ಸೇಂದಿ ಇಳಿಸಿ ಮಾರಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಪಾದಯಾತ್ರೆ

0
45
ಈಡಿಗ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನು ಆರಂಭಿಸಿ / ೫೦೦ ಕೋಟಿ ಹಣ ಮೀಸಲಿಡಿ

ಶಹಾಬಾದ:ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರ,ಯಾದಗಿರಿ ಜಿಲ್ಲೆಗಳಲ್ಲಿ ಸೇಂದಿ ಇಳಿಸಿ ಮಾರಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಈಡಿಗ ಸಮಾಜದ ವತಿಯಿಂದ ಆಯೋಜಿಸಲಾದ ನಮ್ಮ ಕುಲ ಕಸುಬು ನಮ್ಮ ಹಕ್ಕು, ಪ್ರತ್ಯೇಕ ನಿಗಮ ಬೇಕೇ ಬೇಕು ಎಂಬ ಘೋ? ವಾಕ್ಯದೊಂದಿಗೆ ಆರ್ಯ ಈಡಿಗ ಸಮಾಜದ ಗುರುಗಳಾದ ಡಾ.ಪ್ರಣವಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಶಹಾಬಾದ ನಗರಕ್ಕೆ ಬರುತ್ತಿರುವಂತೆ ಸೋಮವಾರ ತಾಲೂಕಾ ಈಡಿಗ ಸಮಾಜದ ಬಾಂಧವರು ರಾಷ್ಟ್ರೀಯ ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿಗಳಿಗೆ ಹಳೆಶಹಾಬಾದನ ವಿಶ್ವರಾಧ್ಯ ಮಂದಿರದಲ್ಲಿ ಸ್ವಾಗತಿಸಿ ಬರಮಾಡಿಕೊಂಡರು.

ನಂತರ ಮಾತನಾಡಿದ ಡಾ.ಪ್ರಣವಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಸಮಾಜದ ಶಾಸಕರಿಗೆ ಮೀಸಲಾತಿಬೇಕು, ಓಟುಬೇಕು. ಆದರೆ, ನಮ್ಮ ಸಮಾಜಕ್ಕಾಗಿ ಧ್ವನಿ ಎತ್ತುತ್ತಿಲ್ಲ. ಈಗಾಗಲೇ ಉಡುಪಿ,ದಕ್ಷಿಣ ಕನ್ನಡ ಭಾಗದಲ್ಲಿ ಸೇಂದಿ ಮಾರಾಟಕ್ಕೆ ಸರಕಾರ ಅನುಮತಿ ನೀಡಿದೆ.ಅದೇ ಮಾದರಿಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.ಸೇಂದಿ ಇಳಿಸುವ ವೃತ್ತಿಯನ್ನೇ ಮಾಡಿಕೊಂಡಿದ್ದ ಕುಟುಂಬಗಳಿಗೆ ಸೇಂದಿ ಮಾರಾಟ ನಿಷೇಧಿಸಿದ ಪರಿಣಾಮ ಬೀದಿಪಾಲಾಗಿ ಚಿಂತಾಕ್ರಾಂತರಾಗಿದ್ದಾರೆ.

Contact Your\'s Advertisement; 9902492681

ಇದನ್ನೂ ಓದಿ: AIMIM ಕಲಬುರಗಿ ಜಿಲ್ಲಾ ಅಧ್ಯಕ್ಷರಾಗಿ ರಹೀಮ್ ಮಿರ್ಚಿ ಪುನಃ ನೇಮಕ

ಅವರಿಗೆ ಪರ್ಯಾಯ ವ್ಯವಸ್ಥೆಯೂ ಕಲ್ಪಿಸಿಲ್ಲ. ಈಡಿಗ ಸಮಾಜವೂ ಅತ್ಯಂತ ಸಂಕ? ಪರಿಸ್ಥಿತಿಯಲ್ಲಿದೆ. ಇನ್ನು ಚಪ್ಪರಮನೆಯಲ್ಲಿ ವಾಸವಾಗಿದ್ದಾರೆ. ಸೇಂದಿ ಇಳಿಸುವುದು ಮತ್ತು ಮಾರಾಟ ಮಾಡುವುದು ದೇವರು ಕೊಟ್ಟ ವರವಾಗಿದೆ. ನಮ್ಮ ಸಮಾಜಕ್ಕೆ ನ್ಯಾಯ ಕೊಡಿಸದಿದಿದ್ದರೆ ಮುಂದಿನ ದಿನಗಳಲ್ಲಿ ಸಮಾಜ ಶಕ್ತಿ ಏನೆಂಬುದು ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅಲ್ಲದೇ ಹೊಸದಾಗಿ ವೈನ್ ಶಾಪ್‌ಗಳಿಗೆ ಲೈಸೆನ್ಸ್ ಕೊಡುವಾಗ ಈಡಿಗ ಸಮಾಜಕ್ಕೆ ಹೆಚ್ಚಿನ ಮೀಸಲಾತಿ ನೀಡಬೇಕು.ಈಡಿಗ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನು ಆರಂಭಿಸಿ ೫೦೦ ಕೋಟಿ ಹಣ ಮೀಸಲಿಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ಆರ್ಯ ಈಡಿಗ ಸಮಾಜ ಜಿಲ್ಲಾಧ್ಯಕ್ಷ ಹಾಗೂ ಪಾದಯಾತ್ರೆ ಉಸ್ತುವಾರಿಗಳಾದ ರಾಜೇಶ ಗುತ್ತೇದಾರ, ಗೌರವಾಧ್ಯಕ್ಷರಾದ ಭಗವಾನ ಗುತ್ತೆದಾರ, ಶಹಬಾದ ತಾಲೂಕಿನ ಆರ್ಯ ಈಡಿಗ ಸಮಾಜದ ಅಧ್ಯಕ್ಷ ಭೀಮಯ್ಯ ಗುತ್ತೆದಾರ, ಉಪಾಧ್ಯಕ್ಷ ಅಶೋಕ್ ಗುತ್ತೆದಾರ, ಸಾಯಿಕುಮಾರ್ ಗುತ್ತೆದಾರ, ವಿಶ್ವರಾಧ್ಯ ಗುತ್ತೆದಾರ, ಶಂಕರ ಗುತ್ತೆದಾರ,ವಿನೋದ ಗುತ್ತೆದಾರ, ಮಲ್ಲು ಗುತ್ತೆದಾರ, ಸುರೇಶ್ ಅಪಕಾರಿ, ಸಂತೋ? ಗುತ್ತೆದಾರ, ರಮೇಶ ಗುತ್ತೆದಾರ, ಶೇಖರ ಗುತ್ತೆದಾರ, ಭೀಮಯ್ಯ ಗುತ್ತೆದಾರ, ಉಮೇಶ ಗುತ್ತೆದಾರ, ಅರುಣ ಗುತ್ತೆದಾರ,ರಾಮ ಗುತ್ತೆದಾರ ಸೇರಿದಂತೆ ಅನೇಕರು ಇದ್ದರು.

ಇದನ್ನೂ ಓದಿ: ಆಜಾನ್ ಮತ್ತು ಭಜನ್ ವಿಚಾರ: ಶಾಂತಿಗೆ ಕೊಳ್ಳಿ ಇಡುತ್ತಿರುವ ಪ್ರಮೋದ್‌ ಮುತಾಲಿಕ್‌ʼರನ್ನು ಒಳಗೆ ಹಾಕಿ: ಮಾಜಿ ಸಿಎಂ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here