ನೆಲದ ಭಾಷೆಯನ್ನು ಸಮೃದ್ಧಗೊಳಿಸುವ ಸಂಸ್ಥೆಯೇ ಕಸಾಪ – ಸುರೇಶ ವರ್ಮಾ

0
84
ಕಾರ್ಯಕ್ರಮದಲ್ಲಿ ಅಜೀವ ಸದಸ್ಯರಾದ ಗುಂಡಪ್ಪ ಬೆಳಮಗಿ, ರಾಜಶೇಖರ ಬೇಲೂರ,ಕನಕಪ್ಪ ದಂಡಗುಲಕರ್, ಭೀಮರಾವ ಸುಗೂರ,ಮಲ್ಲಿಕಾರ್ಜುನ ಪೂಜಾರಿ ಅವರನ್ನು ಸತ್ಕರಿಸಲಾಯಿತು.

ಶಹಾಬಾದ: ಜಗತ್ತಿನ ಯಾವ ಭಾಗದಲ್ಲೂ ಕನ್ನಡ ಸಾಹಿತ್ಯ ಪರಿ?ತ್ತಿನ ಮಾದರಿಯಲ್ಲಿ ನೆಲದ ಭಾ? ಸಮೃದ್ಧಗೊಳಿಸುವ ಮತ್ತು ಕನ್ನಡದ ಹಿತ ಬಯಸುವ ಸಂಸ್ಥೆ ಇಲ್ಲವೇ ಇಲ್ಲ ಎಂದು ಶಹಾಬಾದ ತಾಲೂಕ ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.

ಅವರು ಗುರುವಾರ ನಗರದ ಕನ್ನಡ ಭವನದಲ್ಲಿ ಕಸಾಪ ವತಿಯಿಂದ ಆಯೋಜಿಸಲಾದ ಕನ್ನಡ ಸಾಹಿತ್ಯ ಪರಿ?ತ್ತಿನ ೧೦೮ನೇ ಸಂಸ್ಥಾಪನಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಒದಿ:ಕಲಬುಗಿ ಪೇಟೆ ಧಾರಣೆ

ನಾಲ್ವಡಿ ಕೃ?ರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿ?ತ್ತು ಸ್ಥಾಪಿಸುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ. ರಾಜ ಮನೆತನ ಕನ್ನಡ ಕಟ್ಟುವ ಕೆಲಸಕ್ಕೆ ತೊಡಗಿಸಿಕೊಂಡಿದ್ದು ದೂರದೃಷ್ಟಿಯ ಪ್ರತೀಕ ಎಂದು ತಿಳಿಸಿದರು.ನಾಲ್ವಡಿ ಕೃ?ರಾಜ ಒಡೆಯರ್ ಅವರು ಸಾಹಿತ್ಯ ಪರಿ?ತ್ತಿನ ಪ್ರಾರಂಭಿಸುವ ಜೊತೆಗೆ ಕೆ.ಆರ್ ಎಸ್ ನಿರ್ಮಿಸಿದರು. ಶತ-ಶತಮಾನಗಳಿಂದ ಕನ್ನಡ ಮನಸ್ಸುಗಳು ಒಂದೇ ವೇದಿಕೆಯಡಿ ಬರಬೇಕೆಂಬ ಕನಸನ್ನು ಸಾಕಾರಗೊಳಿಸಿದ ಕೀರ್ತಿ ಕನ್ನಡ ಸಾಹಿತ್ಯ ಪರಿ?ತ್ತಿಗೆ ಸಲ್ಲುತ್ತದೆ ಎಂದು ಹೇಳಿದರು.

ಕನ್ನಡ ಮನಸ್ಸುಗಳ ಮೇಲೆ ಕ.ಸಾ.ಪ ಬೀರಿದ ಪ್ರಭಾವ ವಿ?ಯದ ಕುರಿತು ವಿಶೇ? ಉಪನ್ಯಾಸ ನೀಡಿದ ಡಾ. ಶಂಕರ ಸೋಮ್ಯಾಜಿ ಮಾತನಾಡಿ, ನಾಡು, ನುಡಿ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿ?ತ್ತು ತನ್ನದೇ ಆದ ಪಾತ್ರವನ್ನು ಶತಮಾನಗಳಿಂದ ನಿರ್ವಹಿಸಿದ್ದು ಅದರ ಉಳಿವಿಗಾಗಿ ಎಲ್ಲಾ ಕನ್ನಡಿಗರು ಕೈಜೋಡಿಸುವದು ಅನಿವಾರ್ಯವಾಗಿದೆ.ನಾಡು ಮತ್ತು ನುಡಿಯ ವಿಚಾರವಾಗಿ ಹೋರಾಟ ನಡೆಸುವ ನೂರಾರು ಸಂಸ್ಥೆಗಳು ನಮ್ಮಲ್ಲಿದ್ದರೂ ಎಲ್ಲರ ಮೆಚ್ಚುಗೆಗೆ – ಪ್ರೀತಿಗೆ, ಗೌರವಕ್ಕೆ ಒಳಗಾಗಿ ಕನ್ನಡಿಗರ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಸರ್ಕಾರದ ಮಟ್ಟದಲ್ಲಿ ಪರಿಹರಿಸುತ್ತ ಬಂದಿರುವ ಏಕೈಕ ಕನ್ನಡಿಗರ ಸಂಸ್ಥೆ ಕ.ಸಾ.ಪ ಆಗಿದೆ ಎಂದರು.

ಕನ್ನಡ ಮನಸ್ಸುಗಳು ಒಂದೆಡೆ ಸೇರಲು ವೇದಿಕೆಯು ಇಲ್ಲದಿರುವ ದಿನಗಳಲ್ಲಿ ಮಹಾರಾಜ ಕೃ?ರಾಜ ಒಡೆಯರ್ ಹಾಗೂ ದಿವಾನ್ ಸರ್.ಎಂ.ವಿಶ್ವೇಶ್ವರಯ್ಯ ರವರು ನೀಡಿದ ಸಹಕಾರದಿಂದ ಎಚ್.ವಿ.ನಂಜುಂಡರಾವ್, ಕರ್ಪೂರಿ ಶ್ರೀನಿವಾಸರಾವ್, ಬೆಳ್ಳಾವೆ ವೆಂಕಟನಾರಾಣಪ್ಪ ರವರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಸರ್.ಮಿರ್ಜಾ ಇಸ್ಮಾಯಿಲ್ ರವರ ಸಹಕಾರ ಡಿ.ವಿ.ಗುಂಡಪ್ಪ. ಬಿ.ಎಂ.ಶ್ರೀ, ಮಾಸ್ತಿ, ಎ.ಎನ್.ಮೂರ್ತಿರಾವ್, ಜಿ.ನಾರಾಯಣ, ಜಿ.ವೆಂಕಟಸುಬ್ಬಯ್ಯ ನವರ ಮಾರ್ಗದರ್ಶನ ಹಾಗೂ ಅವರ ಸತತ ಶ್ರಮದ ಫಲವಾಗಿ ಪರಿ?ತ್ತು ಆರು ಕೋಟಿ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಯಿತೆಂದು ಅವರು ತಿಳಿಸಿದರು.

ಇದನ್ನೂ ಒದಿ: ವಿಶ್ವಗುರು ಬಸವಣ್ಣನವರ ೮೮೯ನೇ ಜಯಂತಿ ಅಂಗವಾಗಿ ತೋಟಿಲು ತೂಗುವ ಕಾರ್ಯಕ್ರಮ

ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ ಸಭೆಯ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ಮೃತ್ಯುಂಜಯ ಹೀರೆಮಠ, ಬಾಬುರಾವ್ ಪಂಚಾಳ, ಶರಣಗೌಡ ಪಾಟೀಲ ವೇದಿಕೆ ಮೇಲಿದ್ದರು. ಬಸವರಾಜ ಮದ್ರಿಕಿ ಸ್ವಾಗತಿಸಿದರು, ಲೋಹಿತ್ ಕಟ್ಟಿ ನಿರೂಪಿಸಿದರು, ಶರಣು ವಸ್ತ್ರದ ವಂದಿಸಿದರು.

ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗೂಳಕರ್, ಶರಣಗೌಡ ಪಾಟೀಲ್ ಗೋಳಾ, ಮಲ್ಲಿಕಾರ್ಜುನ ಪೂಜಾರಿ, ಅರುಣ್ ಪಟ್ಟಣಕರ್, ಭೀಮರಾವ್ ಸೂಗೂರ, ಗುಂಡಪ್ಪ ಬೆಳಮಗಿ, ರಾಜಶೇಖರ ಬೇಲೂರ, ನಾಗಣ್ಣ ರಾಮಪುರ್,ರಾಜು ಕೋಬಾಳ,ಈರಣ್ಣ ಕಾರ್ಗಿಲ್, ರತನರಾಜ ಕೋಬಾಳಕರ, ದೇವರಮನಿ,ವಿಶ್ವನಾಥ್ ಚಿತ್ತಾಪುರ, ಮಲ್ಲಿಕಾರ್ಜುನ ಇಟಗಿ, ನಿಂಗಪ್ಪ ಹುಳಗೋಳ, ಚೆನ್ನಪ್ಪ ಕುಂಬಾರ, ಭೀಮಯ್ಯ ಗುತ್ತೆದಾರ, ಗಿರಿಮಲ್ಲಪ್ಪಾ ವಳಸಂಗ, ಕಾಶಿನಾಥ್ ಭಾಸ್ಮೆ, ಗುರುಪ್ರಸಾದ್ ಕೋಬಾಳ ಇನ್ನೂ ಅನೇಕ ಉಪಸ್ಥಿತರಿದ್ದರು.

ಇದನ್ನೂ ಒದಿ: ನಕಲಿ ಹೂಡುವಳಿ ತೆರಿಗೆ ಪಡೆದು ವಂಚಿಸುತ್ತಿದ್ದ ಜಾಲದ ಪತ್ತೆ ಹಾಗೂ ಲೆಕ್ಕಪರಿಶೋಧಕನ ಬಂಧನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here