ಕಲ್ಲಿದ್ದಲು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ ಭೂಮಿ ಬಳಸಲಿ

0
84

ಕಲಬುರಗಿ: ತಾಲೂಕಿನ ಫಿರೋಜಾಬಾದ್, ನದಿಸಿಣ್ಣೂರ್, ಹೊನ್ನಕಿರಣಗಿ ಗ್ರಾಮಗಳಲ್ಲಿ ಸೋಲಾರ್ ಪಾರ್ಕ್, ಜವಳಿ ಪಾರ್ಕ್, ಕ್ರೇಡಲ್ ಸಂಸ್ಥೆ ಅಥವಾ ಇನ್ನಿತರ ಯಾವುದೇ ಉದ್ದೇಶಕ್ಕೆ ಜಮೀನು ವರ್ಗಾಯಿಸಬಾರದು. ಯಥಾಪ್ರಕಾರ 1200 ಮೆಗಾವ್ಯಾಟ್ ಕಲ್ಲಿದ್ದಲು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ ಭೂಮಿ ಬಳಕೆ ಮಾಡಿಕೊಳ್ಳಬೇಕು ಎಂದು ಅಫಜಲಪುರ ಶಾಸಕ ಎಂ. ವೈ. ಪಾಟೀಲ್ ನೇತೃತ್ವದ ನಿಯೋಗವು ಶುಕ್ರವಾರ ಜಿಲ್ಲಾಧಿಕಾರಿ ಯಶವಂತ ಗುರುಕರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಪ್ರತಿ ಎಕರೆಗೆ 9 ಲಕ್ಷ ರೂ. ನಂತೆ ಭೂಮಿ ಭೂಸ್ವಾಧೀನಪಡಿಸಿಕೊಂಡಿದ್ದಲ್ಲದೆ, ಭೂಮಿ ಮಾರಾಟ ಮಾಡಿದ ಪ್ರತಿ ಕುಟುಂಬಕ್ಕೆ ಓರ್ವ ಸದಸ್ಯನಿಗೆ ಉದ್ಯೋಗವಕಾಶ ನೀಡಬೇಕು. ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ಹಾಗೂ ಹಿಂದಿನ ಮುಖ್ಯಮಂತ್ರಿಗಳು ಅಶ್ವಾಸನೆ ನೀಡಿರುತ್ತಾರೆ.

Contact Your\'s Advertisement; 9902492681

ಮೂರು ಗ್ರಾಮಗಳ 1,600 ಎಕರೆ ಜಮೀನು ಖರೀದಿಸಿ 11 ವರ್ಷಗಳು ಕಳೆದಿವೆ. ಆದರೆ ಭೂಸ್ವಾಧೀನ ಕಾಯ್ದೆ-2013ರ ತಿದ್ದುಪಡಿ ಪ್ರಕಾರ ಸ್ವಾಧೀನಪಡಿಸಿಕೊಂಡ ಜಮೀನನ್ನು ಐದು ವರ್ಷಗಳಲ್ಲಿ ಕ್ರಮಕೈಗೊಳ್ಳಬೇಕು ಎಂಬ ನಿಯಮಾವಳಿ ಇರುತ್ತವೆ. ಇನ್ನು ಪಕ್ಕದ ಜಮೀನುಗಳನ್ನು ಪ್ರತಿ ಎಕರೆಗೆ 15 ರಿಂದ 50 ಲಕ್ಷ ರೂ. ವರೆಗೆ ಭೂಮಿ ಖರೀದಿಯಾಗಿವೆ. ಹೀಗಾಗಿ, ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಭೂಸಂತ್ರಸ್ತರಾದ ಫಿರೋಜಾಬಾದಿನ ಮಶಾಖ ಪಟೇಲ್, ನದಿಸಿಣ್ಣೂರ ಗ್ರಾಮದ ಧರ್ಮರಾವ್ ಶೆಟ್ಟಿ, ಕಿರಣಗಿಯ ಶಿವಶರಣಪ್ಪ ಕಾಬಾ, ಅಣವೀರಪ್ಪ ಶಿರೂರ್, ಶಿವಯೋಗಪ್ಪ ಪೂಜಾರಿ, ಮಲ್ಲಿಕಾರ್ಜುನ ಧೂಳಬಾ, ಚನ್ನಪ್ಪ, ರೇವಪ್ಪ, ಶಿವಾನಂದ ಕೌಲಗಿ, ಭಗವಂತ ಜತ್ತಿ, ಈಶ್ವರರಾಜ ನಾಶಿ, ನಾಗಣ್ಣ ನೇಲೋಗಿ, ಅಬ್ದುಲ್ ರಶೀದ್, ಶ್ರೀಮಂತ ಸಲಗರ, ಅಶೋಕ, ಮಹಿಬೂಬಸಾಬ್, ಚಾಂದಸಾಬ್, ರಜಾಕ್ ಪಟೇಲ್ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here