 9902492681

ಗುತ್ತೇದಾರ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ, ಅವರ ನೇತೃತ್ವದಲ್ಲಿ ಗ್ರಾಪಂ, ತಾಪಂ, ಜಿಪಂ ಸೇರಿ ಇನ್ನೂಳಿದ ಎಲ್ಲ ಕ್ಷೇತ್ರದ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಜಯಭೇರಿ ಸಾಧಿಸುವ ಮೂಲಕ ಕಾಂಗ್ರೆಸ್ ಮುಕ್ತ ತಾಲೂಕು ಮಾಡಿದ್ದು ಮತ್ತೊಂದು ಮೈಲುಗಲ್ಲಾಗಿದೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಂಘ, ಹಾಲು ಒಕ್ಕೂಟ, ಕೃಷಿ ಪತ್ತಿನ ಸಂಘ ಹೀಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನೇ ಗೆಲ್ಲಿಸುವಲ್ಲಿ ಶಾಸಕರ ಕೊಡುಗೆ ನೀಡಿದ್ದಾರೆ. ೨೦೧೬ರಲ್ಲಿ ಜಿಪಂ ಏಳು ಕ್ಷೇತ್ರದಲ್ಲಿ ಆರು, ತಾಪಂ ೩೦ ಕ್ಷೇತ್ರದಲ್ಲಿ ೨೦, ಪುರಸಭೆ ೨೭ ಕ್ಷೇತ್ರದಲ್ಲಿ ೧೩ ಸದಸ್ಯರನ್ನು ಗೆಲ್ಲಿಸಿ ೨೦೧೮ರ ವಿಧಾನಸಭೆಯಲ್ಲಿ ಅವರು ಕೂಡ ಸ್ವತಃ ಶಾಸಕರಾಗಿ ಗೆದ್ದಿದ್ದಾರೆ. ಅಲ್ಲದೆ,  ಕಳೆದ ಲೋಕಸಭಾ ಚುನಾವಣೆಯಲ್ಲಿ ಆಳಂದ ಮತಕ್ಷೇತ್ರದಿಂದ ೨೮ ಸಾವಿರ ಹೆಚ್ಚಿನ ಮತಗಳು ಬರುವಂತೆ ನೋಡಿಕೊಂಡಿದ್ದು ಹೆಮ್ಮೆಯ ಸಂಗತಿಯಾಗಿ, ರಾಜ್ಯದಲ್ಲೇ ಸಂಪೂರ್ಣವಾಗಿ ಬಿಜೆಪಿಮಯ ಅಧಿಕಾರ ಉಳ್ಳ ತಾಲೂಕು ಯಾವುದಾರರೂ ಇದ್ದರೆ ಅದು ಆಳಂದ ಕ್ಷೇತ್ರವಾಗಿದೆ.

ಹಳ್ಳಿಯಿಂದ ದೆಹಲಿಯವರೆಗೆ ಬಿಜೆಪಿ ಅಧಿಕಾರದಲ್ಲಿರುವಂತೆ ಮಾಡಿರುವ ಜನ ನಾಯಕ ಶಾಸಕ ಸುಭಾಷ ಗುತ್ತೇದಾರ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸ್ವಾತಂತ್ರ್ಯ ಭಾರದಲ್ಲೇ ತಾಲೂಕಿಗೆ ಮೊದಲು ಸಚಿವ ಸ್ಥಾನ ಕೊಟ್ಟಂತಾಗಿ ಈ ಮೂಲಕ ಗಡಿ ಭಾಗದ ಅಭಿವೃದ್ಧಿಗೆ ಒತ್ತುಕೊಟ್ಟ ಕೀರ್ತಿ ಬಿಜೆಪಿ ನಾಯಕರಿಗೆ ಸಲ್ಲುತ್ತದೆ ಎಂದು ಗೌಳಿ ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here