ಕಲಬುರಗಿ: ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ವಾರ್ಡ ಸಮಿತಿ ರಚಿಸಲು ಅರ್ಜಿ ಆಹ್ವಾನಿಸಲಾಗಿತ್ತು. ಅವಧಿ ವಿಸ್ತರಣೆಯಾದರು ನಿಗದಿಯಷ್ಟು ಅರ್ಜಿಗಳು ಸಲ್ಲಿಕೆಯಾಗದ ಕಾರಣ ಜನಾಗ್ರಹ ಸಂಸ್ಥೆಯು ನ್ಯಾಯವಾದಿಗಳ ಸಂಘ, ಇನಸ್ಟಿಟ್ಯುಶನ್ ಆಫ್ ಇಂಜಿನಿಂiiರ್ಸ , ಸ್ಮಾರ್ಟ ಸಿಟಿ ಕ್ಲಬ್, ಕನ್ನಡ ಸಾಹಿತ್ಯ ಪರಿಷತ್ತು ,ರೋಟರಿ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದಾದ್ಯಂತ ವಾರ್ಡ ಸಮಿತಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಒದಿ:ಇದನ್ನೂ ಒದಿ: ಕಲಬುರಗಿ ಪೇಟೆ ಧಾರಣೆ
ನಾಳೆ ಬೆಳಿಗ್ಗೆ ೧೦ ಗಂಟೆಗೆ ಕಲ್ಬುರ್ಗಿ ಜಿಲ್ಲಾಧಿಕಾರಿಗಳಾದ ಯಶ್ವಂತ ಗುರುಕರ್ ಅವರು ಜಿಲ್ಲಾಧಿಕಾರಿಗಳ ಆವರಣದಲ್ಲಿ (ಮಿನಿ ವಿಧಾನಸೌಧ) ವಾರ್ಡ ಸಮಿತಿ ಜಾಗೃತಿ ಅಭಿಯಾನವನ್ನು ಉದ್ದೇಶಿಸಿ ಶುಭನುಡಿಗಳನ್ನಾಡಿ ಅಭಿಯಾನದ ವಾಹನಕ್ಕೆ ಚಾಲನೆ ನೀಡುವರು.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಗರದ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಸಂಯೋಜಕ ಅಧಿಕಾರಿ ಸಂಯೋಜಕ ಅಧಿಕಾರಿ ಹೆಚ್ಚಿನ ಮಾಹಿತಿಗಾಗಿ ೯೯೬೪೮೯೦೮೫೬ ಸಂಖ್ಯೆ ಸಂಪರ್ಕಿಸಲು ಕೋರಿದ್ದಾರೆ.