ಬಳ್ಳಾರಿ/ಕಂಪ್ಲಿ: ಕಾರ್ಮಿಕ ಇಲಾಖೆಯ ಯೋಜನೆಗಳನ್ನು ಪಡೆಯಲು ಸೇವಾ ಸಿಂಧು ಸೇವೆಯನ್ನ ಜಾರಿಗೆ ತಂದಿದ್ದು ಈ ಸೇವೆ ಇಲಾಖೆಯಿಂದ ಮಾಡಲಾಗದೆ ಕಾಮನ್ ಸರ್ವಿಸ್ ಸೆಂಟರ್ ಗಳ ಮೂಲಕ ನೋಂದಣಿ, ನವೀಕರಣ, ಹಾಗೂ ಇತರೆ ಸೇವೆಗಳನ್ನು ಮಾಡಲು ಸೂಚಿಸಿದ್ದು, ಅನಧಿಕೃತ ಅಧಿಕ ಹಣ ವಸೂಲಿ ಮಾಡುತ್ತಿರುವ ಸೆಂಟರ್ ಗಳನ್ನೂ ಮುಟ್ಟುಗೋಲು ಹಾಕಬೇಕೆಂದು ಒತ್ತಾಯಿಸಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ವಕೀಲ ಮೋಹನ್ ಕುಮಾರ್ ದಾನಪ್ಪ ನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತ್ತು.
ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಶುಲ್ಕ 25 ರಿಂದ 50 ರುಪಾಯಿ ಇದ್ದರೆ ಸಿಎಸ್ ಸಿ ಸೆಂಟರ್ ಗಳು 200 ರಿಂದ 250 ರವರೆಗೆ ವಸೂಲಿ ಮಾಡುತ್ತಿರುವದನ್ನ ಮತ್ತು ಸರ್ವರ್ ದೋಷದಿಂದ ಎರಡು ಮೂರು ದಿನ ಅಲೆಯುವ ಅನಿವಾರ್ಯತೆಯಿಂದ ಗರಿಷ್ಟ 1 ಸಾವಿರದಿಂದ ಒಂದೂವರೆ ಸಾವಿರದವರೆಗೆ ವ್ಯಯಿಸಬೇಕಾಗಿರುವದರಿಂದ ಸರ್ಕಾರಿ ಯೋಜನೆ ಸೌಲಭ್ಯದ ಸಹವಾಸವೇ ಬೇಡವೆಂದು ಕಾರ್ಮಿಕರು ದೂರ ಉಳಿಯುತಿದ್ದಾರೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸರಕಾರಿ ಯೋಜನೆ ಸಾರ್ವಜನಿಕರಿಗೆ ಸರಳವಾಗಿ ದೊರಕಿಸುವಂತೆ ಸರಕಾರಕ್ಕೆ ಒತ್ತಾಯಿಸಿ ಮತ್ತು ಅನಧಿಕೃತ ಅಧಿಕ ಹಣ ವಸೂಲಿ ಮಾಡುತ್ತಿರುವ ಸೆಂಟರ್ ಗಳನ್ನೂ ಮುಟ್ಟುಗೋಲು” ಹಾಕಿಕೊಳ್ಳುವಂತೆ ಆಗ್ರಹಿಸಿ ಕಂಪ್ಲಿ ತಹಶೀಲ್ದಾರ್ ರೇಣುಕಾ ರವರ ಮುಖಾಂತರ ಕಾರ್ಮಿಕ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಆಯುಕ್ತ, ಬಳ್ಳಾರಿ ಜಿಲ್ಲಾಧಿಕಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಧ್ಯಕ್ಷ ಜೆ.ಕಾಟಂ ರಾಜು, ಕಂಪ್ಲಿ ತಾಲೂಕು ಉಪಾಧ್ಯಕ್ಷ ಕೆ. ಹರ್ಷ, ಕಂಪ್ಲಿ ಕ್ಷೇತ್ರ ಯುವ ಘಟಕ ಅಧ್ಯಕ್ಷ ಹೇಮಂತ್ ಕುಮಾರ್, ಕಾರ್ಮಿಕ ಘಟಕದ ಪಿಸಿ ಈರಣ್ಣ, ಬಷೀರ್ ಸಾಬ್, ಮರೆಣ್ಣ, ಹಾಗೂ ಇತರರು ಪಾಲ್ಗೊಂಡಿದ್ದರು
Mohan Danappa sir Ri Good Work Sir ri